ಪ್ರಶಾಂತ್ ನೀಲ್ ಹೊಸ ಸಿನಿಮಾದಲ್ಲಿ ನಟಿಸ್ತಾರಾ ಯಶ್?​; ಹರಿದಾಡುತ್ತಿದೆ ಹೊಸ ಸುದ್ದಿ

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದಿಂದ ಈವರೆಗೆ ರಿಲೀಸ್ ಆಗಿದ್ದು ಕೇವಲ ಪೋಸ್ಟರ್​ಗಳು ಮಾತ್ರ. ಇವುಗಳೇ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿವೆ. ಈಗ ಚಿತ್ರದ ಬಗ್ಗೆ ಹೊಸ ಅಪ್​ಡೇಟ್ ಕೇಳಿ ಬಂದಿದೆ.

ಪ್ರಶಾಂತ್ ನೀಲ್ ಹೊಸ ಸಿನಿಮಾದಲ್ಲಿ ನಟಿಸ್ತಾರಾ ಯಶ್?​; ಹರಿದಾಡುತ್ತಿದೆ ಹೊಸ ಸುದ್ದಿ
ಯಶ್-ಪ್ರಶಾಂತ್ ನೀಲ್
TV9kannada Web Team

| Edited By: Rajesh Duggumane

Jul 01, 2022 | 10:14 PM

‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಸಿನಿಮಾ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಹಾಗೂ ಯಶ್ (Yash) ಖ್ಯಾತಿ ಹೆಚ್ಚಿದೆ. ‘ಕೆಜಿಎಫ್ 3’ ತೆರೆಗೆ ಬರುವ ಬಗ್ಗೆ ಈಗಾಗಲೇ ಸೂಚನೆ ಸಿಕ್ಕಿದೆ. ಆದರೆ, ಆ ಸಿನಿಮಾ ಸದ್ಯಕ್ಕಂತೂ ಸೆಟ್ಟೇರುವುದಿಲ್ಲ. ಸದ್ಯ ಪ್ರಶಾಂತ್ ನೀಲ್ ಅವರು ‘ಸಲಾರ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಯಶ್ ಜತೆಗೆ ಪ್ರಶಾಂತ್ ನೀಲ್ ಮತ್ತೆ ಕೈ ಜೋಡಿಸುತ್ತಿರುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದಿಂದ ಈವರೆಗೆ ರಿಲೀಸ್ ಆಗಿದ್ದು ಕೇವಲ ಪೋಸ್ಟರ್​ಗಳು ಮಾತ್ರ. ಇವುಗಳೇ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿವೆ. ಈಗ ಚಿತ್ರದ ಬಗ್ಗೆ ಹೊಸ ಅಪ್​ಡೇಟ್ ಕೇಳಿ ಬಂದಿದೆ. ‘ಸಲಾರ್​’ ಚಿತ್ರದಲ್ಲಿ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಯಶ್ ಹಾಗೂ ಪ್ರಶಾಂತ್ ನೀಲ್ ‘ಕೆಜಿಎಫ್ 3’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಆದರೆ, ನಿರ್ಮಾಣ ಸಂಸ್ಥೆಯವರೇ ಹೇಳಿದಂತೆ ಈ ಸಿನಿಮಾದ ಕೆಲಸಗಳನ್ನು ಸದ್ಯಕ್ಕಂತೂ ಆರಂಭ ಮಾಡುವ ಆಲೋಚನೆ ಇಲ್ಲ. ಯಶ್​ಗೂ ಈ ವಿಚಾರ ತಿಳಿದಿದೆ. ಹೀಗಾಗಿ, ಅವರು ‘ಸಲಾರ್’ ಚಿತ್ರದ ಕೆಲಸವನ್ನು ಮೊದಲು ಮುಗಿಸುವಂತೆ ಪ್ರಶಾಂತ್​ ನೀಲ್​ಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ‘ಸಲಾರ್’ ಚಿತ್ರದಲ್ಲಿ ಯಶ್​ಗೆ ಅತಿಥಿ ಪಾತ್ರ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಸಲಾರ್’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳು ಇವೆ. ‘ಕೆಜಿಎಫ್ 2’ ಬಳಿಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಪ್ರಭಾಸ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೃಥ್ವಿರಾಜ್​ ಅವರು ಇತ್ತೀಚೆಗೆ ಅಧಿಕೃತ ಮಾಡಿದ್ದರು. ಕನ್ನಡದ ಹೊಂಬಾಳೆ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್

ಇದನ್ನೂ ಓದಿ

‘ಸಲಾರ್’ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​; ಯಾವ ಹಂತದಲ್ಲಿದೆ ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada