Monsoon Raaga: ಡಾಲಿ-ರಚಿತಾ ಜೋಡಿಯ ‘ಮಾನ್ಸೂನ್ ರಾಗ’ ಚಿತ್ರ ನೋಡಲು ಇಲ್ಲಿದೆ 5 ಮುಖ್ಯ ಕಾರಣ
Daali Dhananjay | Rachita Ram: ಡಾಲಿ ಧನಂಜಯ್ ನಟನೆಯ ಸಿನಿಮಾ ಎಂದರೆ ಒಂದಷ್ಟು ವಿಶೇಷಗಳು ಇದ್ದೇ ಇರುತ್ತವೆ ಎಂಬ ಭರವಸೆ ಅಭಿಮಾನಿಗಳಿಗೆ ಇದೆ. ‘ಮಾನ್ಸೂನ್ ರಾಗ’ ಚಿತ್ರ ಕೂಡ ನಿರೀಕ್ಷೆ ಸೃಷ್ಟಿಸಿದೆ.
‘ಮಾನ್ಸೂನ್ ರಾಗ’ (Monsoon Raaga) ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ವಿಶೇಷ ನಿರೀಕ್ಷೆ ಇದೆ. ರವೀಂದ್ರನಾಥ್ ಅವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ಡಾಲಿ ಧನಂಜಯ್, ರಚಿತಾ ರಾಮ್ (Rachita Ram), ಯಶಾ ಶಿವಕುಮಾರ್, ಅಚ್ಯುತ್ ಕುಮಾರ್, ಸುಹಾಸಿನಿ ಮಣಿರತ್ನಂ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇಂದು (ಸೆ.16) ‘ಮಾನ್ಸೂನ್ ರಾಗ’ ಚಿತ್ರ ಬಿಡುಗಡೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಎದುರು ಕಟೌಟ್ಗಳು ರಾರಾಜಿಸುತ್ತಿವೆ. ಡಾಲಿ ಧನಂಜಯ್ (Daali Dhananjay) ಅಭಿಮಾನಿಗಳು ಅದ್ದೂರಿಯಾಗಿ ಸಿನಿಮಾಗೆ ಸ್ವಾಗತ ಕೋರುತ್ತಿದ್ದಾರೆ. ‘ಮಾನ್ಸೂನ್ ರಾಗ’ ನೋಡಲು ಪ್ರಮುಖ 5 ಕಾರಣಗಳು ಇಲ್ಲಿವೆ..
ಕಾರಣ 1: ಡಾಲಿ ಧನಂಜಯ್-ರಚಿತಾ ರಾಮ್ ಕಾಂಬಿನೇಷನ್
ಡಾಲಿ ಧನಂಜಯ್ ಮಾಡುವ ಪ್ರತಿ ಸಿನಿಮಾಗಳು ಕೂಡ ವಿಶೇಷವಾಗಿ ಇರುತ್ತವೆ. ಅವರಿಗೆ ಈ ಬಾರಿ ರಚಿತಾ ರಾಮ್ ಜೋಡಿ ಆಗಿದ್ದಾರೆ. ಟ್ರೇಲರ್ನಲ್ಲಿ ಅವರಿಬ್ಬರ ಕಾಂಬಿನೇಷನ್ ನೋಡಿ ಸಿನಿಪ್ರಿಯರಿಗೆ ಕೌತುಕ ಹೆಚ್ಚಿದೆ. ಇದೇ ಮೊದಲ ಬಾರಿಗೆ ಅವರು ಜೊತೆಯಾಗಿ ನಟಿಸಿದ್ದಾರೆ.
ಕಾರಣ 2: ಸುಹಾಸಿನಿ-ಅಚ್ಯುತ್ ಕುಮಾರ್ ಜೋಡಿ
ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವಂತಹ ನಟ ಅಚ್ಯುತ್ ಕುಮಾರ್. ಈ ಸಿನಿಮಾದಲ್ಲಿ ಅವರ ಜೊತೆ ಸುಹಾನಿಸಿ ಮಣಿರತ್ನಂ ಕೂಡ ನಟಿಸಿರುವುದರಿಂದ ನಿರೀಕ್ಷೆ ಮೂಡಿದೆ. ಡಿಫರೆಂಟ್ ಪ್ರೇಮಕಥೆಯನ್ನು ಜನರ ಮುಂದಿಡಲಿದೆ ಈ ಸಿನಿಮಾ.
ಕಾರಣ 3: ಗೌಪ್ಯವಾಗಿವೆ ಕೆಲವು ಪಾತ್ರಗಳು
ಈ ಸಿನಿಮಾದಲ್ಲಿನ ಕೆಲವು ಪಾತ್ರಗಳನ್ನು ಮೊದಲೇ ರಿವೀಲ್ ಮಾಡಿಲ್ಲ. ಚಿತ್ರಮಂದಿರದಲ್ಲಿ ಒಂದಷ್ಟು ಪಾತ್ರಗಳು ಸರ್ಪ್ರೈಸ್ ನೀಡಲಿವೆ. ಟ್ರೇಲರ್ನಲ್ಲಿ ತೋರಿಸಿದ್ದಕ್ಕಿಂತಲೂ ಹೆಚ್ಚಿನ ವಿಚಾರಗಳು ಈ ಸಿನಿಮಾದಲ್ಲಿ ಅಡಗಿವೆ.
ಕಾರಣ 4: ಯಶಾ ಶಿವಕುಮಾರ್ ಹಾಡು ಸೂಪರ್ ಹಿಟ್
‘ಮಾನ್ಸೂನ್ ರಾಗ’ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ಯಶಾ ಶಿವಕುಮಾರ್ ಕಾಣಿಸಿಕೊಂಡಿರುವ ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. 20 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ದೊಡ್ಡಪರದೆಯಲ್ಲಿ ಈ ಸಾಂಗ್ ನೋಡಲು ಫ್ಯಾನ್ಸ್ ಬಯಸಿದ್ದಾರೆ.
ಕಾರಣ 5: ಡಾಲಿಯ ಡಿಫರೆಂಟ್ ಸಿನಿಮಾ
ರಗಡ್ ಪಾತ್ರಗಳಿಗೆ ಡಾಲಿ ಫೇಮಸ್. ಹಾಗಂತ ಅವರು ಒಂದೇ ರೀತಿಯ ಚಿತ್ರಗಳಿಗೆ ತಮ್ಮನ್ನು ಸೀಮಿತವಾಗಿಸಿಕೊಂಡಿಲ್ಲ. ವಿಭಿನ್ನವಾದಂತಹ ಸ್ಕ್ರಿಪ್ಟ್ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥ ಚಿತ್ರಗಳ ಸಾಲಿಗೆ ಸೇರುವಂತಹ ಸಿನಿಮಾ ‘ಮಾನ್ಸೂನ್ ರಾಗ’. ಗುರು ಕಶ್ಯಪ್ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.