AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹ್ಯಾಕರ್ vs ಹ್ಯಾಕರ್; ಈ ಸರಣಿಯನ್ನು ಮಿಸ್ ಮಾಡಲೇಬೇಡಿ

Pritam and Pedro Web Series: ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ಮಿಸಿರುವ ‘ಪ್ರೀತಮ್ ಆ್ಯಂಡ್ ಪೆಡ್ರೊ’ ವೆಬ್ ಸರಣಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಕಾಮಿಡಿ ಮತ್ತು ಸಸ್ಪೆನ್ಸ್ ಸಮ್ಮಿಲನವಾಗಿರುವ ಈ ಸರಣಿ ಗೋವಾದ ಹಿನ್ನೆಲೆಯಲ್ಲಿ ಸಾಗುತ್ತದೆ. ವೀರ್ ಹಿರಾನಿ, ಅರ್ಷದ್ ವಾರ್ಸಿ ಮುಖ್ಯ ಭೂಮಿಕೆಯಲ್ಲಿದ್ದು, ಹಿರಾನಿಯವರ ವಿಶಿಷ್ಟ ಶೈಲಿ, ಮುಗ್ಧ ನಾಯಕನ ಪಾತ್ರಗಳು ಇಲ್ಲಿ ಎದ್ದು ಕಾಣುತ್ತವೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವನ್ನೂ ಹೊಂದಿರುವ ಈ 6 ಎಪಿಸೋಡ್‌ಗಳ ಸರಣಿ ವೀಕ್ಷಿಸಲು ಯೋಗ್ಯವಾಗಿದೆ.

ಹ್ಯಾಕರ್ vs ಹ್ಯಾಕರ್; ಈ ಸರಣಿಯನ್ನು ಮಿಸ್ ಮಾಡಲೇಬೇಡಿ
ಅರ್ಷದ್-ವೀರ್
ರಾಜೇಶ್ ದುಗ್ಗುಮನೆ
|

Updated on: Jul 06, 2026 | 7:29 AM

Share

ಮುಖ್ಯಾಂಶಗಳು

  • ಪ್ರೀತಮ್ ಆ್ಯಂಡ್ ಪೆಡ್ರೊ: ಸೈಬರ್ ಕ್ರೈಮ್ ಜಗತ್ತಿನಲ್ಲಿ ಹಳೇ ತಲೆಮಾರಿನ ಪೊಲೀಸ್ ಅಧಿಕಾರಿಯ ಕಾಮಿಡಿ ಕಸರತ್ತು
  • ಭಾವನಾತ್ಮಕ ಸಂದೇಶ ಸಾರುವ ಸಸ್ಪೆನ್ಸ್ ಕಥೆ
  • ವೀರ್ ಹಿರಾನಿ ಮತ್ತು ಅರ್ಷದ್ ವಾರ್ಸಿ ಜುಗಲ್‌ಬಂದಿ

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ (Rajkumar Hirani) ನಿರ್ಮಾಪಕನಾಗಿ ಒಟಿಟಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರ ಹೊಸ ವೆಬ್ ಸೀರೀಸ್ ‘ಪ್ರೀತಮ್ ಆ್ಯಂಡ್ ಪೆಡ್ರೊ’ ಜಿಯೋ ಹಾಟ್​ಸ್ಟಾರ್​​ನಲ್ಲಿ ಪ್ರಸಾರ ಆರಂಭಿಸಿದೆ ಕಾಮಿಡಿ ಜೊತೆಗೆ ಒಂದಷ್ಟು ಸಸ್ಪೆನ್ಸ್​​ಗಳ ಮೂಲಕ ಈ ವೆಬ್ ಸರಣಿ ಗಮನ ಸೆಳೆಯುತ್ತಾ ಇದೆ. ಹಾಗಾದರೆ, ಈ ಸರಣಿ ಹೇಗಿದೆ? ಆ ಬಗ್ಗೆ ಇಲ್ಲಿದೆ ವಿವರ.

ಇದು ಗೋವಾದಲ್ಲಿ ನಡೆಯುವ ಕಥೆ. ಪ್ರೀತಮ್ (ವೀರ್ ಹಿರಾನಿ) ಎಂಬ ಯುವಕ ಕಳೆದು ಹೋದ ರೇಡಿಯೋ ಬಗ್ಗೆ ಕಂಪ್ಲೇಟ್ ಕೊಡಲು ಪೊಲೀಸ್ ಸ್ಟೇಷನ್​ಗೆ ಬರುತ್ತಾನೆ. ಪೊಲೀಸ್ ಪೇದೆಗೆ ಹೆದರಿಸಿ ಜೈಲು ಸೇರುತ್ತಾನೆ. ಅದೇ ಪೊಲೀಸ್ ಸ್ಟೇಷನ್‌ನಲ್ಲಿ ಪೆಡ್ರೊ (ಅರ್ಶದ್ ವಾರ್ಸಿ) ಇನ್ಸ್‌ಪೆಕ್ಟರ್ ಆಗಿರುತ್ತಾನೆ. ಅಷ್ಟರಲ್ಲಿ ಅಲ್ಲಿ ಒಂದು ಹೈ ಪ್ರೊಫೈಲ್ ಎಟಿಎಂ ಕಳ್ಳತನದ ಕೇಸ್ ಬರುತ್ತದೆ. ಪೊಲೀಸರಿಗೆ ಅದನ್ನು ಹೇಗೆ ಪತ್ತೆ ಹಚ್ಚಬೇಕೆಂದು ತಿಳಿಯುವುದಿಲ್ಲ. ಆಗ ಪ್ರೀತಮ್ ರೇಡಿಯೋ ಹುಡುಕಿ ಕೊಟ್ಟರೆ ಕಳ್ಳರನ್ನು ಹಿಡಿದುಕೊಡುವುದಾಗಿ ಹೇಳುತ್ತಾನೆ. ಕಂಪ್ಯೂಟರ್ ಬಳಸಿ ಕೇವಲ ಹತ್ತು ನಿಮಿಷಗಳಲ್ಲಿ ಕಳ್ಳರ ಜಾಗ ಪತ್ತೆ ಹಚ್ಚುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ಪೆಡ್ರೊ ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾವಣೆ ಆಗುತ್ತಾನೆ. ಆಗಲೇ ಕ್ರೀಡಾ ಸಚಿವರ ಮಗ ನಾಪತ್ತೆಯಾಗುತ್ತಾನೆ. ಆ ಬಳಿಕ ಕಥೆ ಶುರು.

ರಾಜ್‌ಕುಮಾರ್ ಹಿರಾನಿ ಶೈಲಿ

ಈ ಸರಣಿಯಲ್ಲಿ ಒಟ್ಟು 6 ಎಪಿಸೋಡ್‌ಗಳಿವೆ. ಪ್ರತಿ ಎಪಿಸೋಡ್ ಸರಾಸರಿ 35 ನಿಮಿಷ ಇದೆ. ಈ ಸರಣಿಯನ್ನು ‘ಪಾತಾಳ್ ಲೋಕ್’ ಖ್ಯಾತಿಯ ಅವಿನಾಶ್ ಅರುಣ್ ಧವಾರೆ ನಿರ್ದೇಶಿಸಿದ್ದಾರೆ. ಆದರೆ ಇದರಲ್ಲಿ ರಾಜ್‌ಕುಮಾರ್ ಹಿರಾನಿ ಅವರ ಹಳೇ ಶೈಲಿಯೇ ಎದ್ದು ಕಾಣುತ್ತದೆ. ಹಿರಾನಿ ಅವರ ಎಂದಿನ ಸಿನಿಮಾಗಳಂತೆ ಇಲ್ಲೂ ಒಬ್ಬ ಮುಗ್ಧ ಹೀರೊ ಇರುತ್ತಾನೆ.

ಮುನ್ನಾಭಾಯ್, ಪಿಕೆ ಅಥವಾ ರಾಂಚೋ ತರಹ ಪೆಡ್ರೊ ಕೂಡ ಒಬ್ಬ ಮುಗ್ಧ ಪೊಲೀಸ್ ಅಧಿಕಾರಿ. ಭಾವನಾತ್ಮಕ ಮಾತುಗಳ ಮೂಲಕವೇ ಅವನು ಅಪರಾಧಿಗಳ ಮನಸ್ಸು ಬದಲಾಯಿಸುತ್ತಾನೆ. ಸೂಸೈಡ್ ಮಾಡಿಕೊಳ್ಳಲು ಹೋಗುವ ವ್ಯಕ್ತಿಯನ್ನು ತನ್ನ ಮಾತಿನಿಂದಲೇ ಕಾಪಾಡುತ್ತಾನೆ. ಇದನ್ನು ನೋಡುವಾಗ ನಮಗೆ ‘ಆಲ್ ಈಸ್ ವೆಲ್’ ನೆನಪಾಗುತ್ತದೆ. ಅತ್ತ, ಕಾಲೇಜು ಕಥೆ, ಆತ್ಮಹತ್ಯೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೆಲವು ದೃಶ್ಯಗಳು ಕರ್ನಾಟಕದಲ್ಲೂ ಸಾಗುತ್ತವೆ. ಒಂದೊಳ್ಳೆಯ ಸರಣಿ ನೋಡಬೇಕು ಎಂದರೆ ಇದನ್ನು ವೀಕ್ಷಿಸಬಹುದು.

ಇದನ್ನೂ ಓದಿ: ಸೋಲಿಗೆ ವಿಚಿತ್ರ ಕಾರಣ ಕೊಟ್ಟರಾ ರಾಜ್‌ಕುಮಾರ್ ಹಿರಾನಿ; ನೆಟ್ಟಿಗರ ಆಕ್ರೋಶ

ರಾಜ್​ಕುಮಾರ್ ಹಿರಾನಿ ಮಗ ವೀರ್ ಹಿರಾನಿ ಅವರು ನಟನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ ಅವರ ನಟನೆ ಕೂಡ ಇಷ್ಟ ಆಗುತ್ತದೆ. ಇನ್ನು ಕೆಲವು ವಿಶೇಷ ಅತಿಥಿ ಪಾತ್ರಗಳು ಚಿತ್ರದಲ್ಲಿ ಗಮನ ಸೆಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ