AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಕ್ವೆಲ್​​ನಲ್ಲಿ ನಟಿಸಬಾರದೆಂಬ ನಿರ್ಧಾರವನ್ನು ರಜನಿ ಬದಲಿಸಿದ್ದು ಏಕೆ?

ರಜನೀಕಾಂತ್ ಅವರು ಯಾವುದೇ ಸೀಕ್ವೆಲ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಅವರ ನಟನೆಯ ಸೂಪರ್ ಹಿಟ್ ‘ಭಾಷಾ’ ಮತ್ತು ‘ಪೆಟ್ಟ’ ಸಿನಿಮಾಗಳ ಸೀಕ್ವೆಲ್​​ನಲ್ಲಿ ನಟಿಸಲು ಅವಕಾಶ ಬಂದಿತ್ತಂತೆ ಆದರೆ ಸೀಕ್ವೆಲ್​​ಗಳ ಬಗ್ಗೆ ಆಸಕ್ತಿ ಇಲ್ಲದ ರಜನೀ ಅವರು ಬೇಡ ಎಂದಿದ್ದರಂತೆ. ಆದರೆ ‘ಜೈಲರ್ 2’ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ ಎಂದು ಅವರು ವಿವರಿಸಿದ್ದಾರೆ.

ಸೀಕ್ವೆಲ್​​ನಲ್ಲಿ ನಟಿಸಬಾರದೆಂಬ ನಿರ್ಧಾರವನ್ನು ರಜನಿ ಬದಲಿಸಿದ್ದು ಏಕೆ?
Rajinikanth Jailer 2
ಮಂಜುನಾಥ ಸಿ.
|

Updated on: Oct 10, 2026 | 8:52 PM

Share

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಸಿನಿಮಾ ಅಕ್ಟೋಬರ್ 15ರಂದು ತೆರೆಕಾಣಲು ಸಜ್ಜಾಗಿದೆ. 2023ರ ಬ್ಲಾಕ್‌ಬಸ್ಟರ್ ಹಿಟ್ ಚಿತ್ರ ‘ಜೈಲರ್’ ನ ಮುಂದುವರಿದ ಭಾಗವಾಗಿರುವ ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತೊಮ್ಮೆ ‘ಮುತ್ತುವೇಲ್ ಪಾಂಡಿಯನ್’ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರು ರಜನಿಕಾಂತ್, ತಾವು, ತಮ್ಮ ಸಿನಿಮಾದ ಸೀಕ್ವೆಲ್​​ಗಳಲ್ಲಿ ನಟಿಸದೇ ಇರಲು ನಿರ್ಧರಿಸಿದ್ದಾಗಿ, ಆದರೆ ‘ಜೈಲರ್ 2’ ಸಿನಿಮಾಕ್ಕಾಗಿ ಆ ನಿರ್ಧಾರ ಬದಲಾವಣೆ ಮಾಡಿದ್ದಕ್ಕೆ ಕಾರಣ ವಿವರಿಸಿದ್ದಾರೆ.

ಹಿಂದೆ ತಮ್ಮ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸೀಕ್ವೆಲ್ ಮಾಡಲು ಬಂದ ಆಫರ್‌ಗಳನ್ನು ರಜನಿಕಾಂತ್ ತಿರಸ್ಕರಿಸಿದ್ದರು. ವಿಶೇಷವಾಗಿ, ಬ್ಲಾಕ್ ಬಸ್ಟರ್, ಕಲ್ಟ್ ಸಿನಿಮಾ ‘ಭಾಷಾ 2’ ಹಾಗೂ ‘ಪೇಟ 2’ ಚಿತ್ರಗಳಿಗೆ ಬಂದ ಆಫರ್​​ಗಳಿಗೆ ಅವರು ನೋ ಎಂದಿದ್ದರು. ‘ಸಾಮಾನ್ಯವಾಗಿ ಸೀಕ್ವೆಲ್‌ಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಏಕೆಂದರೆ ಮೊದಲ ಭಾಗದ ಕಥೆಗೆ ಸ್ವಲ್ಪ ಹೆಚ್ಚು ಮಸಾಲೆ ಸೇರಿಸಿ ಮತ್ತೊಂದು ಸಿನಿಮಾ ಮಾಡಿದಂತೆ ಭಾಸವಾಗುತ್ತದೆ. ಕಾರ್ತಿಕ್ ಸುಬ್ಬರಾಜ್ ವಿಜಯ್ ಸೇತುಪತಿ ಪಾತ್ರವನ್ನು ವಿಸ್ತರಿಸಿ ‘ಪೇಟ 2’ ಮಾಡೋಣ ಎಂದಾಗಲೂ ನಾನು ಬೇಡ ಎಂದಿದ್ದೆ’ ಎಂದು ತಿಳಿಸಿದರು.

ಆದರೆ ‘ಜೈಲರ್’ ವಿಷಯದಲ್ಲಿ ಹಾಗಾಗಲಿಲ್ಲ ಎಂದಿರುವ ರಜನಿ, ‘ಒಟಿಟಿಯಲ್ಲಿ ಸಿನಿಮಾ ನೋಡುವಾಗ ಕಥೆಯ ಅಂತ್ಯದಲ್ಲಿ ವರ್ಮ (ವಿನಾಯಕನ್) ಪಾತ್ರದ ಬಗ್ಗೆ ನಿರ್ದೇಶಕರು ಕೆಲವು ಸುಳಿವುಗಳು ಸೀಕ್ವೆಲ್‌ಗೆ ಸೂಕ್ತವಾದ ಬುನಾದಿ ಹಾಕಿರುವುದನ್ನು ಗಮನಿಸಿದರು. ವರ್ಮ ಹಿಂದೆ ದೊಡ್ಡ ಕ್ರಿಮಿನಲ್ ನೆಟ್‌ವರ್ಕ್ ಇರುವುದನ್ನು ಹಾಗೂ ನಾಗ್ಪುರ ಜೈಲಿನಲ್ಲಿ ಮುತ್ತುವೇಲ್ ಪಾಂಡಿಯನ್ ಜತೆಗೆ ನಿಷ್ಠಾವಂತ ಡಾನ್‌ಗಳ ಬೆಂಬಲವಿರುವುದನ್ನು ನೆಲ್ಸನ್ ಸೂಚ್ಯವಾಗಿ ತೋರಿಸಿದ್ದರು. ಕಥೆಯಲ್ಲಿ ಸಾವಿರಾರು ಕೋಟಿ ಮೌಲ್ಯದ ಕಂಟೈನರ್‌ಗಳು ಮತ್ತು ದೊಡ್ಡ ಅಪರಾಧ ಜಾಲದ ಕಥೆ ಇದ್ದುದರಿಂದ, ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅತ್ಯುತ್ತಮ ಅವಕಾಶವಿತ್ತು, ಹಾಗಾಗಿ ನಾನು ಒಪ್ಪಿಕೊಂಡೆ ಎಂದು ರಜನಿ ವಿವರಿಸಿದ್ದಾರೆ.

ಇದನ್ನೂ ಓದಿ:‘ಶ್ರೀರಾಮನನ್ನು ಸಲ್ಮಾನ್, ರಜನಿಕಾಂತ್ ತರ ತೋರಿಸಿದ್ದಾರೆ’: ರಾಮಾಯಣ; ಸಿನಿಮಾ ವಿರುದ್ಧ ಮುಕೇಶ್ ಖನ್ನಾ ಕಿಡಿ

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಹಾಗೂ ಸನ್ ಪಿಕ್ಚರ್ಸ್ ಲಾಂಚ್ ಅಡಿಯಲ್ಲಿ ಕಾನಿಧಿ ಮಾರನ್ ನಿರ್ಮಿಸಿರುವ ‘ಜೈಲರ್ 2’, ಅಕ್ಟೋಬರ್ 15ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ರಜನೀ ಅವರಷ್ಟೆ ಸಿನಿಮಾದ ಅತಿಥಿ ಪಾತ್ರಗಳಿಂದಲೂ ಜನಪ್ರಿಯ. ಸಿನಿಮಾನಲ್ಲಿ ರಮ್ಯ ಕೃಷ್ಣ, ಯೋಗಿ ಬಾಬು ಜೊತೆಗೆ ಈ ಬಾರಿ ಎಸ್​​ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಸೇರಿದಂತೆ ಹಲವು ದಿಗ್ಗಜರು ನಟಿಸಿದ್ದಾರೆ. ಜೊತೆಗೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ಹೃತಿಕ್ ರೋಷನ್ ಅವರುಗಳು ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!