AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಡಿಕೆಯ ನಟ ಪೃಥ್ವಿರಾಜ್ ಸುಕುಮಾರನ್ ಒಟ್ಟೂ ಆಸ್ತಿ ಎಷ್ಟು ಗೊತ್ತಾ?

ಪೃಥ್ವಿರಾಜ್ ಸುಕುಮಾರನ್ ಅವರು ಓರ್ವ ಅದ್ಭುತ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ಇಂದು (ಅಕ್ಟೋಬರ್ 16) ಜನ್ಮದಿನದ ಸಂಭ್ರಮ. ಕಳೆದ ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ಬ್ಯುಸಿ ಇರುವ ಪೃಥ್ವಿರಾಜ್ ಸುಕುಮಾರನ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ ಎನ್ನುವ ಬಗ್ಗೆ ಇಲ್ಲಿದೆ ವಿವರ..

ಬೇಡಿಕೆಯ ನಟ ಪೃಥ್ವಿರಾಜ್ ಸುಕುಮಾರನ್ ಒಟ್ಟೂ ಆಸ್ತಿ ಎಷ್ಟು ಗೊತ್ತಾ?
ಪೃಥ್ವಿರಾಜ್ ಸುಕುಮಾರನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 16, 2023 | 10:26 AM

Share

ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಓರ್ವ ಅದ್ಭುತ ಹೀರೋ ಆಗಿ ಹೊರಹೊಮ್ಮಿದ್ದಾರೆ. ಕೊಟ್ಟ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ. ಅವರಿಗೆ ಇಂದು (ಅಕ್ಟೋಬರ್ 16) ಜನ್ಮದಿನದ (Prithviraj Sukumaran Birthday) ಸಂಭ್ರಮ. ಎಲ್ಲರೂ ಪ್ರಥ್ವಿರಾಜ್ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಪೃಥ್ವಿರಾಜ್ ಅವರಿಗೆ ವಿಶ್ ತಿಳಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ಬ್ಯುಸಿ ಇರುವ ಅವರ ಒಟ್ಟೂ ಆಸ್ತಿ (Prithviraj Sukumaran Net Worth) ಎಷ್ಟು ಕೋಟಿ ರೂಪಾಯಿ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಪೃಥ್ವಿರಾಜ್ ಸಿನಿ ಬದುಕು:

ಪೃಥ್ವಿರಾಜ್ ಸುಕುಮಾರನ್ ಅವರು ‘ನಕ್ಷತ್ರಕ್ಕನುಳ್ಳ ರಾಜಕುಮಾರನ್ ಅವನಂದೋರು ರಾಜಕುಮಾರಿ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆದರು. ‘ಅಯ್ಯಪ್ಪನುಂ ಕೋಶಿಯುಮ್’, ‘ಕೋಲ್ಡ್ ಕೇಸ್’, ‘ಡ್ರೈವಿಂಗ್ ಲೈಸೆನ್ಸ್’, ‘ಲೂಸಿಫರ್’, ‘ಜನ ಗಣ ಮನ’ ಮೊದಲಾದ ಹಿಟ್ ಸಿನಿಮಾಗಳಲ್ಲಿ ಪೃಥ್ವಿರಾಜ್ ನಟಿಸಿದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಕೆಲಸ ಇನ್ನಷ್ಟೇ ಆರಂಭ ಆಗಬೇಕಿದೆ.

ಇದನ್ನೂ ಓದಿ: ಚಿರುಗಾಗಿ ಸಂಭಾವನೆ ಪಡೆಯಲು ನಿರಾಕರಿಸಿದ ಸಲ್ಮಾನ್​ ಖಾನ್​; ಫ್ರೀ ಆಗಿ ನಟಿಸಿದ ಸ್ಟಾರ್ ನಟ

ಆಸ್ತಿ ಬಗ್ಗೆ:

ಪೃಥ್ವಿರಾಜ್ ಸುಕುಮಾರನ್ ಅವರು 1982ರ ಅಕ್ಟೋಬರ್ 16ರಂದು ಜನಿಸಿದರು. ಅವರು ಹುಟ್ಟಿದ್ದು ಕೇರಳದ ತಿರುವನಂತಪುರದಲ್ಲಿ. ಅವರ ವಯಸ್ಸು ಈಗ 41. ಅವರು ಶಿಕ್ಷಣವನ್ನು ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿ ಪಡೆದಿದ್ದಾರೆ. ಅವರ ಆಸ್ತಿ ಮೌಲ್ಯ 52 ಕೋಟಿ ರೂಪಾಯಿ ಮೇಲಿದೆ. ಅವರು ಸಿನಿಮಾಗಾಗಿ ದೊಡ್ಡ ಸಂಭಾನೆ ಪಡೆಯುತ್ತಾರೆ.

ಖಾಸಗಿ ಜೀವನ:

ಪೃಥ್ವಿರಾಜ್ ಅವರು ಸುಪ್ರಿಯಾ ಮೆನನ್ ಅವರನ್ನು ಪ್ರೀತಿಸಿ ಮದುವೆ ಆದರು. ಸುಪ್ರಿಯಾ ಬಿಬಿಸಿ ನ್ಯೂಸ್ ಚಾನೆಲ್​ನ ರಿಪೋರ್ಟರ್ ಆಗಿದ್ದರು​. ಇವರು 2011ರಲ್ಲಿ ಮದುವೆ ಆದರು. ಈ ದಂಪತಿಗೆ ಹೆಣ್ಣು ಮಗು ಇದೆ. ಈ ಮಗುವಿಗೆ ಅಲಂಕೃತಾ ಎಂದು ಹೆಸರು ಇಡಲಾಗಿದೆ. ಮದುವೆಗೂ ಮೊದಲು ಮೀರಾ ಜಾಸ್ಮಿನ್ ಜೊತೆ ಪೃಥ್ವಿರಾಜ್ ಅವರು ರಿಲೇಶನ್​ಶಿಪ್​ನಲ್ಲಿದ್ದರು.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಆಸ್ತಿ ಎಷ್ಟು ಕೋಟಿ ರೂಪಾಯಿ? ಅವರ ಬಳಿ ಎಷ್ಟು ಕಾರುಗಳಿವೆ ಗೊತ್ತಾ?

ಪೃಥ್ವಿರಾಜ್ ತಂದೆ ಸುಕುಮಾರನ್ ಕೂಡ ಖ್ಯಾತ ನಟರು. ಅವರು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ತಾಯಿ ಮಲ್ಲಿಕಾ ಸುಕುಮಾರನ್ ನಟಿ. ಪೃಥ್ವಿರಾಜ್ ಸಹೋದರನ ಹೆಸರು ಇಂದ್ರಜಿತ್. ಉಳಿದ ಹೀರೋಗಳಂತೆ ಪೃಥ್ವಿರಾಜ್ ಅವರಿಗೆ ಕಾರ್ ಕಲೆಕ್ಷನ್ ಬಗ್ಗೆ ಅಷ್ಟು ಆಸಕ್ತಿ ಇಲ್ಲ.

‘ಸಲಾರ್’

‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಮೊದಲ ಗ್ಲಿಂಪ್ಸ್​ನಲ್ಲಿ ಪೃಥ್ವಿರಾಜ್ ಅವರ ಲುಕ್ ರಿವೀಲ್ ಆಗಿತ್ತು. ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಡಿಸೆಂಬರ್ 22ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ