ಪವನ್​ ಕಲ್ಯಾಣ್​ ಜನ್ಮದಿನಕ್ಕೆ ಸೆ.2ರಂದು ‘ಓಜಿ’ ಚಿತ್ರತಂಡದಿಂದ ಸಿಗುವ ಗಿಫ್ಟ್​ ಏನು?

‘ಓಜಿ’ ಸಿನಿಮಾದ ಟೀಸರ್​ ನೋಡಿ ಪವನ್​ ಕಲ್ಯಾಣ್ ಅಭಿಮಾನಿಗಳು ವಾವ್​ ಎಂದಿದ್ದರು. ಈಗ ಮೊದಲ ಸಾಂಗ್​ ನೋಡುವ ಸಮಯ ಹತ್ತಿರವಾಗಿದೆ. ಪವನ್​ ಕಲ್ಯಾಣ್​ ಹುಟ್ಟುಹಬ್ಬದ ಸಲುವಾಗಿ ಸೆಪ್ಟೆಂಬರ್​ 2ರಂದು ‘ಓಜಿ’ ಚಿತ್ರದಿಂದ ಸಾಂಗ್​ ರಿಲೀಸ್​ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಸಿನಿಮಾಗೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದು, ಸುಜೀತ್​ ನಿರ್ದೇಶನ ಮಾಡುತ್ತಿದ್ದಾರೆ.

ಪವನ್​ ಕಲ್ಯಾಣ್​ ಜನ್ಮದಿನಕ್ಕೆ ಸೆ.2ರಂದು ‘ಓಜಿ’ ಚಿತ್ರತಂಡದಿಂದ ಸಿಗುವ ಗಿಫ್ಟ್​ ಏನು?
ಪವನ್​ ಕಲ್ಯಾಣ್​
Follow us
ಮದನ್​ ಕುಮಾರ್​
|

Updated on: Aug 21, 2024 | 5:38 PM

ಟಾಲಿವುಡ್​ ನಟ, ರಾಜಕಾರಣಿ ಪವನ್​ ಕಲ್ಯಾಣ್​ ಅವರಿಗೆ ಈ ವರ್ಷದ ಹುಟ್ಟುಹಬ್ಬ ಸಖತ್​ ವಿಶೇಷವಾಗಿರಲಿದೆ. ಯಾಕೆಂದರೆ, ಈ ವರ್ಷ ಅವರಿಗೆ ರಾಜಕೀಯದಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮುಖ ಖಾತೆಗಳ ಜವಾಬ್ದಾರಿಯನ್ನು ಕೂಡ ಅವರು ನಿಭಾಯಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಆದ ಬಳಿಕ ಆಚರಿಸಿಕೊಳ್ಳಲಿರುವ ಮೊದಲ ಬರ್ತ್​ಡೇ ಆದ್ದರಿಂದ ಅವರಿಗೆ ಇದು ವಿಶೇಷ. ಅಭಿಮಾನಿಗಳು ಕೂಡ ಈ ವರ್ಷ ಭರ್ಜರಿಯಾಗಿ ಬರ್ತ್​ಡೇ ಆಚರಿಸಲು ಸಜ್ಜಾಗಿದ್ದಾರೆ.

ಸೆಪ್ಟೆಂಬರ್​ 2ರಂದು ಪವನ್​ ಕಲ್ಯಾಣ್​ ಜನ್ಮದಿನ. ಅಂದು ಅವರ ಅಭಿಮಾನಿಗಳಿಗೆ ಒಂದು ಸ್ಪೆಷಲ್ ಗಿಫ್ಟ್​ ಸಿಗಲಿದೆ. ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ, ಸಿನಿಮಾಗೆ ಸಂಬಂಧಿಸಿದ್ದು. ಹೌದು, ಪವನ್​ ಕಲ್ಯಾಣ್​ ನಟನೆಯ ‘ಓಜಿ’ ಚಿತ್ರತಂಡದವರು ಹುಟ್ಟುಹಬ್ಬದ ಪ್ರಯುಕ್ತ ಮೊದಲ ಸಾಂಗ್​ ಬಿಡುಗಡೆ ಮಾಡಲು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡದವರಿಂದ ಖಚಿತತೆ ಸಿಕ್ಕಿದೆ.

ಸುಜೀತ್​ ಅವರು ‘ಓಜಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಡಿವಿವಿ ದಾನಯ್ಯ ಅವರು ಬಂಡವಾಳ ಹೂಡಿದ್ದಾರೆ. ಪವನ್​ ಕಲ್ಯಾಣ್​ ಅವರ ಜನ್ಮದಿನಕ್ಕೆ ಸಾಂಗ್​ ರಿಲೀಸ್​ ಆಗಲಿದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಅದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ ಇಮ್ರಾನ್​ ಹಷ್ಮಿ ಕೂಡ ನಟಿಸುತ್ತಿದ್ದಾರೆ. ಕನ್ನಡದ ಹುಡುಗಿ ಪ್ರಿಯಾಂಕಾ ಅರುಳ್​ ಮೋಹನ್ ಅವರು ಹೀರೋಯಿನ್​ ಆಗಿದ್ದಾರೆ.

ಇದನ್ನೂ ಓದಿ: ‘ಕನ್ನಡ ಕಲಿಯುವ ಮನಸ್ಸಾಗಿದೆ’: ಕರುನಾಡಿಗೆ ಬಂದು ಆಸೆ ಹೇಳಿಕೊಂಡ ಪವನ್​ ಕಲ್ಯಾಣ್​

ರಾಜಕೀಯದಲ್ಲಿ ಬ್ಯುಸಿ ಆಗಿರುವುದರಿಂದ ಪವನ್​ ಕಲ್ಯಾಣ್​ ಅವರು ಸಿನಿಮಾಗಳ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಹೊಸ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಅವಸರ ತೋರಿಲ್ಲ. ಆದರೆ ಈಗಾಗಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸವನ್ನು ಮುಗಿಸಿಕೊಡಲಿದ್ದಾರೆ. ದೊಡ್ಡ ಬಜೆಟ್​ನಲ್ಲಿ ‘ಓಜಿ’ ಸಿನಿಮಾ ಮೂಡಿಬರುತ್ತಿದೆ. ಅಲ್ಲದೇ, ‘ಹರಿ ಹರ ವೀರ ಮಲ್ಲು’ ಸಿನಿಮಾದ ಕೆಲಸಗಳನ್ನು ಕೂಡ ಪವನ್​ ಕಲ್ಯಾಣ್​ ಪೂರ್ಣಗೊಳಿಸಬೇಕಿದೆ.

ಕಳೆದ ವರ್ಷ ‘ಓಜಿ’ ಸಿನಿಮಾದ ಸ್ಪೆಷಲ್​ ಟೀಸರ್​ ಬಿಡುಗಡೆ ಆಗಿತ್ತು. ‘ನಾವು ಇಂದಿಗೂ ಅದೇ ಹ್ಯಾಂಗೋವರ್​ನಲ್ಲಿ ಇದ್ದೇನೆ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಚಿತ್ರದ ಮೊದಲ ಸಾಂಗ್​ ಬಿಡುಗಡೆಯಾದರೆ ಸಿನಿಮಾ ಮೇಲಿನ ಹೈಪ್​ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?