AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ವಿನ್ನರ್ ಹೋದಲ್ಲೆಲ್ಲ ಜನ; ಕೆಳಗೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಬಚಾವ್

ಮುನಾವರ್ ಹೋಟೆಲ್​ನಿಂದ ಹೊರ ಬರುತ್ತಿದ್ದಂತೆ ಎಲ್ಲರೂ ಅವರನ್ನು ಮುತ್ತಿಕೊಳ್ಳುವ ದೃಶ್ಯ ವಿಡಿಯೋದಲ್ಲಿ ಇದೆ. ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಎಲ್ಲರೂ ಬಂದು ಮುನಾವರ್​ನ ಮುತ್ತಿಕೊಂಡಿದ್ದಾರೆ.

ಬಿಗ್ ಬಾಸ್ ವಿನ್ನರ್ ಹೋದಲ್ಲೆಲ್ಲ ಜನ; ಕೆಳಗೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಬಚಾವ್
ಮುನಾವರ್
ರಾಜೇಶ್ ದುಗ್ಗುಮನೆ
|

Updated on:Jan 31, 2024 | 2:41 PM

Share

ಬಿಗ್ ಬಾಸ್​ಗೆ (Bigg Boss) ಹೋದರೆ ಜನಪ್ರಿಯತೆ ಹೆಚ್ಚಾಗುತ್ತದೆ. ಇನ್ನು, ಶೋನ ವಿನ್ ಆದರಂತೂ ಕೇಳುವ ಮಾತೇ ಇಲ್ಲ. ‘ಬಿಗ್ ಬಾಸ್ ಹಿಂದಿ ಸೀಸನ್ 17’ ಗೆಲ್ಲುವ ಮೂಲಕ ಮುನಾವರ್ ಫಾರೂಖಿ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಸ್ಟ್ಯಾಂಡಪ್​ ಕಾಮಿಡಿಯನ್ ಆಗಿದ್ದ ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಸಿನಿಮಾ ಆಫರ್​ಗಳೂ ಬರುತ್ತಿವೆ. ಮಂಗಳವಾರ (ಜನವರಿ 30) ಅವರು ಅಬ್ದು ರೋಜಿಕ್ ಜೊತೆ ಊಟಕ್ಕೆ ತೆರಳಿದ್ದಾರೆ. ಈ ವೇಳೆ ಅವರನ್ನು ಎಲ್ಲರೂ ಮುತ್ತಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ವೀರಲ್ ಭಯಾನಿ ಅವರ ಸೋಶಿಯಲ್ ಮೀಡಿಯಾ ಖಾತೆ ಮೂಲಕ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಮುನಾವರ್ ಅವರು ಹೋಟೆಲ್​ನಿಂದ ಹೊರ ಬರುತ್ತಿದ್ದಂತೆ ಎಲ್ಲರೂ ಅವರನ್ನು ಮುತ್ತಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ಮುನಾವರ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಎಲ್ಲರೂ ಬಂದು ಮುನಾವರ್​ನ ಮುತ್ತಿಕೊಂಡಿದ್ದಾರೆ. ಸೆಲ್ಫಿ ಕೇಳಿದ್ದಾರೆ. ಈ ವೇಳೆ ಅವರು ನೆಲಕ್ಕೆ ಬೀಳುವವರಾಗಿದ್ದರು. ಹೇಗೋ ಸುಧಾರಿಸಿಕೊಂಡರು. ಅವರಿಗೆ ಜನರು ಇಷ್ಟೊಂದು ಪ್ರಮಾಣದಲ್ಲಿ ಬಂದಿದ್ದು ನೋಡಿ ಸಿಟ್ಟೇ ಬಂದಿದೆ.

ಭಾನುವಾರ (ಜನವರಿ 28) ಬಿಗ್ ಬಾಸ್ ಫಿನಾಲೆ ನಡೆದಿದೆ. ಮುನಾವರ್ ಕಪ್ ಗೆದ್ದರೆ ಅಭಿಷೇಕ್ ಕುಮಾರ್ ಅವರು ಮೊದಲ ರನ್ನರ್​ ಅಪ್​ ಆದರು. ಮನ್ನಾರಾ ಚೋಪ್ರಾ, ಅಂಕಿತಾ ಲೋಖಂಡೆ ಹಾಗೂ ಅರುಣ್ ಮಾಶೆಟ್ಟಿ ನಂತರದ ಸ್ಥಾನ ಪಡೆದರು. ಕಪ್ ಗೆಲ್ಲದೇ ಇರುವುದನ್ನು ನೋಡಿ ಅಂಕಿತಾಗೆ ಸಿಟ್ಟು ಬಂತು.

ಇದನ್ನೂ ಓದಿ: ಟ್ರೋಫಿ ಗೆದ್ದ ಬಳಿಕ ಸಲ್ಮಾನ್ ಖಾನ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮುನಾವರ್

ಮುನಾವರ್ ಅವರಿಗೆ ಕಪ್ ಜೊತೆ ಹ್ಯೂಂಡೈ ಕ್ರೆಟಾ ಕಾರು ಹಾಗೂ 50 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ಗೆದ್ದ ಖಷಿಯಲ್ಲಿ ಅವರು ನಾನಾ ಕಡೆಗಳಿಗೆ ಭೇಟಿ ನೀಡುತ್ತಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಸ್ಟ್ಯಾಂಡಪ್ ಕಾಮಿಡಿಗಳಲ್ಲಿ ಹಾಸ್ಯ ಮಾಡಿದ್ದರು ಮುನಾವರ್. ‘ಕಪ್ ಗೆಲ್ಲೋದು ಹಾಗಿರಲಿ. ಹತ್ತಿರ ಸುಳಿಯೋಕೂ ಕೊಡಲ್ಲ’ ಎಂದಿದ್ದರು ಸಲ್ಮಾನ್ ಖಾನ್. ಆದಾಗ್ಯೂ ಅವರೇ ಕಪ್ ಗೆದ್ದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:46 am, Wed, 31 January 24