Raj and DK: ‘ಫರ್ಜಿ’ ವೆಬ್ ಸೀರಿಸ್​ಗೆ ‘ಫ್ಯಾಮಿಲಿ ಮ್ಯಾನ್’ ಕನೆಕ್ಷನ್​; ರೆಡಿ ಆಗಲಿದೆ ರಾಜ್​ ಹಾಗೂ ಡಿಕೆ ಯೂನಿವರ್ಸ್​?

Farzi Web Series | Raj and DK: ‘ಫರ್ಜಿ’ ವೆಬ್ ಸರಣಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್​’ ಸೀರಿಸ್​ನ ಪಾತ್ರಗಳ ಬಳಕೆ ಆಗಿದೆ. ಇದರಿಂದ ರಾಜ್ ಹಾಗೂ ಡಿಕೆ ವೆಬ್ ಸೀರಿಸ್ ಲೋಕದಲ್ಲಿ ಯೂನಿವರ್ಸ್​ ಸೃಷ್ಟಿ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Raj and DK: ‘ಫರ್ಜಿ’ ವೆಬ್ ಸೀರಿಸ್​ಗೆ ‘ಫ್ಯಾಮಿಲಿ ಮ್ಯಾನ್’ ಕನೆಕ್ಷನ್​; ರೆಡಿ ಆಗಲಿದೆ ರಾಜ್​ ಹಾಗೂ ಡಿಕೆ ಯೂನಿವರ್ಸ್​?
ರಾಜ್-ಡಿಕೆ ಯೂನಿವರ್ಸ್
Follow us
ಮದನ್​ ಕುಮಾರ್​
|

Updated on: Feb 13, 2023 | 11:04 PM

ಹಾಲಿವುಡ್​ನಲ್ಲಿ ಯೂನಿವರ್ಸ್ ಕಾನ್ಸೆಪ್ಟ್ ಬಳಕೆ ಹೆಚ್ಚಿದೆ. ಯೂನಿವರ್ಸ್ ಎಂದರೆ ಒಂದಷ್ಟು ಸಿನಿಮಾಗಳ ಗುಚ್ಚ ಎನ್ನಬಹುದು. ಆ ಗುಚ್ಚದಲ್ಲಿರುವ ಸಿನಿಮಾಗಳಿಗೆ ಒಂದಲ್ಲಾ ಒಂದು ಕನೆಕ್ಷನ್ ಇರುತ್ತದೆ. ಹಲವು ಪಾತ್ರಗಳು ಬೇರೆ ಬೇರೆ ಸಿನಿಮಾದಲ್ಲಿ ಬಂದು ಹೋಗುತ್ತವೆ. ಈಗ ವೆಬ್ ಸೀರಿಸ್ (Web Series) ಲೋಕದಲ್ಲೂ ಈ ಟ್ರೆಂಡ್ ಶುರುವಾಗಿದೆ. ಖ್ಯಾತ ನಿರ್ದೇಶಕರಾದ ರಾಜ್ ಹಾಗೂ ಡಿಕೆ (Raj and DK) ಈ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಫರ್ಜಿ’ ವೆಬ್​ ಸೀರಿಸ್ (Farzi Web Series) ಇದಕ್ಕೆ ತಾಜಾ ಉದಾಹರಣೆ.

‘ದಿ ಫ್ಯಾಮಿಲಿ ಮ್ಯಾನ್​’ ವೆಬ್ ಸೀರಿಸ್ ಹಿಟ್ ಆಗಿದೆ. ಈ ಸರಣಿಯಲ್ಲಿ ಎರಡು ಸೀಸನ್​ಗಳು ಬಂದಿವೆ. ಈ ಹೋಳಿ ಹಬ್ಬಕ್ಕೆ ಮೂರನೇ ಭಾಗ ಬರಲಿದೆ. ಈ ಸೀರಿಸ್​ನಲ್ಲಿ ಬರುವ ಶ್ರೀಕಾಂತ್ ತಿವಾರಿ ಪಾತ್ರ ಸಖತ್ ಫೇಮಸ್. ಈ ಪಾತ್ರದ ಮ್ಯಾನರಿಸಂ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ‘ಫರ್ಜಿ’ ವೆಬ್ ಸರಣಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್​’ನ ಶ್ರೀಕಾಂತ್ ತಿವಾರಿ ಹಾಗೂ ಚೆಲ್ಲಂ ಪಾತ್ರಗಳ ಬಳಕೆ ಆಗಿದೆ. ಇದರಿಂದ ರಾಜ್ ಹಾಗೂ ಡಿಕೆ ವೆಬ್ ಸೀರಿಸ್ ಲೋಕದಲ್ಲಿ ಯೂನಿವರ್ಸ್​ ಸೃಷ್ಟಿ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಏನಿದು ಫರ್ಜಿ?

ಇದನ್ನೂ ಓದಿ
Image
ಮಿತಿ ಮೀರಿದ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು; ಇಲ್ಲಿದೆ ವೆಬ್​ ಸೀರಿಸ್ ಹೆಸರು
Image
‘ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್​ ಸೀರಿಸ್​; ಆ್ಯಕ್ಷನ್​ನಲ್ಲಿ ಮಿಂಚಲಿದ್ದಾರೆ ಸ್ಯಾಮ್
Image
ವೆಬ್​ ಸೀರಿಸ್​ ನಿರ್ಮಾಣ ಮಾಡಲಿದ್ದಾರೆ ವಿಜಯ್​ ದೇವರಕೊಂಡ; ಹೊಸ ವಿಚಾರ ಬಿಚ್ಚಿಟ್ಟ ನಟ
Image
Web Series : ಈ ವೆಬ್​ ಸೀರೀಸ್​ಗಳು ಎಲ್ಲಿಗೆ ಹೋಗಿ ತಲುಪುತ್ತವೆಯೋ…

‘ಫರ್ಜಿ’ ವೆಬ್ ಸರಣಿಯಲ್ಲಿ ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಪೇಟಿಂಗ್ ಆರ್ಟಿಸ್ಟ್ ಆಗಿ ಶಾಹಿದ್ ಕಪೂರ್ ಗಮನ ಸೆಳೆದಿದ್ದಾರೆ. ಈ ಸರಣಿಯಲ್ಲಿ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ. ಹಣ ಮಾಡಲು ಮುಂದಾಗುವ ಸನ್ನಿ (ಶಾಹಿದ್ ಕಪೂರ್) ಖೋಟಾ ನೋಟು ಮುದ್ರಣಕ್ಕೆ ಕೈ ಹಾಕುತ್ತಾನೆ. ನಂತರ ಏನಾಗುತ್ತದೆ ಅನ್ನೋದು ಈ ಸರಣಿಯ ಕಥೆ. ‘ಫರ್ಜಿ’ಯಲ್ಲಿ ಖೋಟಾನೋಟು ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿಯ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಎರಡು-ಮೂರು ಕಡೆ ತಿವಾರಿ ಪಾತ್ರದ ಹೆಸರು ಉಲ್ಲೇಖ ಆಗುತ್ತದೆ. ಚೆಲ್ಲಂ ಪಾತ್ರದ ಆಗಮನವೂ ಆಗುತ್ತದೆ.

ಇದನ್ನೂ ಓದಿ: ಮಿತಿ ಮೀರಿದ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿಯರು; ಇಲ್ಲಿದೆ ವೆಬ್​ ಸೀರಿಸ್ ಹೆಸರು

ಹೆಚ್ಚಿದ ಯೂನಿವರ್ಸ್​ ಟ್ರೆಂಡ್

ಇತ್ತೀಚೆಗೆ ಭಾರತ ಚಿತ್ರರಂಗದಲ್ಲಿ ಯೂನಿವರ್ಸ್​ ಟ್ರೆಂಡ್ ಹೆಚ್ಚಿದೆ. ಲೋಕೇಶ್ ಕನಗರಾಜ್ ಅವರು ಕಾರ್ತಿ ನಟನೆಯ ‘ಕೈದಿ’ ಹಾಗೂ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರಕ್ಕೆ ಕನೆಕ್ಷನ್ ಇಟ್ಟಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದಳಪತಿ ವಿಜಯ್ ಚಿತ್ರ ‘ಲಿಯೋ’ಗೂ ಈ ಹಿಂದಿನ ಚಿತ್ರಗಳಿಗೂ ಕನೆಕ್ಷನ್ ಇದೆ ಎನ್ನಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್​ ಕೂಡ ಇದೇ ರೀತಿಯ ಯೂನಿವರ್ಸ್ ಸೃಷ್ಟಿ ಮಾಡುವ ಆಲೋಚನೆಯಲ್ಲಿದೆ. ‘ಕೆಜಿಎಫ್ 2’ ಹಾಗೂ ‘ಸಲಾರ್​’ ಚಿತ್ರಕ್ಕೆ ಕನೆಕ್ಷನ್ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್​ ಸೀರಿಸ್​; ಆ್ಯಕ್ಷನ್​ನಲ್ಲಿ ಮಿಂಚಲಿದ್ದಾರೆ ಸ್ಯಾಮ್

ಬಾಲಿವುಡ್​ನಲ್ಲಿ ಸಿದ್ದಾರ್ಥ್ ಆನಂದ್ ಅವರ ‘ವಾರ್​’ ಹಾಗೂ ‘ಪಠಾಣ್​’ ಚಿತ್ರಕ್ಕೆ ಕನೆಕ್ಷನ್ ನೀಡುವ ಪ್ರಯತ್ನ ನಡೆದಿದೆ. ‘ವಾರ್​’ ಚಿತ್ರದಲ್ಲಿ ಹೃತಿಕ್ ರೋಷನ್ ಮಾಡಿರೋ ಕಬೀರ್ ಪಾತ್ರದ ಉಲ್ಲೇಖ ‘ಪಠಾಣ್​’ ಸಿನಿಮಾದಲ್ಲಿ ಆಗುತ್ತದೆ. ಸಿದ್ದಾರ್ಥ್ ಆನಂದ್ ತಮ್ಮ ಸಿನಿಮಾಗಳನ್ನು ಯೂನಿವರ್ಸ್​ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.