AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎವರಿಒನ್ ವಾಂಟ್ಸ್ ದಿಸ್: ಒಂದೇ ಸಿನಿಮಾದಲ್ಲಿ ಹಲವು ಭಾಷೆ; ಆದರೆ ಡಬ್ಬಿಂಗ್ ಅಲ್ಲ

‘ಎವರಿಒನ್ ವಾಂಟ್ಸ್ ದಿಸ್’ ಸಿನಿಮಾ ಮೂಲಕ ವಿಶೇಷ ಪರಿಕಲ್ಪನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಈ ಸಿನಿಮಾದಲ್ಲಿ ಅಕ್ಷರಾ ಸುರೇಶ್, ನೇಹೇಶ್ ಪೋಲ್ ಮುಂತಾದ ಕಲಾವಿದರು ನಟಿಸಿದ್ದಾರೆ. ಸಿನಿಮಾ ಪ್ರದರ್ಶನದಲ್ಲೂ ಹೊಸ ಪ್ರಯೋಗ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

ಎವರಿಒನ್ ವಾಂಟ್ಸ್ ದಿಸ್: ಒಂದೇ ಸಿನಿಮಾದಲ್ಲಿ ಹಲವು ಭಾಷೆ; ಆದರೆ ಡಬ್ಬಿಂಗ್ ಅಲ್ಲ
Nehesh Poll, Akshara Suresh
ಮದನ್​ ಕುಮಾರ್​
|

Updated on: Feb 09, 2026 | 9:13 PM

Share

ಈಗ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಬರುತ್ತಿವೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಆದರೆ ಒಂದೇ ಸಿನಿಮಾದಲ್ಲಿ ಹಲವು ಭಾಷೆ ಬಳಸಿ ಅದನ್ನು ದೇಶಾದ್ಯಂತ ಬಿಡುಗಡೆ ಮಾಡುವ ಪ್ಲ್ಯಾನ್ ಸಿದ್ಧವಾಗಿದೆ. ಹೌದು, ‘ಎವರಿಒನ್ ವಾಂಟ್ಸ್ ದಿಸ್’ (Everyone Wants This) ಸಿನಿಮಾ ತಂಡ ಈ ರೀತಿ ಮಾಡಲು ಸಿದ್ಧವಾಗಿದೆ. ಇತ್ತೀಚೆಗೆ ಈ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಯುವ ಉದ್ಯಮಿ ನೇಹೇಶ್ ಪೋಲ್ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ.

‘ಎವರಿಒನ್ ವಾಂಟ್ಸ್ ದಿಸ್’ ಸಿನಿಮಾದ ಮೂಲಕ ಚಿತ್ರಪ್ರೇಮಿಗಳಿಗೆ ಒಂದು ಸುಂದರ ಸಿನಿಮ್ಯಾಟಿಕ್ ಅನುಭವ ನೀಡಬೇಕು ಎಂಬುದು ನೇಹೇಶ್ ಪೋಲ್ ಅವರ ಆಸೆ. ಈ ಸಿನಿಮಾವನ್ನು ತಮ್ಮದೇ ‘ರ‍್ಯಾಡಿಕಲ್ ಕಾನ್ಸೆಪ್ಟ್ಸ್ ಸ್ಡುಡಿಯೋ’ ಬ್ಯಾನರ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಹಾಗೂ ನಿರ್ದೇಶನ ಕೂಡ ಅವರೇ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ನಾಯಕನಾಗಿಯೂ ನಟಿಸುತ್ತಿದ್ದಾರೆ.

ಬಹುಭಾಷೆಯಲ್ಲಿ ಮೂಡಿಬಂದ ‘ಎವರಿಒನ್ ವಾಂಟ್ಸ್ ದಿಸ್’ ಸಿನಿಮಾದ ಹಾಡು:

ಸಾಗರ್‌ ಮೂರ್ತಿ ಅವರು ಛಾಯಾಗ್ರಹಣ ಮತ್ತು ನೃತ್ಯ ನಿರ್ದೇಶನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಕೆ. ಬಾಲಸುಬ್ರಮಣ್ಯಂ ಅವರು ಕೆಲಸ ಮಾಡಿದ್ದಾರೆ. ದೀಪಿಕಾ ಮಾಚ್‌ಮೊಂಡ ಅವರ ಕಲಾ ನಿರ್ದೇಶನ, ಶ್ರೀಧರ್‌ ವೀರ್ ಅವರ ವಸ್ತ್ರ ವಿನ್ಯಾಸ ಈ ಸಿನಿಮಾಗಿದೆ. ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಹಾಡಿನ ಬಿಡುಗಡೆ ಮಾಡಲಾಯಿತು.

ರೇಣುಕಾಂಬ ಸ್ಟುಡಿಯೋದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ನಿರ್ದೇಶಕ, ನಟ ನೇಹೇಶ್ ಪೋಲ್, ‘2026ರಲ್ಲಿ 3 ಸಿನಿಮಾಗಳನ್ನು ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಈಗಿನ ಸಿನಿಮಾವು 90 ನಿಮಿಷವಾಗಿರುತ್ತದೆ. ದುಡ್ಡಿನ ಆಸೆಗಾಗಿ ವಜ್ರ ದರೋಡೆ ಮಾಡಿದಾಗ, ಅದರಿಂದ ಆಗುವ ಅನಾಹುತಗಳನ್ನು ಕಾಮಿಡಿ ಮತ್ತು ಥ್ರಿಲ್ಲರ್ ಮಾದರಿಯಲ್ಲಿ ಮನರಂಜನೆಯೊಂದಿಗೆ ತೋರಿಸಲಾಗುತ್ತಿದೆ’ ಎಂದರು.

ಇದನ್ನೂ ಓದಿ: ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಅಕ್ಷರಾ ಸುರೇಶ್ ಅವರು ನಾಯಕಿಯಾಗಿ ನಟಿಸಿರುವುದು ಮಾತ್ರವಲ್ಲದೇ ಸಿನಿಮಾಗೆ ಕಥೆ ಬರೆದು ಕ್ರಿಯೇಟೀವ್ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ‘ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಸಾಹಿತ್ಯ ಬಳಸಿಕೊಳ್ಳಲಾಗಿದೆ. ಒಟ್ಟು ಆರು ಹಾಡುಗಳು ಇರಲಿದೆ. ಪೇಪರ್ ವರ್ಕ್‌ನಂತೆಯೇ ಚಿತ್ರೀಕರಣ ನಡೆಸಿ, ಅಲ್ಲಿಯೇ ಸಂಕಲನವನ್ನು ಒಟ್ಟಿಗೆ ಮಾಡಲಾಗುವುದರಿಂದ ಸಮಯ ಉಳಿತಾಯವಾಗುತ್ತದೆ’ ಎಂದು ಅಕ್ಷರಾ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ