AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ಮೇಲ್ಜಾತಿಯವರ ವೋಟುಗಳು ಬೇಡ; ನನ್ನ ಕ್ಷೇತ್ರಕ್ಕೆ ನಾನೇ ಬಾಸ್; ಪ್ರದೀಪ್ ಈಶ್ವರ್ ಭಾಷಣದ ವಿಡಿಯೋ ವೈರಲ್

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್​​ ಅವರದ್ದು ಎನ್ನಲಾದ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಅವರು, ಶಾಸಕ ಡಾ. ಎಂಸಿ ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ. ಜೊತೆಗೆ ಮೇಲ್ಜಾತಿಯ ಮತಗಳು ಬೇಡ ಎಂದು ಹೇಳಿದ್ದಾರೆ.

ನನಗೆ ಮೇಲ್ಜಾತಿಯವರ ವೋಟುಗಳು ಬೇಡ; ನನ್ನ ಕ್ಷೇತ್ರಕ್ಕೆ ನಾನೇ ಬಾಸ್; ಪ್ರದೀಪ್ ಈಶ್ವರ್ ಭಾಷಣದ ವಿಡಿಯೋ ವೈರಲ್
ಶಾಸಕ ಪ್ರದೀಪ್ ಈಶ್ವರ್Image Credit source: tv9 kannada
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Oct 10, 2026 | 7:56 PM

Share

ಚಿಕ್ಕಬಳ್ಳಾಪುರ, ಅಕ್ಟೋಬರ್​​ 10: ‘ನನಗೆ ಮೇಲ್ಜಾತಿಯವರ ವೋಟುಗಳು ಬೇಡ. ನನಗೆ ದಲಿತರು. ಮುಸ್ಮಿಮರ ವೋಟುಗಳು ಸಾಕು ಅಷ್ಟೆ. ನಾನು ದಲಿತರ ಪರ ಇದ್ದೀನಿ ಅಂತ ಅಂದುಕೊಳ್ಳಲಿ ಬಿಡಿ’ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್​​​ ಅವರದ್ದು ಎನ್ನಲಾದ​ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ.

ನನ್ನ ಕ್ಷೇತ್ರಕ್ಕೆ ನಾನೇ ಬಾಸ್: ಪ್ರದೀಪ್ ಈಶ್ವರ್

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಎಂಸಿ ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ವಿರುದ್ಧ ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್​ ಬಂಡಾಯ ಸಾರಿದ್ದಾರೆ. ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ‘ನನ್ನ ಕ್ಷೇತ್ರಕ್ಕೆ ನಾನೇ ಬಾಸ್, ನನ್ನ ಕ್ಷೇತ್ರದಲ್ಲಿ ಬೇರೆಯವರ ಹಸ್ತಕ್ಷೇಪ ಸಹಿಸಲ್ಲ, ಈಗ ಏನಿದ್ದರೂ ನಂದೇ ಹವಾ, ನನಗೆ ಮೇಲ್ಜಾತಿಯ ಮತಗಳು ಬೇಡ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿನ್ನ ವಿರುದ್ಧ ಸಮರ ನಿರಂತರ ಎಂದ ಪ್ರದೀಪ್ ಈಶ್ವರ್​​ಗೆ ಎಂಸಿ ಸುಧಾಕರ್‌ ಸೈಲೆಂಟ್ ಸ್ಕೆಚ್!

‘ನನ್ನ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಶಾಸಕರ ಹಸ್ತಕ್ಷೇಪ ಇತ್ತು. ಇದರಿಂದ ಕೆಲವು ಕಡೆ ಕಾಂಗ್ರೆಸ್​​ ಅಭ್ಯರ್ಥಿಗಳು ಸೋತರು. ಯಾರಾದರೂ ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ನಾನು ಬಿಡುವುದಿಲ್ಲ. ನನ್ನ ಕ್ಷೇತ್ರಕ್ಕೆ ನಾನೇ ಬಾಸ್​ ಅಂತ ಸಿಎಂ ಡಿಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಹೇಳಿದ ಹಾಗೆ ನಡೆಯಬೇಕು, ಈಗ ನಡೆಯುತ್ತಿದೆ’ ಎಂದು ಮಾಜಿ ಸಚಿವ ಎಂಸಿ ಸುಧಾಕರ್​ ವಿರುದ್ಧ​ ಅವರು​ ಪರೋಕ್ಷ ವಾಗ್ದಾಳಿ ಮಾಡಿದರು.

LIVE TV

ನಾನು 25 ಲಕ್ಷ ರೂ ಶಾಸಕ ಆದವನು ಎಂದ ಪ್ರದೀಪ್

‘ನಾನು 25 ಲಕ್ಷ ರೂಪಾಯಿನಲ್ಲಿ ಶಾಸಕ ಆದವನು. ಅದಕ್ಕೆ ಕೆಲವರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ನಾನು ಬಲಿಜ ಎಂಬ ಕಾರಣಕ್ಕೆ ಕಳೆದ ಡೇರಿ ಚುನಾವಣೆಯಲ್ಲಿ ಅಭ್ಯರ್ಥಿ ಪರ ನಾಮಿನೇಷನ್ ಹಾಕಲು ಬರಬೇಡಿ ಅಂತ ಹೇಳಿದ್ದರು. ಉಪವಿಭಾಗ ಹಾಗೂ ಜಿಲ್ಲಾ ಮಟ್ಟದಲ್ಲಿ ಬರೀ ಅವರ ಅಧಿಕಾರಿಗಳೇ ಇದ್ದಾರೆ. ಬೇರೆ ಜಾತಿ, ಸಮುದಾಯದ ಅಧಿಕಾರಿಗಳು ಏನು ಮಾಡಬೇಕು’? ಎಂದು ಪ್ರದೀಪ್ ಈಶ್ವರ್​ ಕಿಡಿಕಾರಿದ್ದಾರೆ.

ಉರಿಯುವ ಬೆಂಕಿಗೆ ತುಪ್ಪು ಸುರಿದ ಪ್ರದೀಪ್ ಈಶ್ವರ್​

‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಮುಖ ಸಮುದಾಯದ ವೋಟುಗಳು ಕೇವಲ 18 ಸಾವಿರ ಇದೆ. ಆದರೆ 50 ಸಾವಿರ ಅಂತ ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ದಲಿತ ಮತಗಳು 1 ಲಕ್ಷ ಇದೆ. ಮುಸ್ಮಿಮರ ವೋಟುಗಳು 30 ಸಾವಿರ ಇದೆ. ದಲಿತರಿಗೆ ಪ್ರಾತಿನಿಧ್ಯ ಸಿಗಬೇಕು. ಕುರುಬ ವೋಟುಗಳು 17  ಸಾವಿರ, ಬಲಿಜ 25 ಸಾವಿರ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!