ಸುಚೇಂದ್ರ ಪ್ರಸಾದ್​ ನಿರ್ದೇಶನದಲ್ಲಿ ‘ಮಾವು ಬೇವು’; ಹೊಸ ಪ್ರಯೋಗದ ಸಿನಿಮಾ ಏ.21ಕ್ಕೆ ಬಿಡುಗಡೆ

ಭಿನ್ನ ಪರಿಕಲ್ಪನೆಯ ‘ಮಾವು ಬೇವು’ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಈಗಾಗಲೇ ಈ ಸಿನಿಮಾವನ್ನು ವೀಕ್ಷಿಸಿರುವ ಚಿತ್ರರಂಗದ ಗಣ್ಯರು, ಸಾಹಿತ್ಯ ಲೋಕದ ದಿಗ್ಗಜರು ಮೆಚ್ಚಿ ಕೊಂಡಾಡಿದ್ದಾರೆ.

ಸುಚೇಂದ್ರ ಪ್ರಸಾದ್​ ನಿರ್ದೇಶನದಲ್ಲಿ ‘ಮಾವು ಬೇವು’; ಹೊಸ ಪ್ರಯೋಗದ ಸಿನಿಮಾ ಏ.21ಕ್ಕೆ ಬಿಡುಗಡೆ
‘ಮಾವು ಬೇವು’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on:Apr 14, 2023 | 10:18 PM

ನಟನಾಗಿ ಸುಚೇಂದ್ರ ಪ್ರಸಾದ್ (Suchendra Prasad)​ ಅವರು ಜನಮನ ಗೆದ್ದಿದ್ದಾರೆ. ಈಗ ಅವರು ನಿರ್ದೇಶಕನಾಗಿಯೂ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅವರ ನಿರ್ದೇಶನದಲ್ಲಿ ‘ಮಾವು ಬೇವು’ ಸಿನಿಮಾ (Maavu Bevu) ಸಿದ್ಧಗೊಂಡಿದೆ. ಏಪ್ರಿಲ್​ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರವೇ ಒಂದು ಪ್ರಯೋಗ. ಸಿನಿಮಾದ ಕಥೆಗೆ ಅನುಗುಣವಾಗಿ ಹಾಡುಗಳನ್ನು ಸಿದ್ಧಪಡಿಸುವುದು ವಾಡಿಕೆ. ಆದರೆ ಈಗಾಗಲೇ ಜನಪ್ರಿಯವಾಗಿರುವ ಹಾಡುಗಳಿಗೆ (Kannada Songs) ಅನುಗುಣವಾಗಿ ಕಥೆ ಬರೆದು ಸಿನಿಮಾ ಮಾಡುವುದು ನಿಜಕ್ಕೂ ಹೊಸ ಪ್ರಯೋಗ. ಆ ಕಾರಣಕ್ಕಾಗಿ ‘ಮಾವು ಬೇವು’ ಸಿನಿಮಾ ವಿಶೇಷ ಎನಿಸಿಕೊಳ್ಳಲಿದೆ.

70-80ರ ದಶಕದಲ್ಲಿ ಕವಿ ದೊಡ್ಡರಂಗೇಗೌಡ, ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರಾದ ಸಿ. ಅಶ್ವತ್ಥ್ ಹಾಗೂ ವೈದಿ ಜೋಡಿಯ ಸಮಾಗಮದಲ್ಲಿ ‘ಮಾವು ಬೇವು’ ಎಂಬ ಆಲ್ಬಂ ಮೂಡಿಬಂದಿತ್ತು. ಅದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಅದನ್ನು ಸಿನಿಮಾ ರೂಪಕ್ಕೆ ತರಬೇಕೆಂದು ಸಿ. ಅಶ್ವತ್ಥ್, ಬಾಲಸುಬ್ರಮಣ್ಯಂ ಹಾಗೂ ದೊಡ್ಡರಂಗೇಗೌಡ ಅವರು 40 ವರ್ಷಗಳ ಹಿಂದೆಯೇ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಆ ಕನಸು ಈಗ ನನಸಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ: ಪ್ರೊ. ದೊಡ್ಡರಂಗೇಗೌಡ

ಇದನ್ನೂ ಓದಿ
Image
Kabzaa 2: ಕಬ್ಜ 2 ಸಿನಿಮಾ ಪೋಸ್ಟರ್ ಬಿಡುಗಡೆ, ಖಾಲಿ ಕುರ್ಚಿಯ ಒಡೆಯ ಯಾರು?
Image
‘ಕೆಜಿಎಫ್​ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?
Image
Rishab Shetty: ಭರ್ಜರಿಯಾಗಿ ನಡೀತಿದೆ ‘ಕಾಂತಾರ 2’ ತಯಾರಿ; ರಿಷಬ್ ಶೆಟ್ಟಿ ಕೊಟ್ರು ಅಪ್​ಡೇಟ್​
Image
Komal: ತಮ್ಮ ಪಾತ್ರಗಳಿಗೆ ತಾವೇ ಐಡಿಯಾ ಕೊಟ್ಟ ಪ್ರಸಂಗಗಳ ನೆನಪಿಸಿಕೊಂಡ ಕೋಮಲ್

ಸುಚೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ, ತೆರೆ ಕಾಣಿಸಲು ಸಜ್ಜಾಗಿದ್ದಾರೆ. ‘ಲಹರಿ ಮ್ಯೂಸಿಕ್​’ ಸಂಸ್ಥೆಯ ವೇಲು ಅವರು ಆಡಿಯೋ ಹಕ್ಕುಗಳನ್ನು ನೀಡುವ ಮೂಲಕ ಜೊತೆಯಾಗಿದ್ದಾರೆ. ಡ್ಯಾನಿ ಕುಟ್ಟಪ್ಪ ಈ ಸಿನಿಮಾದಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ಶ್ರೀನಿವಾಸ ಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರಾ ಎಚ್.ಜಿ., ಸುಪ್ರಿಯಾ ಎಸ್. ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚಿಸಿದಾಗ ಮನಸ್ಸು ವಿಚಲಿತವಾಗುತ್ತದೆ’: ಸುಚೇಂದ್ರ ಪ್ರಸಾದ್

ಈಗಾಗಲೇ ‘ಮಾವು ಬೇವು’ ಸಿನಿಮಾವನ್ನು ವೀಕ್ಷಿಸಿರುವ ಚಿತ್ರರಂಗದ ಗಣ್ಯರು, ಸಾಹಿತ್ಯ ಲೋಕದ ದಿಗ್ಗಜರು ಮೆಚ್ಚಿ ಕೊಂಡಾಡಿದ್ದಾರೆ. ಹಿರಿಯ ಕವಿ ಬಿ.ಆರ್. ಲಕ್ಷ್ಮಣ ರಾವ್ ಸುದೀರ್ಘವಾದ ಪತ್ರ ಬರೆಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇಂಥ ಸಿನಿಮಾಗಳನ್ನು ನಿರ್ಮಾಣ ಮಾಡಲು ನಿರ್ಮಾಪಕರು ಸಿಗುವುದೇ ಕಷ್ಟ. ಎಸ್. ರಾಜಶೇಖರ್ ಅವರು ಆ ಧೈರ್ಯ ತೋರಿಸಿದ್ದಾರೆ. ಬಹಳ ಆಸ್ಥೆಯಿಂದ ಈ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದಾರೆ. ಆ ಮೂಲಕ ಸುಚೇಂದ್ರ ಪ್ರಸಾದ್ ಅವರ ಕನಸಿಗೆ ಎಸ್. ರಾಜಶೇಖರ್ ಜೊತೆಯಾಗಿದ್ದಾರೆ. ಒಟ್ಟಾರೆಯಾಗಿ ‘ಮಾವು ಬೇವು’ ಚಿತ್ರವು ಕನ್ನಡದ ಪ್ರೇಕ್ಷಕರಿಗೆ ಹೊಸ ಬಗೆಯ ಅನುಭೂತಿಯನ್ನು ನೀಡಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಈ ಸಿನಿಮಾದ ಟ್ರೇಲರ್​ ಕೂಡ ರೆಟ್ರೋ ಮಾದರಿಯಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:17 pm, Fri, 14 April 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ