AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 13: ಮೊದಲ ಸ್ಪರ್ಧಿಯಾಗಿ ಬಂದ ಜಗ್ಗುಗೆ ಸಖತ್ ಶಾಕ್ ಕೊಟ್ಟ ಕಿಚ್ಚ

Bigg Boss Kannada season 13: ಬಿಗ್​​ಬಾಸ್ ಕನ್ನಡ ಸೀಸನ್ 13ರ ಮೊದಲ ಸ್ಪರ್ಧೆಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯನಟ ಜಗ್ಗು ಮಮ್ಮಿ ಬಂದಿದ್ದಾರೆ. ಹಳ್ಳಿಯ ಯುವಕ ಜಗ್ಗು ಅವರಿಗೆ ಎಂಟ್ರಿಯಲ್ಲೇ ಸುದೀಪ್ ಅವರು ಶಾಕ್ ಕೊಟ್ಟಿದ್ದಾರೆ. ಬರೀ ಶಾಕ್ ಕೊಟ್ಟಿದ್ದು ಮಾತ್ರವೇ ಅಲ್ಲದೆ, ಜಗ್ಗು ಅವರಿಗೆ ಆತ್ಮವಿಶ್ವಾಸವನ್ನು ತುಂಬುವ ಕಾರ್ಯವನ್ನು ಸಹ ಮಾಡಿದರು.

Bigg Boss Kannada 13: ಮೊದಲ ಸ್ಪರ್ಧಿಯಾಗಿ ಬಂದ ಜಗ್ಗುಗೆ ಸಖತ್ ಶಾಕ್ ಕೊಟ್ಟ ಕಿಚ್ಚ
Jaggu Bigg Boss
ಮಂಜುನಾಥ ಸಿ.
|

Updated on: Sep 06, 2026 | 8:01 PM

Share

ಬಿಗ್​​ಬಾಸ್ ಕನ್ನಡ ಸೀಸನ್ 13 ನಿರೀಕ್ಷೆಯಂತೆ ಅದ್ಧೂರಿಯಾಗಿ ಆರಂಭವಾಗಿದೆ. ಸುದೀಪ್ ಅವರು ಈ ಬಾರಿಯ ಹೊಸ ಮನೆಯನ್ನು, ಅದರ ವಿನ್ಯಾಸವನ್ನು ಪ್ರೇಕ್ಷಕರಿಗೆ ತೋರಿಸುವ ಮೂಲಕ ಹೊಸ ಸೀಸನ್​ಗೆ ಆರಂಭ ನೀಡಿದರು. ಈ ಸೀಸನ್​​ನ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯ ನಟ ‘ಜಗ್ಗು ಮಮ್ಮಿ’ ಎಂಟ್ರಿ ಕೊಟ್ಟರು. ಜಗದೀಶ್ ಅವರು ನಟಿಸಿರುವ ಒಂದೇ ಸಿನಿಮಾನಲ್ಲಿ ಅಷ್ಟರಲ್ಲೇ ಅವರಿಗೆ ಬಿಗ್​​ಬಾಸ್​​ನಲ್ಲಿ ಭಾಗಿ ಆಗುವ ಅವಕಾಶ ದೊರಕಿದೆ. ಬಿಗ್​​ಬಾಸ್ ವೇದಿಕೆಗೆ ಬಂದು ಜಗ್ಗು ಅವರಿಗೆ ಸುದೀಪ್ ಅವರು ಆರಂಭದಲ್ಲಿ ಸಖತ್ ಶಾಕ್ ಕೊಟ್ಟರು ಆದರೆ ಅದರ ಜೊತೆಗೆ ಆತ್ಮವಿಶ್ವಾಸವನ್ನೂ ತುಂಬಿದರು.

ಜಗ್ಗು ಮಮ್ಮಿ ಅವರು ವೇದಿಕೆಗೆ ಬರುತ್ತಿದ್ದಂತೆ, ತುಸು ನರ್ವಸ್ ಆಗಿಯೇ ಸುದೀಪ್ ಅವರೊಟ್ಟಿಗೆ ಮಾತನಾಡುತ್ತಾ, ‘ನಮ್ಮೂರಿನ ಜನ ನಿಮ್ಮ ಅಭಿಮಾನಿಗಳು, ಅವರಿಗೆ ಒಮ್ಮೆ ಹಾಯ್ ಹೇಳಿ’ ಎಂದರು. ಸುದೀಪ್ ಅವರು ತಕ್ಷಣವೆ ತುಸು ಗಂಭೀರವಾಗಿ, ‘ನೀವು ನಿಯಮ ಮುರಿದಿದ್ದೀರಿ, ಬಿಗ್​​ಬಾಸ್​​ಗೆ ಬರುವುದನ್ನು ಯಾರಿಗೂ ಹೇಳುವಂತಿಲ್ಲ ಆದರೆ ನೀವು ಇಡೀ ಊರಿನವರಿಗೆ ಹೇಳಿದ್ದೀರಲ್ಲ, ನಿಯಮ ಮುರಿದಿರುವ ನಿಮ್ಮನ್ನು ವಾಪಸ್ ಕಳಿಸುತ್ತೇವೆ’ ಎಂದರು. ಸುದೀಪ್ ಅವರು ಗಂಭೀರವಾಗಿ ಹೇಳಿದ್ದು ಕೇಳಿ ಜಗ್ಗು ಗಾಬರಿಯಾಗಿ ನಿಂತುಬಿಟ್ಟರು.

ಆಗ ಸುದೀಪ್ ಅವರು, ನೀವು ಜನರೊಟ್ಟಿಗೆ ಮಾತನಾಡಿ ಅವರನ್ನು ಒಪ್ಪಿಸಿ, ಅವರು ಒಪ್ಪಿಸಿದರೆ ಒಳಗೆ ಕಳಿಸುವೆ ಎಂದರು. ಆದರೆ ಸುದೀಪ್ ಅವರು, ಜಗ್ಗುಗೆ ಕಾಣದಂತೆ ಜನರಿಗೆ ‘ಆಗಲ್ಲ ಎಂದು ಹೇಳಿ’ ಎನ್ನುವಂತೆ ಸಜ್ಞೆ ಮಾಡಿದರು. ಜಗ್ಗು, ಧೈರ್ಯವನ್ನೆಲ್ಲ ಒಗ್ಗೂಡಿಸಿ ಜನರ ಬಳಿಕ ತಮಗೆ ಅನುಮತಿ ಕೊಡುವಂತೆ ಬೇಡಿಕೊಂಡರು ಆದರೆ ಜನ ಸುದೀಪ್ ಹೇಳಿದಂತೆ ಆಗಲ್ಲ ಎಂದರು. ಜಗ್ಗು ಗೆಳೆಯರು ಸಹ ಆಗಲ್ಲ ಎಂದರು. ಇದರಿಂದ ಜಗ್ಗು ಬಹಳ ಗಾಬರಿ ಆಗಿಬಿಟ್ಟರು. ಆದರೆ ಕೂಡಲೇ ಪರಿಸ್ಥಿತಿ ತಿಳಿ ಗೊಳಿಸಿದ ಸುದೀಪ್, ಜಗ್ಗು ಅವರ ವಿಟಿ ಪ್ರದರ್ಶಿಸಿದರು. ಆಗ ಜಗ್ಗುಗೆ ತುಸು ಜೀವ ಬಂದಂತಾಯ್ತು.

ಇದನ್ನೂ ಓದಿ:Bigg Boss Kannada: ಏರಡನೇ ಬಾರಿ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟ ನಿರ್ದೇಶಕ ಓಂ ಪ್ರಕಾಶ್ ರಾವ್

ಜಗ್ಗು, ತಾವು ಬಡವರು, ತಾವು ಗೆಳೆಯನ ಮದುವೆಯ ಉಡುಗೆ ಹಾಕಿಕೊಂಡು ಬಂದಿರುವುದಾಗಿ ಹೇಳಿದರು. ತಮ್ಮನ್ನು ‘ಹುಡುಗಿಯಂತೆ ಆಡುತ್ತಾನೆ’ ಎಂದು ಊರ ಜನ ಲೇವಡಿ ಮಾಡುತ್ತಾರೆಂದು ಬೇಸರದಿಂದ ಹೇಳಿಕೊಂಡರು. ಮನೆಯಲ್ಲಿ ಸಾಕಷ್ಟು ಕಷ್ಟಗಳಿದ್ದು, ಚಿನ್ನ ಅಡವಿಟ್ಟಿದ್ದೇನೆ, 2.50 ಲಕ್ಷ ಸಾಲ ಮಾಡಿದ್ದೇನೆ, ಇಲ್ಲಿ ಗೆದ್ದರೆ ಚಿನ್ನ ಬಿಡಿಸಿಕೊಳ್ಳುವೆ ಎಂದರು.

ಜಗ್ಗು ಅವರ ಮುಗ್ಧತೆಯನ್ನು ಗಮನಿಸಿದ ಸುದೀಪ್ ಅವರು, ಜಗ್ಗುಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದರು. ‘ನೀವು ಒಳಗೆ ಹೋದಾಗ ಯಾರೇ ಎದುರು ಸಿಕ್ಕರೂ, ‘ನಾನು ಜಗ್ಗು, ಸೀಸನ್ 13ರ ವಿನ್ನರ್’ ಎಂದೇ ನಿಮ್ಮನ್ನು ಪರಿಚಯಿಸಿಕೊಳ್ಳಿ’ ಎಂದು ಸಲಹೆ ನೀಡಿದರು. ಮಾತ್ರವಲ್ಲದೆ, ಸುದೀಪ್ ಅವರು ವೇದಿಕೆ ಮೇಲೆ ಜಗ್ಗು ಜೊತೆಗೆ ಮತ್ತೆ ಮತ್ತೆ ಅಭಿನಯಿಸಿ ಜಗ್ಗುಗೆ ರಿಹರ್ಸಲ್ ಸಹ ಮಾಡಿಸಿದರು. ಖುಷಿಯಿಂದ ಜಗ್ಗು ಅನ್ನು ಬೋರ್ಡಿಂಗ್ ಪಾಸ್ ಕೊಟ್ಟು ಕಳಿಸಿಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ