AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ ತಾಪ್ಸಿ ಪನ್ನು?

ಸಿನಿಮಾಗಳಲ್ಲಿ ಮಹಿಳೆಯರ ವೈಭವೀಕರಣ ಮತ್ತು ವಸ್ತುವಿನಂತೆ ಬಿಂಬಿಸುವ ಪ್ರವೃತ್ತಿಯನ್ನು ನಟಿ ತಾಪ್ಸಿ ಪನ್ನು ಖಂಡಿಸಿದ್ದಾರೆ. 'ಪೆದ್ದಿ' ಮತ್ತು 'ಟಾಕ್ಸಿಕ್' ಚಿತ್ರಗಳ ಚರ್ಚೆಯ ನಡುವೆ, ಪ್ರೇಕ್ಷಕರ ಬೇಡಿಕೆಯ ನೆಪ ಹೇಳಿ ನಿರ್ಮಾಪಕರು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ ತಾಪ್ಸಿ ಪನ್ನು?
ತಾಪ್ಸಿ-ಯಶ್
ರಾಜೇಶ್ ದುಗ್ಗುಮನೆ
|

Updated on: Sep 04, 2026 | 2:44 PM

Share

ಮುಖ್ಯಾಂಶಗಳು

  • ಮಹಿಳೆಯರ ಕೀಳು ಬಿಂಬಿಸುವಿಕೆ  
  • ಪೆದ್ದಿ ಮತ್ತು ಟಾಕ್ಸಿಕ್ ಸಿನಿಮಾಗಳ ಸುತ್ತ ಬೆಳೆದ ಗ್ಲಾಮರ್ ವಿವಾದ
  • ಚಿತ್ರರಂಗದ ವಿರುದ್ಧ ತಾಪ್ಸಿ ಗರಂ

ಸಿನಿಮಾಗಳಲ್ಲಿ ಮಹಿಳೆಯರನ್ನು ಗ್ಲಾಮರಸ್ ಆಗಿ ತೋರಿಸುವ ಸಂಸ್ಕೃತಿ ಹೆಚ್ಚುತ್ತಿದೆ. ಈ ಬಗ್ಗೆ ನಟಿ ತಾಪ್ಸಿ ಪನ್ನು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ನಿರ್ಮಾಪಕರು ಪ್ರೇಕ್ಷಕರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರೇಕ್ಷಕರು ಇಂತಹ ದೃಶ್ಯಗಳನ್ನು ಬಯಸುತ್ತಾರೆ ಎಂದು ಚಿತ್ರತಂಡ ಸಮರ್ಥಿಸಿಕೊಳ್ಳುತ್ತದೆ. ನಟಿಯ ಹೇಳಿಕೆ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ತಾಪ್ಸಿ ‘ಟಾಕ್ಸಿಕ್’ ಚಿತ್ರಕ್ಕೆ ಕೌಂಟರ್ ಕೊಟ್ಟರೇ ಎನ್ನುವ ಪ್ರಶ್ನೆ ಮೂಡಿದೆ.

ಇತ್ತೀಚೆಗೆ ತೆರೆಕಂಡ ಬೃಹತ್ ಬಜೆಟ್ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘ಸೋಶಿಯಲ್ ಮೀಡಿಯಾದಲ್ಲಿ ಎಷ್ಟೇ ವಿರೋಧ ಬಂದರೂ ಪ್ರೇಕ್ಷಕರ ಬೆಂಬಲವಿಲ್ಲದೆ ಇದನ್ನು ತಡೆಯಲು ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಸೃಜನಶೀಲತೆಗಿಂತ ವ್ಯಾಪಾರವೇ ಮುಖ್ಯವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ.

ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರದ ಚಿತ್ರೀಕರಣಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಟ್ಟ ಕೋನಗಳಲ್ಲಿ ಕ್ಯಾಮೆರಾ ಬಳಸಿ ನಟಿಯನ್ನು ತೋರಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಬಳಿಕ ನಿರ್ದೇಶಕರು ಕ್ಷಮೆಯಾಚಿಸಿ, ಆ ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕಿದರು.

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮೇಲೆಯೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. ಚಿತ್ರ ಬಿಡುಗಡೆಗೂ ಮುನ್ನವೇ ಮಹಿಳಾ ಪಾತ್ರಗಳ ಬಿಂಬಿಸುವಿಕೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಪ್ರಮುಖ ಮಹಿಳಾ ಪಾತ್ರಗಳನ್ನು ಕೇವಲ ಗ್ಲಾಮರ್ ಪ್ರದರ್ಶನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ. ನಾಯಕನ ಸುತ್ತ ಸಾಗುವ ಕಥೆಯಲ್ಲಿ ಮಹಿಳೆಯರಿಗೆ ಸೂಕ್ತ ಗೌರವ ನೀಡಿಲ್ಲ ಎಂಬ ಆಕ್ಷೇಪವನ್ನು ಕೆಲವರು ಮಾಡಿದ್ದಾರೆ. ತಾಪ್ಸಿ ಈ ಸಿನಿಮಾಗಳ ಬೆಳವಣಿಗೆ ಇಟ್ಟುಕೊಂಡೇ ಮಾತನಾಡಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಹೋಗಿ ಸಮಸ್ಯೆ ಮಾಡಿಕೊಂಡ ತಾಪ್ಸಿ ಪನ್ನು; ಮಹಿಳೆಯರಿಗೆ ಎಚ್ಚರಿಕೆ

ತಾಪ್ಸಿ ಪನ್ನು ಅಭಿನಯದ ಹೊಸ ಆಕ್ಷನ್ ಥ್ರಿಲ್ಲರ್ ‘ಗಾಂಧಾರಿ’ ಈಗ ಒಟಿಟಿಯಲ್ಲಿ ರಿಲೀಸ್ ಆಗಿದೆ. ದೇವಶಿಶ್ ಮಖಿಜಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕೆನಿಕಾ ಧಿಲ್ಲೋನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಇಶ್ವಾಕ್ ಸಿಂಗ್ ಮತ್ತು ಛಾಯಾ ಕಡಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಸರ್ವೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಹಾಸನ ಡಿಸಿ ಲತಾ ಕುಮಾರಿ !
ಸರ್ವೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಹಾಸನ ಡಿಸಿ ಲತಾ ಕುಮಾರಿ !
ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ
ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ
ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!
ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ