AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾದ ಸೋಮವಾರದ ಗಳಿಕೆಯಲ್ಲಿ ಭಾರೀ ಕುಸಿತ

'ಟಾಕ್ಸಿಕ್' ಸಿನಿಮಾ ಅಬ್ಬರ ದಿನ ಕಳೆದಂತೆ ಕುಗ್ಗುತ್ತಿದ್ದು, ಮೊದಲ ಸೋಮವಾರ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. 13,400 ಶೋಗಳಿಂದ ಕೇವಲ 7.45 ಕೋಟಿ ನೆಟ್ ಸಂಗ್ರಹಿಸಿದ್ದು, ಥಿಯೇಟರ್ ಆಕ್ಯುಪೆನ್ಸಿ ಶೇ. 17ಕ್ಕೆ ಕುಸಿದಿದೆ. 6 ದಿನಗಳಲ್ಲಿ ವಿಶ್ವದಾದ್ಯಂತ 304.05 ಕೋಟಿ ರೂಪಾಯಿ ಗಳಿಸಿದರೂ, ಶೋಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿತ್ರತಂಡ ಹಾಗೂ ವಿತರಕರಲ್ಲಿ ಆತಂಕ ಮೂಡಿಸಿದೆ.,

‘ಟಾಕ್ಸಿಕ್’ ಸಿನಿಮಾದ ಸೋಮವಾರದ ಗಳಿಕೆಯಲ್ಲಿ ಭಾರೀ ಕುಸಿತ
ಟಾಕ್ಸಿಕ್
ರಾಜೇಶ್ ದುಗ್ಗುಮನೆ
|

Updated on: Sep 01, 2026 | 7:06 AM

Share

ಮುಖ್ಯಾಂಶಗಳು

  • ಸೋಮವಾರದ ಪರೀಕ್ಷೆಯಲ್ಲಿ 'ಟಾಕ್ಸಿಕ್' ಗಳಿಕೆ ಡೌನ್
  • 6 ದಿನಕ್ಕೆ 300 ಕೋಟಿ ಕ್ಲಬ್ ಸೇರಿದರೂ ತಪ್ಪದ ಆತಂಕ
  • ಇಂಗ್ಲಿಷ್ ವರ್ಷನ್ ರಿಲೀಸ್ ಒಂದೇ ಬಾಕಿ

‘ಟಾಕ್ಸಿಕ್’ ಸಿನಿಮಾ (Toxic Movie) ಅಬ್ಬರ ದಿನ ಕಳೆದಂತೆ ಕುಗ್ಗುತ್ತಿದೆ. ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಸಿನಿಮಾ ಮೊದಲ ಸೋಮವಾರದ ಪರೀಕ್ಷೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಗಳಿಕೆಯಲ್ಲಿ ದೊಡ್ಡ ಕುಸಿತ ಕಾಣಿಸಿಕೊಂಡಿದ್ದು, ಚಿತ್ರ 7.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಲು ಮಾತ್ರ ಸಾಧ್ಯವಾಗಿದೆ. 13,400 ಶೋ ನೀಡಲಾಗಿತ್ತು. ಆದರೆ, ಆಕ್ಯುಪೆನ್ಸಿ ಕೇವಲ 17 ಪರ್ಸೆಂಟ್ ಇತ್ತು.

ಭಾರತದಲ್ಲಿ ಸಿನಿಮಾದ ಒಟ್ಟು ನೆಟ್ ಕಲೆಕ್ಷನ್ 221.55 ಕೋಟಿ ರೂಪಾಯಿ ಆಗಿದೆ. ಇನ್ನು ಗ್ರಾಸ್ ಕಲೆಕ್ಷನ್ 264.80 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಸಾಗರೋತ್ತರ ಮಾರುಕಟ್ಟೆಯಲ್ಲೂ ‘ಟಾಕ್ಸಿಕ್’ ಹವಾ ಕಡಿಮೆ ಆಗಿದೆ. ಸೋಮವಾರ 2.00 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಒಟ್ಟು ವಿದೇಶಿ ಗ್ರಾಸ್ ಗಳಿಕೆಯನ್ನು 39.25 ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಭಾರತ ಹಾಗೂ ವಿದೇಶಿ ಕಲೆಕ್ಷನ್ ಸೇರಿ ‘ಟಾಕ್ಸಿಕ್’ ಸಿನಿಮಾ ಆರು ದಿನಗಳ ಅವಧಿಯಲ್ಲಿ ವಿಶ್ವದಾದ್ಯಂತ ಭರ್ಜರಿ 304.05 ಕೋಟಿ ರೂಪಾಯಿ ಗ್ರಾಸ್ ಸಂಗ್ರಹಿಸಿ, ಯಶಸ್ವಿಯಾಗಿ 300 ಕೋಟಿ ರೂಪಾಯಿ ಕ್ಲಬ್‌ಗೆ ಪಾದಾರ್ಪಣೆ ಮಾಡಿದೆ.

ಮೊದಲ ದಿನದ 101.10 ಕೋಟಿ ಬೃಹತ್ ಆರಂಭ ಹಾಗೂ ವಾರಾಂತ್ಯದ ಕ್ರೇಜ್‌ಗೆ ಹೋಲಿಸಿದರೆ, ಸೋಮವಾರದ ಕಲೆಕ್ಷನ್ ಮತ್ತು ಥಿಯೇಟರ್ ಆಕ್ಯುಪೆನ್ಸಿ ಗಣನೀಯವಾಗಿ ಕಡಿಮೆಯಾಗಿರೋದು ಕಾಣಿಸುತ್ತದೆ. ಇದು ಚಿತ್ರತಂಡಕ್ಕೂ ಹಾಗೂ ವಿತರಕರಿಗೂ ಕೊಂಚ ಆತಂಕ ತಂದೊಡ್ಡಿದೆ.

ವಾರದ ಕೆಲಸದ ದಿನಗಳಲ್ಲಿ ಶೋಗಳ ಸಂಖ್ಯೆಯೂ ಕುಗ್ಗುತ್ತಿದ್ದು, ಗಳಿಕೆಯಲ್ಲಿ ಕಾಣಿಸಿಕೊಂಡಿರುವ ಈ ಡಲ್ ಟ್ರೆಂಡ್ ಮುಂದಿನ ದಿನಗಳಲ್ಲಿ ಹೇಗೆ ಬದಲಾಗಲಿದೆ ಹಾಗೂ ಮುಂಬರುವ ಎರಡನೇ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ ಚೇತರಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಭಾನುವಾರ ‘ಟಾಕ್ಸಿಕ್’ ಸಿನಿಮಾ ಗಳಿಕೆ ಮಾಡಿದ್ದೆಷ್ಟು? ಇಲ್ಲಿದೆ ಸಂಪೂರ್ಣ ವಿವರ

‘ಟಾಕ್ಸಿಕ್’ ಇನ್ನೂ ಇಂಗ್ಲಿಷ್ ಭಾಷೆಯಲ್ಲಿ ರಿಲೀಸ್ ಆಗಿಲ್ಲ. ಒಂದೊಮ್ಮೆ ಆ ಭಾಷೆಯಲ್ಲಿ ಸಿನಿಮಾ ತೆರೆಗೆ ಬಂದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರೆ ಚಿತ್ರ ಕೊಂಚ ಚೇತರಿಕೆ ಕಾಣಿಸಿಕೊಳ್ಳಬಹುದು. ಇಲ್ಲವಾದಲ್ಲಿ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಯಶ್ ಅವರು ‘ಕೆಜಿಎಫ್ 2’ ಬಳಿಕ ನಟಿಸಿದ ಸಿನಿಮಾ ಇದಾಗಿತ್ತು. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಸೃಷ್ಟಿ ಆಗಿತ್ತು. ಆದರೆ, ನಿರೀಕ್ಷೆ ಈಗ ಹುಸಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ