ಪ್ರಭಾಸ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
Prabhas: ‘ಬಾಹುಬಲಿ’ ಸಿನಿಮಾ ಸ್ಟಾರ್ ಪ್ರಭಾಸ್ ಹಲವು ಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಸಿನಿಮಾ ಆಯ್ಕೆ ಮಾಡುವ ವಿಧಾನ ಏನು? ಯಾವುದಾದರೂ ಸೂತ್ರ ಪಾಲಿಸುತ್ತಾರಾ?
ಪ್ರಭಾಸ್, (Prabhas) ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಪ್ರಮುಖರು. ಅವರ ಸಿನಿಮಾಗಳಿಗಾಗಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುತ್ತಾರೆ. ಪ್ರಭಾಸ್ರ ಕಳಪೆ ಸಿನಿಮಾಗಳು ಸಹ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಪ್ರಭಾಸ್ ಸಹ ಒಬ್ಬರು. ‘ಬಾಹುಬಲಿ’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಪ್ರಭಾಸ್ರ ಮೂರು ಸಿನಿಮಾಗಳು ದೊಡ್ಡ ಯಶಸ್ಸು ಪಡೆಯಲಿಲ್ಲ. ಆಗ ಅವರ ಸಿನಿಮಾ ಆಯ್ಕೆಯ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದೀಗ ಪ್ರಭಾಸ್, ತಾವು ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂದು ವಿವರಿಸಿದ್ದಾರೆ.
ಪ್ರಭಾಸ್, ಇಂಡಿಯಾ ಟುಡೆಗೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ‘‘ನಾನು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನೋಡುವ ಏಕೈಕ ಅಂಶವೆಂದರೆ ಮನೊರಂಜನೆ. ನಾನು ಮಾಡುವ ಸಿನಿಮಾ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ಒದಗಿಸಬೇಕು, ಯಾವುದೇ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದೊಂದೇ ನನ್ನ ಗುರಿ’’ ಎಂದಿದ್ದಾರೆ ಪ್ರಭಾಸ್.
‘ಕತೆ ಯಾವುದೇ ಜಾನರ್ನದ್ದಾಗಿದ್ದರೂ ಮನೊರಂಜನೆಯ ಅಂಶ ಇದೆಯೇ ಎಂಬುದನ್ನು ಮುಖ್ಯವಾಗಿ ಗಮನಿಸುತ್ತೇನೆ’ ಎಂದಿರುವ ಪ್ರಭಾಸ್, ‘ಮನೊರಂಜನೆಯ ಜೊತೆಗೆ ನಟನಾಗಿ ತಾವು ಭಿನ್ನ-ಭಿನ್ನ ಜಾನರ್ಗಳನ್ನು ಪ್ರಯತ್ನಿಸುವ ಬಗ್ಗೆಯೂ ಗಮನ ವಹಿಸುತ್ತೇನೆ. ಒಂದೇ ರೀತಿಯ ಪಾತ್ರಗಳನ್ನು, ಒಂದೇ ರೀತಿಯ ಕತೆಗಳನ್ನು ಅವಾಯ್ಡ್ ಮಾಡುತ್ತೇನೆ’’ ಎಂದಿದ್ದಾರೆ.
ಇದನ್ನೂ ಓದಿ:‘ಸಲಾರ್’ಮಲ್ಲಿ ನಟಿಸಲು ಷರತ್ತೊಂದನ್ನು ಇರಿಸಿದ್ದರು ಶ್ರಿಯಾ ರೆಡ್ಡಿ: ಏನದು?
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಬಿಡುಗಡೆ ಆದ ಕೆಲವೇ ದಿನಕ್ಕೆ 650 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಸಿನಿಮಾ ಸಾವಿರ ಕೋಟಿ ದಾಟುವ ನಿರೀಕ್ಷೆಯೂ ಇದೆ. ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ.
‘ಸಲಾರ್’ ಸಿನಿಮಾದ ಬಳಿಕ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಪ್ರಸ್ತುತ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಮಾರುತಿ ನಿರ್ದೇಶಿಸುತ್ತಿರುವ ಹಾರರ್-ಆಕ್ಷನ್ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ಅದಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ