AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಲ್ಲಿ ಸಿಗರೇಟ್ ಹಿಡಿದ ದರ್ಶನ್ ಫೋಟೋ ವೈರಲ್; ನಾಲ್ವರ ಜೊತೆ ಹರಟೆ

ಪರಪ್ಪನ ಅಗ್ರಹಾರದ ಸ್ಪೆಷಲ್ ಬ್ಯಾರಕ್​ನಲ್ಲಿ ದರ್ಶನ್​ ಅವರನ್ನು ಬಂಧಿಸಲಾಗಿದೆ. ಆದರೆ ಅವರು ಬ್ಯಾರಕ್​ನಿಂದ ಹೊರಗೆ ಕುಳಿತು, ಸಹಚರರ ಜೊತೆ ಕಾಫಿ ಕುಡಿದು, ಸಿಗರೇಟ್ ಸೇದುತ್ತಿರುವ ಫೋಟೋ ಲಭ್ಯವಾಗಿದೆ. ಇದರಿಂದ ಈ ಪ್ರಕರಣದ ತನಿಖೆ ಬಗ್ಗೆ ಸಾಕಷ್ಟು ಅನುಮಾನ ಮೂಡುವಂತಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನ ತನಿಖೆ ಕೊನೇ ಹಂತಕ್ಕೆ ಬಂದಿದೆ.

ಜೈಲಿನಲ್ಲಿ ಸಿಗರೇಟ್ ಹಿಡಿದ ದರ್ಶನ್ ಫೋಟೋ ವೈರಲ್; ನಾಲ್ವರ ಜೊತೆ ಹರಟೆ
ದರ್ಶನ್ ವೈರಲ್ ಫೋಟೋ
Kiran HV
| Edited By: |

Updated on:Aug 25, 2024 | 3:51 PM

Share

ಕೊಲೆ ಆರೋಪದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ಅಲ್ಲಿ ಅವರಿಗೆ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ, ದರ್ಶನ್​ ಅವರ ಒಂದು ಫೋಟೋ ವೈರಲ್​ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್​ ಆಗಿರುವ ಫೋಟೋದಿಂದ ಅನೇಕ ಅನುಮಾನಗಳು ಮೂಡಲು ಆರಂಭಿಸಿವೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪ ದರ್ಶನ್​ ಮೇಲಿದೆ. ಹಾಗಾಗಿ ಅವರನ್ನು ಪರಪ್ಪನ ಅಗ್ರಹಾರದ ಸ್ಪೆಷಲ್​ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.

ದರ್ಶನ್​ ಅವರು ಸ್ಪೆಷಲ್​ ಬ್ಯಾರಕ್​ನಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ ಮಗ್​ ಹಿಡಿದುಕೊಂಡು ಅವರು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟ್​ ಕೂಡ ಇದೆ. ಈ ಫೋಟೋ ವೈರಲ್​ ಆಗಿದೆ. ಇನ್ನೂ ಯಾವೆಲ್ಲ ಸೌಕರ್ಯಗಳನ್ನು ನಟನಿಗೆ ನೀಡಿರಹುದು ಎಂಬ ಪ್ರಶ್ನೆಯನ್ನು ಈ ಫೋಟೋ ಹುಟ್ಟುಹಾಕಿದೆ. ಜೈಲು ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ಮೂಡುವಂತಾಗಿದೆ.

ಇದನ್ನೂ ಓದಿ: ದರ್ಶನ್​ ಕೇಸ್​ನಲ್ಲಿ ನಟ ಚಿಕ್ಕಣ್ಣಗೆ ಮತ್ತೆ ಬರಲಿದೆ ಪೊಲೀಸರ ನೋಟೀಸ್​?

ಇದು ಹೈ ಪ್ರೊಫೈಲ್​ ಕೇಸ್​ ಆದ ಕಾರಣ ಎಲ್ಲರ ಗಮನ ಇದರ ಮೇಲಿದೆ. ತನಿಖೆಯ ಪ್ರತಿ ಹಂತವೂ ಕೂಡ ಸುದ್ದಿ ಆಗುತ್ತಿದೆ. ದರ್ಶನ್​ ಹಾಗೂ ಗ್ಯಾಂಗ್​ ವಿರುದ್ಧ ಈಗಾಗಲೇ ಅನೇಕ ಬಗೆಯ ಸಾಕ್ಷಿಗಳು ಸಿಕ್ಕಿವೆ. ಇನ್ನೇನು ಕೆಲವೇ ದಿನಗಳಲ್ಲಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಹಂತದಲ್ಲಿ ದರ್ಶನ್​ ಅವರ ವೈರಲ್​ ಫೋಟೋ ಹರಿದಾಡಿದೆ.

ಜೈಲಿನಲ್ಲಿ ದರ್ಶನ್​ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಫೋಟೋ ನೋಡಿದ ಬಳಿಕ ಅದು ಖಚಿತವಾಗಿದೆ. ಅವರ ವಿಗ್​ ಕೂಡ ತೆಗೆಸಲಾಗಿದೆ. ಈಗಾಗಲೇ ಅನೇಕರು ಜೈಲಿಗೆ ಭೇಟಿ ನೀಡಿ ದರ್ಶನ್​ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೇಳಿಕೆ ನೀಡಿದ ಬಳಿಕ ನಟ ಚಿಕ್ಕಣ್ಣ ಕೂಡ ಜೈಲಿಗೆ ತೆರಳಿ ದರ್ಶನ್​ ಅವರನ್ನು ಮಾತನಾಡಿಸಿದ್ದರು. ಹಾಗಾಗಿ ಅವರಿಗೆ ಪೊಲೀಸರು ಮತ್ತೆ ನೋಟೀಸ್​ ನೀಡುವ ಸಾಧ್ಯತೆ ಇದೆ. ಕೇಸ್​ ತನಿಖೆ ಆರಂಭ ಆದಾಗ ದರ್ಶನ್​ ಅವರು ಎ2 ಆಗಿದ್ದರು. ಆದರೆ ಚಾರ್ಚ್​ಶೀಟ್​ ಸಲ್ಲಿಸುವ ಹಂತದಲ್ಲಿ ಅವರನ್ನು ಎ1 ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:43 pm, Sun, 25 August 24

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!