AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಹೊಸ ತಂಡಕ್ಕೆ ಬೆಂಬಲ ಕೊಟ್ಟ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಅವರು 'ಅಮೃತ ಅಂಜನ್' ಚಿತ್ರಕ್ಕೆ ಬೆಂಬಲ ನೀಡುವ ಮೂಲಕ ಕನ್ನಡಿಗರಿಗೆ ಸಿಗುವುದಿಲ್ಲ ಎಂಬ ಮಾತು ಸುಳ್ಳು ಮಾಡಿದ್ದಾರೆ. ಹೊಸಬರೇ ನಿರ್ಮಿಸಿದ ಈ ಚಿತ್ರಕ್ಕೆ ಶುಭ ಹಾರೈಸಿ ಯಶ್ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. 'ಅಮೃತಾಂಜನ' ಶಾರ್ಟ್ ಫಿಲ್ಮ್ ತಂಡದವರೇ ಮಾಡಿದ 'ಅಮೃತ ಅಂಜನ್' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಯಶ್ ಅವರ ವಿಶ್ ತಂಡದ ಖುಷಿಯನ್ನು ಹೆಚ್ಚಿಸಿದೆ.

ಕನ್ನಡದ ಹೊಸ ತಂಡಕ್ಕೆ ಬೆಂಬಲ ಕೊಟ್ಟ ರಾಕಿಂಗ್ ಸ್ಟಾರ್ ಯಶ್
ಯಶ್
ರಾಜೇಶ್ ದುಗ್ಗುಮನೆ
|

Updated on: Jan 30, 2026 | 9:03 AM

Share

ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆದ ಬಳಿಕ ಕನ್ನಡಿಗರಿಗೆ ಸಿಗೋದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅವರು ಆಗಾಗ ಅದನ್ನು ಸುಳ್ಳು ಮಾಡುತ್ತಾರೆ. ಈಗ ಅವರು ಕನ್ನಡದ ಹೊಸ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಹೊಸಬರೇ ಮಾಡಿದ ‘ಅಮೃತ ಅಂಜನ್’ ಹೆಸರಿನ ಚಿತ್ರಕ್ಕೆ ಯಶ್ (Yash) ಶುಭ ಹಾರೈಸಿದ್ದಾರೆ. ಇದು ತಂಡದ ಖುಷಿ ಹೆಚ್ಚಿಸಿದೆ.

‘ಅಮೃತಾಂಜನ’ ಹೆಸರಿನ ಶಾರ್ಟ್ ಸಿನಿಮಾ ಬಂದಿತ್ತು. ಇದು ಸಖತ್ ಫೇಮಸ್ ಆಯಿತು. ಈಗ ಅದೇ ತಂಡ ‘ಅಮೃತ ಅಂಜನ್’ ಹೆಸರಿನ ಸಿನಿಮಾ ಮಾಡಿದೆ. ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಸುಧಾಕರ್ ಗೌಡ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಜ್ಯೋತಿರಾವ್ ಮೋಹಿತ್ ಇದನ್ನು ನಿರ್ದೇಶನ ಮಾಡಿದ್ದಾರೆ. ಇಂದು (ಜನವರಿ 30) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಯಶ್ ಶುಭ ಹಾರೈಸಿದ್ದಾರೆ.

‘ಅಮೃತಾಂಜನ ತಂಡದ ಕೆಲಸವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ನೀವು ದೊಡ್ಡ ಕನಸು ಕಂಡಿದ್ದೀರಾ. ಸಣ್ಣ ಕಂಟೆಂಟ್ ಮಾಡುವುದರಿಂದ ಆರಂಭಿಸಿ, ಈಗ ಸಿನಿಮಾ ಮಾಡಿದ್ದೀರಾ. ಇದು ಕಂಟೆಂಟ್ ಮಾಡುವ, ಕಥೆ ಹೇಳುವ ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಯಶ್ ಇನ್​​ಸ್ಟಾಗ್ರಾಮ್​​ನಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ. ಇದು ತಂಡದ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಕನ್ನಡದ ಮಹಿಳಾ ನಿರ್ದೇಶಕಿ

ಯಶ್ ಅವರ ವಿಶ್​​ಗೆ ಇಡೀ ತಂಡ ಖುಷಿಪಟ್ಟಿದೆ. ಸ್ಟಾರ್ ಹೀರೋನಿಂದ ಯುವ ಪ್ರತಿಭೆಗಳಿಗೆ ಬೆಂಬಲ ಸಿಕ್ಕಿದ್ದರಿಂದ ಸಿನಿಮಾಗೆ ಒಂದಷ್ಟು ಮೈಲೇಜ್ ಸಿಗೋ ನಿರೀಕ್ಷೆ ಇದೆ. ಈ ಮೊದಲು ಹಾಸ್ಯ ಪ್ರಧಾನ ಶಾರ್ಟ್​ ಫಿಲ್ಮ್​​ಗಳನ್ನು ಈ ತಂಡದವರು ಮಾಡುತ್ತಿದ್ದರು. ಸಿನಿಮಾ ಕೂಡ ಅದೇ ರೀತಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ