AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಯ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಮಿಸ್ ಮಾಡಬೇಡಿ; ಕೊನೆವರೆಗೂ ಕೊಲೆಗಾರನ ಊಹಿಸೋಕಾಗಲ್ಲ

ಈ ಹಿಂದಿ ಸಸ್ಪೆನ್ಸ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ರಾಜ್‌ಕುಮಾರ್ ರಾವ್, ಹುಮಾ ಖುರೇಶಿ ಮತ್ತು ರಾಧಿಕಾ ಆಪ್ಟೆ ಅಭಿನಯಿಸಿರುವ ಈ ಚಿತ್ರವು ಕ್ರೈಮ್ ಮತ್ತು ಥ್ರಿಲ್ಲರ್‌ನ ಅಂಶಗಳನ್ನು ಹೊಂದಿದೆ. ರೋಬೋಟಿಕ್ ಇಂಜಿನಿಯರ್ ಆಗಿರುವ ಜೈ ಕೊಲೆಯಲ್ಲಿ ಭಾಗಿಯಾಗುವುದು ಹಾಗೂ ನಂತರದ ಘಟನೆಗಳು ಕುತೂಹಲ ಮೂಡಿಸುತ್ತವೆ. ಸಸ್ಪೆನ್ಸ್ ಮತ್ತು ಮನರಂಜನೆಯಿಂದ ಕೂಡಿದ ಈ ಸಿನಿಮಾನ ಮಿಸ್ ಮಾಡಲೇಬಾರದು.

ಒಟಿಟಿಯ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಮಿಸ್ ಮಾಡಬೇಡಿ; ಕೊನೆವರೆಗೂ ಕೊಲೆಗಾರನ ಊಹಿಸೋಕಾಗಲ್ಲ
ಮೋನಿಕಾ
ರಾಜೇಶ್ ದುಗ್ಗುಮನೆ
|

Updated on: Sep 02, 2025 | 3:03 PM

Share

ಒಟಿಟಿಯ ವ್ತಾಪ್ತಿ ಈಗ ವಿಸ್ತಾರಗೊಂಡಿದೆ. ಹಲವು ಒಟಿಟಿಗಳು ತಲೆ ಎತ್ತಿವೆ. ಅದೇ ರೀತಿ ವಿವಿಧ ರೀತಿಯ ಸಿನಿಮಾಗಳು, ವೆಬ್ ಸೀರಿಸ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಒಟಿಟಿಯಲ್ಲಿ (OTT) ಸಸ್ಪೆನ್ಸ್, ಕ್ರೈಮ್ ಹಾಗೂ ಥ್ರಿಲ್ಲರ್ ರೀತಿಯ ಸಿನಿಮಾಗಳು ಹೆಚ್ಚು ವೀಕ್ಷಣೆ ಕಾಣುತ್ತವೆ. ಈಗ ಒಟಿಟಿಯಲ್ಲಿರೋ ಈ ಚಿತ್ರವನ್ನು ಮಿಸ್ ಮಾಡಲೇಬೇಡಿ. ಇದರಲ್ಲಿ ಕ್ರೈಮ್​, ಸಸ್ಪೆನ್ಸ್ ಜೊತೆ ಒಂದಷ್ಟು ಫನ್ ಕೂಡ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ಸಿನಿಮಾದ ಹೆಸರು ‘ಮೋನಿಕಾ, ಓ ಮೈ ಡಾರ್ಲಿಂಗ್’. ಈ ಚಿತ್ರ ಹಿಂದಿ ಭಾಷೆಯಲ್ಲಿದೆ. ಜನಪ್ರಿಯ ಒಟಿಟಿ ನೆಟ್​ಫ್ಲಿಕ್ಸ್​ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ. 2022ರ ಚಿತ್ರ ಇದಾಗಿದ್ದು, ಇದನ್ನು ಇನ್ನೂ ವೀಕ್ಷಿಸದೆ ಇರುವವರು ನೋಡಬಹುದು. ಇದರ ರನ್ ಟೈಮ್ 2 ಗಂಟೆ 10 ನಿಮಿಷ ಮಾತ್ರ. ಹೀಗಾಗಿ, ಟೈಮ್​ ಪಾಸ್​ಗೆ ಒಂದೊಳ್ಳೆಯ ಸಿನಿಮಾ ಇದು. ರಾಜ್​ಕುಮಾರ್ ರಾವ್, ಹುಮಾ ಖುರೇಶಿ, ರಾಧಿಕಾ ಆಪ್ಟೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಜೈ (ರಾಜ್​ಕುಮಾರ್ ರಾವ್) ರೋಬೋಟಿಕ್ ಇಂಜಿನಿಯರ್. ಆತನನ್ನು ಕಂಪನಿಗೆ ಸಿಇಒ ಆಗಿ ನೇಮಕ ಮಾಡಲಾಗುತ್ತದೆ. ಆತ ಒಬ್ಬಳನ್ನು ಕೊಲೆ ಮಾಡೋ ಪರಿಸ್ಥಿತಿ ಬರುತ್ತದೆ. ಎಲ್ಲರೂ ಸೇರಿ ಈ ಕೊಲೆ ನಡೆಸುತ್ತಾರೆ. ಅಲ್ಲಿ ಪ್ಲ್ಯಾನ್ ಇದ್ದಿದ್ದೇ ಒಂದು, ಕೊಲೆ ಆಗುವುದೇ ಇನ್ನೊಬ್ಬರದ್ದು. ನಂತರ ಸರಣಿ ಕೊಲೆಗಳು ನಡೆಯುತ್ತವೆ. ಇದನ್ನು ಯಾರು ಮಾಡಿದ್ದು ಎಂಬುದು ಕೊನೆಯವರೆಗೂ ಕುತೂಹಲ ಇರುತ್ತದೆ. ಇದರ ಜೊತೆಗೆ ಇನ್ನೂ ಒಂದಷ್ಟು ಸಸ್ಪೆನ್ಸ್ ವಿಚಾರಗಳು ಸಿನಿಮಾದಲ್ಲಿ ಇವೆ.

ಇದನ್ನೂ ಓದಿ
Image
‘ಕಿತ್ತೋಗಿರೋ ನನ್ಮಕ್ಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’; ಸುದೀಪ್ ಕಿವಿಮಾತು
Image
ಪವನ್ ಕಲ್ಯಾಣ್ ಜನ್ಮದಿನ: 5 ಲಕ್ಷಕ್ಕೆ ಹರಾಜಾಯ್ತು ‘ಒಜಿ’ ಚಿತ್ರದ ಟಿಕೆಟ್
Image
ಮಲಯಾಳಂ ಸಿನಿಮಾದಲ್ಲಿ ಬೆಂಗಳೂರು ಯುವತಿಯರಿಗೆ ಡಗಾರ್ ಪದ ಬಳಕೆ
Image
ನಿಮ್ಮ ಲೈಫ್ ನಿಧಾನ ಎನಿಸುತ್ತಿದೆಯೇ? ಸುದೀಪ್ ಹೇಳಿದ ಈ ಜೀವನ ಪಾಠ ಕೇಳಿ

ಇದನ್ನೂ ಓದಿ: Su From So OTT: ಯಾವ ಒಟಿಟಿಯಲ್ಲಿ ಬರಲಿದೆ ಸೂಪರ್ ಹಿಟ್ ‘ಸು ಫ್ರಮ್ ಸೋ’ ಸಿನಿಮಾ?

ರಾಜ್​ಕುಮಾರ್ ರಾವ್ ಅವರು ನಟನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅವರು ಒಳ್ಳೆಯ ಸ್ಕ್ರಿಪ್ಟ್​ಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಗೆದ್ದಿದ್ದಾರೆ. ಈ ಚಿತ್ರ ಸಖತ್ ಮನರಂಜನೆ ಜೊತೆಗೆ ನಿಮ್ಮನ್ನು ಚೇರ್​ನ ಕೊನೆಯಲ್ಲಿ ಕೂರಿಸುವ ಕೆಲಸವನ್ನು ಕೂಡ ಮಾಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ