ಲ್ಯಾಂಬೋರ್ಗಿನಿ ಆಯ್ತು ಈಗ 3 ಕೋಟಿ ರೂ. ಲೆಕ್ಸಸ್; ಶ್ರದ್ಧಾ ಕಾರಲ್ಲಿದೆ ಫ್ರಿಡ್ಜ್, 48 ಇಂಚಿನ ಸ್ಕ್ರೀನ್
ಶ್ರದ್ಧಾ ಕಪೂರ್ ಇತ್ತೀಚೆಗೆ ಲೆಕ್ಸಸ್ LM 350h ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇದು ಅವರ ಕಾರ್ ಕಲೆಕ್ಷನ್ಗೆ ಸೇರ್ಪಡೆಯಾಗಿದ್ದು, ಈಗಾಗಲೇ ಅವರ ಬಳಿ ಲ್ಯಾಂಬೋರ್ಗಿನಿ ಹುರಾಕಾನ್ ಟೆಕ್ನಿಕಾ ಕೂಡ ಇದೆ. ಹೊಸ ಕಾರಿನಲ್ಲಿ 48 ಇಂಚಿನ ಡಿಸ್ಪ್ಲೇ, ಸನ್ ರೂಫ್, ಫ್ರಿಡ್ಜ್ ಮತ್ತು ವಿಶಾಲವಾದ ಬೂಟ್ ಸ್ಪೇಸ್ ಇದೆ.

ನಟಿಯರಿಗೆ ಹೋಲಿಸಿದರೆ ಹೀರೋಗಳಿಗೆ ಕಾರ್ ಕ್ರೇಜ್ ಇರೋದು ಹೆಚ್ಚು. ಈ ಕಾರಣಕ್ಕೆ ಅನೇಕ ಹೀರೋಗಳ ಬಳಿ ಸಾಕಷ್ಟು ದುಬಾರಿ ಹಾಗೂ ಸ್ಪೋರ್ಟ್ಸ್ ಕಾರುಗಳು ಇವೆ. ಆದರೆ, ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಭಿನ್ನ. ಶ್ರದ್ಧಾ ಕಪೂರ್ ಅವರಿಗೆ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಈ ಕಾರಣಕ್ಕೆ ಕೇವಲ ಅವರು ಕಾರಿನಲ್ಲಿ ಕೂತು ಹಾಯಾಗಿ ಬರೋದಿಲ್ಲ. ಅವರು ಕಾರನ್ನು ಡ್ರೈವ್ ಕೂಡ ಮಾಡುತ್ತಾರೆ. ಈಗ ಅವರು ದುಬಾರಿ ಲೆಕ್ಸಸ್ ಎಲ್ಎಂ 350h 4 ಸೀಟರ್ ಕಾರ್ನ ಖರೀದಿ ಮಾಡಿದ್ದಾರೆ.
ಶ್ರದ್ಧಾ ಕಪೂರ್ ಅವರ ಬಳಿ 4 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಹುರಾಕಾನ್ ಟೆಕ್ನಿಕಾ ಕಾರು ಇದೆ. ಈ ಕಾರನ್ನು ಡ್ರೈವ್ ಮಾಡಿಕೊಂಡು ಅವರು ಮುಂಬೈ ಬೀದಿಗಳಲ್ಲಿ ಸುತ್ತಾಡಿದ್ದರು. ಇದನ್ನು ಅವರು 2023ರಲ್ಲಿ ಖರೀದಿ ಮಾಡಿದ್ದರು. ಈಗ ಅವರು ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದು, ಇದರ ಬೆಲೆ 3 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
View this post on Instagram
ಶ್ರದ್ಧಾ ಕಪೂರ್ ಅವರು ಶುಕ್ರವಾರ ಜಿಮ್ ಸೆಷನ್ ಮುಗಿಸಿ ಹೊರಟಿದ್ದಾರೆ. ಈ ವೇಳೆ ಅವರನ್ನು ಕರೆದುಕೊಂಡು ಹೋಗಲು ಈ ದುಬಾರಿ ಲೆಕ್ಸಸ್ ಕಾರು ಬಂದಿದೆ. ಈ ಕಾರು ತುಂಬಾನೇ ಉದ್ದ ಇದ್ದರೂ ಇದರಲ್ಲಿ ಕೇವಲ ನಾಲ್ಕು ಜನರು ಮಾತ್ರ ಆಸೀನರಾಗಬಹುದು. ಇದಕ್ಕೆ ಕಾರಣ ಕಾರಿನ ಐಷಾರಾಮಿತನ. ಹೌದು, ಹಿಂಬದಿಯಲ್ಲಿ ತುಂಬಾನೇ ಐಷಾರಾಮಿ ವ್ಯವಸ್ಥೆಗಳು ಇರುವುದರಿಂದ ಈ ಕಾರಿನಲ್ಲಿ ಕೇವಲ ನಾಲ್ಕು ಜನ ಮಾತ್ರ ಕೂರಬಹುದು.
ಇದನ್ನೂ ಓದಿ: ಲ್ಯಾಂಬೋರ್ಗಿನಿ ಬದಲು ಸ್ವಿಫ್ಟ್ ಕಾರಲ್ಲಿ ಬಂದ ಶ್ರದ್ಧಾ ಕಪೂರ್; ಸರಳತೆ ಹೊಗಳಿದ ಫ್ಯಾನ್ಸ್
ಹಿಂಭಾಗದಲ್ಲಿ ರಿಕ್ಲೈನರ್ ಸೀಟ್ ವ್ಯವಸ್ಥೆ ಇದೆ. 48 ಇಂಚಿನ ಡಿಸ್ಪ್ಲೇ ಇದೆ. ಸನ್ರೂಪ್, ಫ್ರಿಡ್ಜ್ ಕೂಡ ಕಾರಿನಲ್ಲಿ ಇದೆ. 2487 ಸಿಸಿ ಇಂಜಿನ್ ಹೊಂದಿರುವ ಈ ಕಾರು ಪೆಟ್ರೋಲ್ ವೇರಿಯಂಟ್ನಲ್ಲಿ ಮಾತ್ರ ಲಭ್ಯ. ಇದು ಆಟೋಮ್ಯಾಟಿಕ್ ಗೇರಿಂಗ್ ಸಿಸ್ಟಮ್ನ ಹೊಂದಿದೆ. ಈ ಕಾರಿಗೆ ಬರೋಬ್ಬರಿ 752 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ. ಈ ಕಾರು ಈಗಾಗಲೇ ಜಾನ್ವಿ ಕಪೂರ್, ರಣಬೀರ್ ಕಪೂರ್ ಮೊದಲಾದವರ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:19 pm, Sat, 29 March 25