Suman: ನಟ ಸುಮನ್ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಇಂಥ ಕೆಲಸ ಮಾಡಿದ್ದು ಯಾಕೆ?

Suman Talwar: ಸೆಲೆಬ್ರಿಟಿಗಳ ನಿಧನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಟ್ಟ ಟ್ರೆಂಡ್​ ಇತ್ತೀಚೆಗೆ ಹೆಚ್ಚಿದೆ. ಅಂಥವರಿಗೆ ಪಾಠ ಕಲಿಸಲು ನಟ ಸುಮನ್​ ನಿರ್ಧರಿಸಿದ್ದಾರೆ.

Suman: ನಟ ಸುಮನ್ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಇಂಥ ಕೆಲಸ ಮಾಡಿದ್ದು ಯಾಕೆ?
ನಟ ಸುಮನ್
Follow us
| Updated By: ಮದನ್​ ಕುಮಾರ್​

Updated on:Sep 01, 2022 | 7:33 AM

ದಕ್ಷಿಣ ಭಾರತದ ಖ್ಯಾತ ನಟ ಸುಮನ್ (Suman Talwar)​ ಅವರಿಗೆ ಚಿತ್ರರಂಗದಲ್ಲಿ 4 ದಶಕಗಳ ಅನುಭವ ಇದೆ. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿರುವ ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಿತರು. ಬೇಸರದ ಸಂಗತಿ ಏನೆಂದರೆ ಈಗ ಅವರು ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ (Fake News) ಹಬ್ಬಿಸಲಾಗಿದೆ. ಈ ಬಗ್ಗೆ ಯೂಟ್ಯೂಬ್​ನಲ್ಲಿ ಹಲವು ವಿಡಿಯೋಗಳನ್ನು ಹರಿಬಿಡಲಾಗಿದೆ. ಒಮ್ಮೆಲೆ ಇದನ್ನು ನೋಡಿದರೆ ಎಂಥವರಿಗೂ ಆತಂಕ ಆಗುತ್ತದೆ. ಈ ಸುಳ್ಳು ಸುದ್ದಿ (Death Hoax) ಬಗ್ಗೆ ಸ್ವತಃ ಸುಮನ್​ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಕೆಲವು ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಕೆಟ್ಟ ಟ್ರೆಂಡ್​ ಚಾಲ್ತಿಯಲ್ಲಿದೆ. ಒಂದಷ್ಟು ಯೂಟ್ಯೂಬ್​ ಚಾನೆಲ್​ಗಳು ಸುಳ್ಳು ಸುದ್ದಿ ಹಬ್ಬಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಅದರಲ್ಲೂ ಜನಪ್ರಿಯ ಸೆಲೆಬ್ರಿಟಿಗಳ ಸಾವಿನ ಬಗ್ಗೆ ಫೇಕ್​ ನ್ಯೂಸ್​ ಹರಡಿಸಲಾಗುತ್ತದೆ. ಜನರನ್ನು ಆಕರ್ಷಿಸಲು ಬಗೆಬಗೆಯ ಥಂಬ್​ನೇಲ್​ ಬಳಸಲಾಗುತ್ತದೆ. ಫೋಟೋಶಾಪ್​ ಮೂಲಕ ಎಡಿಟ್​ ಮಾಡಿ ಶ್ರದ್ಧಾಂಜಲಿ ಪೋಸ್ಟರ್​ಗಳ ರೀತಿ ಥಂಬ್​ನೇಲ್ ಸಿದ್ಧಪಡಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬೇರೆ ಬೇರೆ ಸೆಲೆಬ್ರಿಟಿಗಳು ಅಂತ್ಯ ಕ್ರಿಯೆಯಲ್ಲಿ ಭಾಗಿ ಆದ ರೀತಿಯಲ್ಲೂ ಥಂಬ್​ನೇಲ್ ಎಡಿಟ್​ ಮಾಡಲಾಗುತ್ತದೆ! ಸದ್ಯ ಸುಮನ್​ ಅವರ ವಿಚಾರದಲ್ಲೂ ಹಾಗೆಯೇ ಆಗಿದೆ.

ಈಗಾಗಲೇ ಅನೇಕ ಸೆಲೆಬ್ರಿಟಿಗಳಿಗೆ ಈ ಫೇಕ್​ ನ್ಯೂಸ್​ನಿಂದ ತೊಂದರೆ ಆಗಿದೆ. ಅನಾರೋಗ್ಯ ಮತ್ತು ಸಾವಿನ ಬಗ್ಗೆ ಸುಳ್ಳು ಸುದ್ದಿ ನೋಡಿ ಎಲ್ಲರೂ ಬೇಸತ್ತಿದ್ದಾರೆ. ‘ನಾನು ಬದುಕಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ’ ಎಂದು ಸ್ವತಃ ವಿಡಿಯೋ ಮೂಲಕ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಹಲವರಿಗೆ ಬಂದಿದೆ. ಇನ್ನೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸದೇ ಸುಮ್ಮನಾಗಿದ್ದಾರೆ.

ಇದನ್ನೂ ಓದಿ
Image
ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
Image
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
Image
KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
Image
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​

ಯೂಟ್ಯೂಬ್​ನಲ್ಲಿ ಹೆಚ್ಚಿನ ವೀವ್ಸ್​ ಪಡೆಯಲು ಕೆಲವು ಕಿಡಿಗೇಡಿಗಳು ಈ ರೀತಿ ಫೇಕ್​ ನ್ಯೂಸ್​ ಹಬ್ಬಿಸುತ್ತಾರೆ. ತಮ್ಮ ವಿಡಿಯೋಗಳ ಮೂಲಕ ಹಣ ಗಳಿಸುವ ದುರಾಸೆಯಿಂದ ಸೆಲೆಬ್ರಿಟಿಗಳ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದರಿಂದ ಆ ಸೆಲೆಬ್ರಿಟಿಗಳ ಕುಟುಂಬದವರಿಗೆ ಮತ್ತು ಅಭಿಮಾನಿಗಳು ತೀವ್ರ ನೋವಾಗುವುದಂತೂ ನಿಜ. ಜನರನ್ನು ದಿಕ್ಕು ತಪ್ಪಿಸುತ್ತಿರುವ ಇಂಥ ಯೂಟ್ಯೂಬ್​ ಚಾನೆಲ್​ಗಳಿಗೆ ಬುದ್ದಿ ಕಲಿಸಲು ಸುಮನ್​ ಮುಂದಾಗಿದ್ದಾರೆ. ತಮ್ಮ ಬಗ್ಗೆ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕೇಸ್​ ಹಾಕಲು ಅವರು ತೀರ್ಮಾನಿಸಿದ್ದಾರೆ. ಮಾಧ್ಯಮಗಳ ರೀತಿ ಯೂಟ್ಯೂಬ್​ ಚಾನೆಲ್​ಗಳಿಗೂ ಕೂಡ ನೈತಿಕತೆ ಇರಬೇಕು ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Thu, 1 September 22