AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಧನ್ವೀರ್ ವಿರುದ್ಧ ಕೋರ್ಟ್​​ನಲ್ಲಿ ಮಾನನಷ್ಟ ದೂರು ದಾಖಲು ಮಾಡಿ ವಿಜಯಲಕ್ಷ್ಮಿ

ಸ್ಯಾಂಡಲ್‌ವುಡ್ ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ವೈಮನಸ್ಸು ಈಗ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿದೆ. ಧನ್ವೀರ್ ತಮ್ಮ ವಿರುದ್ಧ ಮಾನನಷ್ಟ ಉಂಟುಮಾಡುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿಜಯಲಕ್ಷ್ಮಿ ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಿಎನ್‌ಎಸ್ ಸೆಕ್ಷನ್ ಅಡಿಯಲ್ಲಿ ಖಾಸಗಿ ಕ್ರಿಮಿನಲ್ ದೂರು ದಾಖಲಿಸಿ, ಸಮನ್ಸ್ ಜಾರಿಗೆ ಮನವಿ ಮಾಡಿದ್ದಾರೆ.

ನಟ ಧನ್ವೀರ್ ವಿರುದ್ಧ ಕೋರ್ಟ್​​ನಲ್ಲಿ ಮಾನನಷ್ಟ ದೂರು ದಾಖಲು ಮಾಡಿ ವಿಜಯಲಕ್ಷ್ಮಿ
ದರ್ಶನ್,ಧನ್ವೀರ್, ವಿಜಯಲಕ್ಷ್ಮಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 02, 2026 | 12:45 PM

Share

ಮುಖ್ಯಾಂಶಗಳು

  • ನಟ ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ
  • ಮಾನನಷ್ಟ ದೂರು ದಾಖಲು
  • ಬಿಎನ್‌ಎಸ್ ಸೆಕ್ಷನ್‌ ಅಡಿಯಲ್ಲಿ ಸಮನ್ಸ್‌ಗೆ ಮನವಿ

ಸ್ಯಾಂಡಲ್‌ವುಡ್ ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ಮುಸುಕಿನ ಗುದ್ದಾಟ ಇತ್ತೀಚೆಗೆ ಬಯಲಿಗೆ ಬಂದಿತ್ತು. ಈಗ ಇದು ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರು ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ದೂರು ದಾಖಲು ಮಾಡಿದ್ದಾರೆ.

ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಈ ದೂರು ಸಲ್ಲಿಕೆಯಾಗಿದೆ. ನಟ ಧನ್ವೀರ್ ಅವರು ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

ನ್ಯಾಯಾಲಯಕ್ಕೆ ಮನವಿ

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 356(2) ರ ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಲಾಗಿದ್ದು, ಆರೋಪಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು, ಆಡಿಯೋ/ವೀಡಿಯೋ ರೆಕಾರ್ಡಿಂಗ್‌ಗಳನ್ನು ಸೂಕ್ತ ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ.

ಜೊತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಗೆ ಅವಕಾಶ ನೀಡಬೇಕು ಹಾಗೂ ಬಿಎನ್‌ಎಸ್ ಸೆಕ್ಷನ್ 222(1) ರ ಅಡಿಯಲ್ಲಿ ಈ ಖಾಸಗಿ ದೂರನ್ನು ಪರಿಗಣಿಸಿ, ಆರೋಪಿ ಧನ್ವೀರ್ ವಿರುದ್ಧ ಸೆಕ್ಷನ್ 227 ರ ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಬೇಕೆಂದು ನ್ಯಾಯಾಲಯಕ್ಕೆ ಕೋರಲಾಗಿದೆ.

ಇದನ್ನೂ ಓದಿ: ದರ್ಶನ್ ಪುತ್ರ ವಿನೀಶ್​ ಹುಟ್ಟುಹಬ್ಬ, ಶುಭ ಹಾರೈಸಿದ ವಿಜಯಲಕ್ಷ್ಮಿ ದರ್ಶನ್ 

ಕಿತ್ತಾಟದ ಹಿನ್ನೆಲೆ

ದರ್ಶನ್ ಜೈಲು ಸೇರಿದಾಗ ಧನ್ವೀರ್ ಅವರು ವಿಜಯಲಕ್ಷ್ಮೀ ಬೆಂಬಲಕ್ಕೆ ನಿಂತರು. ಕಾಲ ಕ್ರಮೇಣ ಇವರ ಮಧ್ಯೆ ಅಂತರ ಮೂಡಿದೆ ಎಂದು ವರದಿಗಳಾದವು. ಆದರೆ, ಇದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ, ಇತ್ತೀಚೆಗೆ ಧನ್ವೀರ್ ಅವರು ವಿಜಯಲಕ್ಷ್ಮೀ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಜೈಲಿನಿಂದ ಹೊರ ಬರೋದೇ ಇಷ್ಟ ಇಲ್ಲ’ ಎಂದು ಹೇಳಿದ್ದರು. ಅದೇ ರೀತಿ ಧನ್ವೀರ್ ಮೇಲೆ ಮೋಸ ಮಾಡಿದ ಆರೋಪವನ್ನು ವಿಜಯಲಕ್ಷ್ಮಿ ಹೊರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!