AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ಕಹಾನಿ ಇರುವ ‘ಮಾರ್ನಮಿ’ ಸಿನಿಮಾದಲ್ಲಿ ರಿತ್ವಿಕ್ ಮಠದ್; ಹೇಗಿದೆ ನೋಡಿ ಟೀಸರ್

‘ಮಾರ್ನಮಿ’ ಸಿನಿಮಾದ ಹೊಸ ಟೀಸರ್ ಅನಾವರಣ ಆಗಿದೆ. ಇದರಲ್ಲಿ ನಟ ರಿತ್ವಿಕ್ ಮಠದ್ ಅವರ ಪಾತ್ರ ಪರಿಚಯ ಮಾಡಲಾಗಿದೆ. ರಿಶಿತ್ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಿತ್ವಿಕ್ ಮಠದ್ ಜೊತೆ ಚೈತ್ರಾ ಜೆ. ಆಚಾರ್, ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ ಮುಂತಾದ ಕಲಾವಿದರು ನಟಿಸಿದ್ದಾರೆ.

ಕರಾವಳಿ ಕಹಾನಿ ಇರುವ ‘ಮಾರ್ನಮಿ’ ಸಿನಿಮಾದಲ್ಲಿ ರಿತ್ವಿಕ್ ಮಠದ್; ಹೇಗಿದೆ ನೋಡಿ ಟೀಸರ್
Marnami Movie Team
ಮದನ್​ ಕುಮಾರ್​
|

Updated on: Jun 11, 2025 | 7:09 PM

Share

ಕನ್ನಡದ ಕಿರುತೆರೆಯಲ್ಲಿ ನಟ ರಿತ್ವಿಕ್ ಮಠದ್ (Rithvik Mathad) ಅವರು ಫೇಮಸ್ ಆಗಿದ್ದಾರೆ. ‘ಅನುರೂಪ’, ‘ನಿನಗಾಗಿ’, ‘ಗಿಣಿರಾಮ’ ಸೀರಿಯಲ್​ಗಳಿಂದ ಅವರು ಜನರನ್ನು ರಂಜಿಸಿದ್ದಾರೆ. ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಹಿರಿತೆರೆಯಲ್ಲಿ ಈಗ ಅವರು ‘ಮಾರ್ನಮಿ’ (Marnami Movie) ಸಿನಿಮಾದಲ್ಲಿ ರಗಡ್ ಪಾತ್ರ ಮಾಡಿದ್ದಾರೆ. ‘ಗಿಫ್ಟ್ ಬಾಕ್ಸ್’ ಸಿನಿಮಾದ ನಂತರ ಸಮಯ ತೆಗೆದುಕೊಂಡು ಕಿರುತೆರೆಯಿಂದ ಈಗ ರಿತ್ವಿಕ್ ಮಠದ್ ಅವರು ಹಿರಿತೆರೆಗೆ ಮರಳಿದ್ದಾರೆ. ಒಂದೊಳ್ಳೆಯ ಕಥೆ ಮತ್ತು ತಂಡದ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಾರ್ನಮಿ’ ಸಿನಿಮಾದ ಟೀಸರ್ (Marnami Movie Teaser) ಬಿಡುಗಡೆ ಆಗಿದೆ. ರಿತ್ವಿಕ್ ಮಠದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರವನ್ನು ಪರಿಚಯ ಮಾಡಿಸುವಂತಹ ಟೀಸರ್ ಬಿಡುಗಡೆ ಮಾಡಲಾಗಿದೆ.

‘ಗುಣಾದ್ಯಾ ಪ್ರೊಡಕ್ಷನ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ‘ಮಾರ್ನಮಿ’ ಟೀಸರ್ ವೀಕ್ಷಣೆಗೆ ಲಭ್ಯವಾಗಿದೆ. ಈ ಟೀಸರ್​ನಿಂದ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ನಿರ್ದೇಶಕರು ಕಥೆಯ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಆದರೂ ಕೂಡ ಕೌತುಕ ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಚರಣ್ ರಾಜ್ ಅವರು ಸಂಗೀತ ನೀಡಿರುವುದು ಚಿತ್ರತಂಡಕ್ಕೆ ಪ್ಲಸ್ ಆಗಿದೆ.

‘ಮಾರ್ನಮಿ’ ಸಿನಿಮಾಗೆ ರಿಶಿತ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಚಿತ್ರಕತೆ ಹಾಗೂ ಸಂಭಾಷಣೆ ಕೂಡ ಅವರದ್ದೇ. ಈ ಸಿನಿಮಾದಲ್ಲಿ ರಿತ್ವಿಕ್ ಮತ್ತು ಚೈತ್ರಾ ಜೆ. ಆಚಾರ್ ಜೋಡಿಯಾಗಿದ್ದಾರೆ. ಸುಮನ್ ತಲ್ವಾರ್, ಸೋನು ಗೌಡ, ಪ್ರಕಾಶ್ ತುಮಿನಾಡು, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ರೋಚಿತ್, ಮೈಮ್ ರಾಮದಾಸ್, ಚೈತ್ರಾ ಶೆಟ್ಟಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ
Image
ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
Image
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
Image
ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್​ರಾಜ್​​ನಲ್ಲಿ ‘ಸೀತಾ ರಾಮ’ ತಂಡ
Image
ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ನಟ

ಶಿವಸೇನ ಅವರು ಛಾಯಾಗ್ರಹಣ ಮಾಡಿದ್ದಾರೆ. ವರ್ಷಾ ಆಚಾರ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ‘ಗುಣಾಧ್ಯ ಪ್ರೊಡಕ್ಷನ್ಸ್’ ಮೂಲಕ ಶಿಲ್ಪಾ ನಿಶಾಂತ್ ಅವರು ‘ಮಾರ್ನಮಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಕಾರ್ತಿಕ್ ಮಹೇಶ್, ಕೆಪಿ ಅರವಿಂದ್, ದಿವ್ಯ ಉರುಡುಗ ಮುಂತಾದವರು ಸಾಕ್ಷಿಯಾದರು.

ನಿರ್ಮಾಪಕ ನಿಶಾಂತ್ ಅವರು ಸಿನಿಮಾ ಬಗ್ಗೆ ಮಾತನಾಡಿದರು. ‘ಶೀಘ್ರದಲ್ಲೇ ಟ್ರೇಲರ್ ಬರಲಿದೆ. ನಮ್ಮ ಸಿನಿಮಾದಲ್ಲಿ ಅತ್ಯುತ್ತಮ ಪಾತ್ರವರ್ಗ ಮತ್ತು ತಂತ್ರಜ್ಞರು ಇದ್ದಾರೆ. ನಿರ್ಮಾಣದಲ್ಲಿ ನನ್ನ ಪತ್ನಿ ಸಾಥ್ ನೀಡಿದರು. ಚಿತ್ರೀಕರಣ ಮುಕ್ತಾಯ ಆಗಿದೆ. ಸೆಪ್ಟೆಂಬರ್​ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಗುರಿ ಇದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ

ಈ ಮೊದಲು ಬಿಡುಗಡೆ ಮಾಡಿದ್ದ ಎರಡು ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ನಿರ್ದೇಶಕ ರಿಶಿತ್ ಶೆಟ್ಟಿ ಅವರಿಗೆ ಖುಷಿ ನೀಡಿದೆ. ಸಿನಿಮಾ ಮೂಡಿಬರುತ್ತಿರುವ ರೀತಿಗೆ ನಟ ರಿತ್ವಿಕ್ ಮಠದ್ ಅವರು ಸಂತಸ ವ್ಯಕ್ತಪಡಿಸಿದರು. ಒಂದೊಳ್ಳೆಯ ಟೀಮ್ ಜೊತೆ ಕೆಲಸ ಮಾಡಿದ್ದಕ್ಕೆ ನಟಿ ಚೈತ್ರಾ ಜೆ. ಆಚಾರ್ ಅವರಿಗೂ ಖುಷಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್