ಪ್ರಭಾಸ್ ಅಭಿಮಾನಿಗಳಿಗಾಗಿ ‘ದಿ ರಾಜಾ ಸಾಬ್’ ಚಿತ್ರದಿಂದ ‘ಫ್ಯಾನ್ ಇಂಡಿಯಾ ಗ್ಲಿಂಪ್ಸ್’

ಪ್ರಭಾಸ್​ ಅವರು ನಟಿಸಿರುವ ‘ದಿ ರಾಜಾ ಸಾಬ್​’ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಥಮನ್ ಎಸ್​. ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮಾರುತಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಭಿಮಾನಿಗಳಿಗೆ ಖುಷಿ ನೀಡಲು ಸೋಮವಾರ (ಜುಲೈ 28) ‘ಫ್ಯಾನ್ ಇಂಡಿಯಾ ಗ್ಲಿಂಪ್ಸ್​’ ಬಿಡುಗಡೆ ಮಾಡಲಾಗುತ್ತಿದೆ.

ಪ್ರಭಾಸ್ ಅಭಿಮಾನಿಗಳಿಗಾಗಿ ‘ದಿ ರಾಜಾ ಸಾಬ್’ ಚಿತ್ರದಿಂದ ‘ಫ್ಯಾನ್ ಇಂಡಿಯಾ ಗ್ಲಿಂಪ್ಸ್’
ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Jul 28, 2024 | 3:44 PM

‘ಬಾಹುಬಲಿ’ ಬಳಿಕ ಕೈಕೊಟ್ಟಿದ್ದ ಪ್ರಭಾಸ್​ ಅವರ ಅದೃಷ್ಟ ಈಗ ಮತ್ತೆ ಸರಿಯಾದ ಟ್ರ್ಯಾಕ್​ಗೆ ಬಂದಿದೆ. ಅವರು ನಟಿಸಿದ ‘ಸಲಾರ್​’ ಸಿನಿಮಾ ಉತ್ತಮವಾಗಿ ಕಮಾಯಿ ಮಾಡಿತ್ತು. ಇತ್ತೀಚೆಗೆ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಸೈ ಎನಿಸಿಕೊಂಡಿತು. ಈ ಗೆಲುವಿನ ಖುಷಿಯಲ್ಲಿ ಅವರು ತೇಲುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ. ಪ್ರಭಾಸ್​ ಅಭಿನಯಿಸಿರುವ ‘ದಿ ರಾಜಾ ಸಾಬ್​’ ಸಿನಿಮಾ ತಂಡದಿಂದ ಜುಲೈ 29ರಂದು ಅಭಿಮಾನಿಗಳಿಗೆ ವಿಶೇಷ ಗಿಫ್ಟ್​ ಸಿಗಲಿದೆ.

ಪ್ರಭಾಸ್​ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ಸಲಾರ್​’, ‘ಕಲ್ಕಿ 2898 ಎಡಿ’ ಸಿನಿಮಾಗಳಿಗಿಂತಲೂ ಭಿನ್ನವಾದ ಪಾತ್ರವನ್ನು ಅವರು ‘ದಿ ರಾಜಾ ಸಾಬ್​’ ಸಿನಿಮಾದಲ್ಲಿ ಮಾಡಿದ್ದಾರೆ. ಅವರ ಲುಕ್​ ಈಗಾಗಲೇ ಬಹಿರಂಗ ಆಗಿದೆ. ಈಗ ಒಂದು ಸ್ಪೆಷಲ್​ ಆದಂತಹ ವಿಡಿಯೋ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ಸಜ್ಜಾಗಿದೆ.

ಪಾಕಿಸ್ತಾನದ ಚೆಲುವೆ ಸಜಲ್ ಅಲಿಗೆ ಜೋಡಿ ಆಗುತ್ತಾರಾ ನಟ ಪ್ರಭಾಸ್​?

ನಿರ್ಮಾಣ ಸಂಸ್ಥೆಯಾದ ‘ಪೀಪಲ್​ ಮೀಡಿಯಾ ಫ್ಯಾಕ್ಟರಿ’ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ದಿ ರಾಜಾ ಸಾಬ್​’ ಸಿನಿಮಾದ ಅಪ್​ಡೇಟ್​ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಜುಲೈ 29ರಂದು ಸಂಜೆ 5 ಗಂಟೆಗೆ ಬಿಡುಗಡೆ ಆಗಲಿರುವ ವಿಡಿಯೋವನ್ನು ‘ಫ್ಯಾನ್​ ಇಂಡಿಯಾ ಗ್ಲಿಂಪ್ಸ್​’ ಎಂದು ಕರೆಯಲಾಗುತ್ತಿದೆ. ಇದರಲ್ಲಿ ಏನೆಲ್ಲ ವಿಶೇಷತೆ ಇರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾತರರಾಗಿದ್ದಾರೆ.

ಈ ಗ್ಲಿಂಪ್ಸ್​ನಲ್ಲಿ ನಿಮಗೆ ಹಳೇ ಪ್ರಭಾಸ್​ ಸಿಗಲಿದ್ದಾರೆ ಎಂದು ಚಿತ್ರತಂಡದವರು ಭರವಸೆ ನೀಡಿದ್ದಾರೆ. ಆ ಕಾರಣದಿಂದಾಗಿ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಮಾರುತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಿಂದ ಪ್ರಭಾಸ್​ ಅವರ ಅಭಿಮಾನಿಗಳಿಗೆ ಹೊಸ ಅನುಭೂತಿ ಸಿಗಲಿದೆ. ಪ್ರಭಾಸ್​ ಲುಕ್​ ಕೂಡ ಸ್ಟೈಲಿಶ್​ ಆಗಿದೆ. ಗ್ಲಿಂಪ್ಸ್​ ಬಗ್ಗೆ ಮಾಹಿತಿ ನೀಡಲು ಬಿಡುಗಡೆ ಮಾಡಿರುವ ಪೋಸ್ಟರ್​ ತುಂಬ ಕಲರ್​ಫುಲ್ ಆಗಿದೆ. ‘ಸಲಾರ್​’ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾದ ರೀತಿಯಲ್ಲೇ ‘ದಿ ರಾಜಾ ಸಾಬ್​’ ಚಿತ್ರ ಕೂಡ ಭಾರಿ ಹೈಪ್​ ಸೃಷ್ಟಿ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು