ಹೆಸರು ಬದಲಾಯಿಸಿಕೊಂಡ ಅಜಯ್​ ದೇವಗನ್​; ಇನ್ಮುಂದೆ ಇವರು ಸುದರ್ಶನ್​! ಇಂಥ ನಿರ್ಧಾರ ಯಾಕೆ?

ಇದು ಗಾಸಿಪ್​ ಅಲ್ಲ. ಸ್ವತಃ ಅಜಯ್​ ದೇವಗನ್​ ಅವರೇ ಒಂದು ವಿಡಿಯೋ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಜಯ್​ ಹೇಳಿರುವ ಮಾತು ಕೇಳಿದ ಬಳಿಕ ಫ್ಯಾನ್ಸ್​ ತಲೆಗೆ ಹುಳ ಬಿಟ್ಟಂಗಾಗಿದೆ!

  • TV9 Web Team
  • Published On - 8:32 AM, 26 Mar 2021
ಹೆಸರು ಬದಲಾಯಿಸಿಕೊಂಡ ಅಜಯ್​ ದೇವಗನ್​; ಇನ್ಮುಂದೆ ಇವರು ಸುದರ್ಶನ್​! ಇಂಥ ನಿರ್ಧಾರ ಯಾಕೆ?
ಅಜಯ್​ ದೇವಗನ್​

ಚಿತ್ರರಂಗಕ್ಕೆ ಕಾಲಿಟ್ಟಮೇಲೆ ಬಹುತೇಕರು ಹೆಸರು ಬದಲಾಯಿಸಿಕೊಳ್ಳುತ್ತಾರೆ. ಇನ್ನೂ ಹಲವರು ಬಣ್ಣದ ಲೋಕದಲ್ಲಿ ಹಲವು ವರ್ಷ ಸೈಕಲ್​ ಹೊಡೆದು, ಯಶಸ್ಸು ಸಿಗಲಿಲ್ಲ ಎಂದಾಗ ಹೆಸರು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಆದರೆ ಈಗಾಗಲೇ ಬ್ರ್ಯಾಂಡ್​ ಆಗಿರುವ ಹೆಸರನ್ನು ಚೇಂಜ್​ ಮಾಡಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ಈ ಮಾತು ನಟ ಅಜಯ್​ ದೇವಗನ್​ ಅವರಿಗೆ ಯಾಕೋ ಅನ್ವಯ ಆಗುತ್ತಿಲ್ಲ. ಯಾಕೆಂದರೆ, ಅವರೀಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಅಜಯ್​ ದೇವಗನ್​ ಬದಲಿಗೆ ಸುದರ್ಶನ್​ ಆಗಿದ್ದಾರೆ.

ಇದು ಗಾಸಿಪ್​ ಅಲ್ಲ. ಸ್ವತಃ ಅಜಯ್​ ದೇವಗನ್​ ಅವರೇ ಒಂದು ವಿಡಿಯೋ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಎಲ್ಲ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ. ಅದರಲ್ಲಿ ಅಜಯ್​ ಹೇಳಿರುವ ಮಾತು ಕೇಳಿದ ಬಳಿಕ ಫ್ಯಾನ್ಸ್​ ತಲೆಗೆ ಹುಳ ಬಿಟ್ಟಂಗಾಗಿದೆ!

‘ನಿಮಗೆ ಎಷ್ಟು ಸಲ ಹೇಳಬೇಕು? ಅಜಯ್​ ಅಂತ ಯಾರನ್ನು ಕರೆಯುತ್ತಿದ್ದೀರಿ? ನನ್ನ ಹೆಸರು ಸುದರ್ಶನ್​’ ಎಂದು ಅಜಯ್​ ಹೇಳಿದ್ದಾರೆ. ಅಷ್ಟಕ್ಕೂ ಅವರು ನಿಜವಾಗಿಯೂ ಹೆಸರು ಬದಲಾಯಿಸಿಕೊಂಡಿದ್ದಾರಾ? ಯಾಕೋ ಅನುಮಾನ. ಇದೇ ವಿಡಿಯೋದ ಜೊತೆಗೆ ಅವರು ನೀಡಿದ ಒಂದು ಕ್ಯಾಪ್ಷನ್​ ಮತ್ತು ಹ್ಯಾಶ್​ಟ್ಯಾಗ್​ ಕೂಡ ಗಮನ ಸೆಳೆಯುತ್ತಿದೆ. ಅದರಲ್ಲಿ ಒಂದು ಸುಳಿವನ್ನು ಅವರು ಬಿಟ್ಟುಕೊಟ್ಟಿದ್ದಾರೆ. #EntertainmentKaAllRounder ಎಂಬ ಹ್ಯಾಶ್​ಟ್ಯಾಗ್​ ಜೊತೆ ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ಗೆ ಟ್ಯಾಗ್​ ಮಾಡಿದ್ದಾರೆ.

 

View this post on Instagram

 

A post shared by Ajay Devgn (@ajaydevgn)

ಅಂದರೆ, ಅಜಯ್​ ಓಟಿಟಿ ಪ್ಲಾಟ್​ಫಾರ್ಮ್​ಗೆ ಎಂಟ್ರಿ ನೀಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಅವರು ಯಾವುದೋ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿರಬಹುದು. ಅದರಲ್ಲಿ ಅವರ ಪಾತ್ರದ ಹೆಸರು ಸುದರ್ಶನ್​ ಆಗಿರಬಹುದು. ಅದರ ಪ್ರಚಾರಕ್ಕಾಗಿ ಹೀಗೆಲ್ಲ ಮಾಡಿದ್ದಾರೆ ಎಂದು ಊಹಿಸಲಾಯಿತು. ಅದರ ಬೆನ್ನಲ್ಲೇ ಅವರು ಮತ್ತೊಂದು ವಿಡಿಯೋ ಪೋಸ್ಟ್​ ಮಾಡಿಕೊಂಡಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಜಾಹೀರಾತಿನಲ್ಲಿ ಅಜಯ್​ ನಟಿಸಿದ್ದಾರೆ. ಅದರಲ್ಲಿ ಅವರ ಹೆಸರು ಸುದರ್ಶನ್​. ಸದ್ಯ ಈ ತಮಾಷೆಯ ವಿಡಿಯೋ ವೈರಲ್​ ಆಗುತ್ತಿದೆ.

ಅಜಯ್​ ದೇವಗನ್​ ನಿರ್ಮಾಣ ಮಾಡಿರುವ ‘ದಿ ಬಿಗ್​ ಬುಲ್’ ಸಿನಿಮಾ ಕೂಡ ಓಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. ಈ ಚಿತ್ರದಲ್ಲಿ ಅಭಿಷೇಕ್​ ಬಚ್ಚನ್​ ಪ್ರಮುಖ ಪಾತ್ರ ಮಾಡಿದ್ದಾರೆ. ಹರ್ಷದ್​ ಮೆಹ್ತಾ ನಡೆಸಿದ ಷೇರು ಮಾರ್ಕೆಟ್​ ಹಗರಣವನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.

ಇದನ್ನೂ ಓದಿ: ‘ದಿ ಬಿಗ್​ ಬುಲ್​’ ರಿಲೀಸ್​ ಡೇಟ್​ ಬಹಿರಂಗ; ಇದು ಹರ್ಷದ್​​ ಮೆಹ್ತಾ ಹಗರಣದ ಇನ್ನೊಂದು ವರ್ಷನ್​!