AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ ಶನಿವಾರದ ಎಪಿಸೋಡಿನಲ್ಲಿ ಕಿಚ್ಚನಿಂದ ಮೆಚ್ಚುಗೆ ಪಡೆದವರು ಯಾರ್ಯಾರು?

Bigg Boss Kannada: ಸುದೀಪ್ ಅವರು ಸಾಮಾನ್ಯವಾಗಿ ಶನಿವಾರದ ಎಪಿಸೋಡನ್ನು ಟೀಕೆ, ವಿಮರ್ಶೆ, ಬುದ್ಧಿವಾದ, ಎಚ್ಚರಿಕೆಗಳಿಗೆ ಮೀಸಲಿಡುತ್ತಾರೆ. ಭಾನುವಾರದ ಎಪಿಸೋಡು ತಮಾಷೆಯಾಗಿ, ಫನ್​​ ಆಗಿ ನಡೆಸಿಕೊಡುತ್ತಾರೆ. ಈ ಸೀಸನ್ನಿಲ್ಲಂತೂ ಅದೇ ನಡೆಯುತ್ತಿತ್ತು. ಕಳೆದ ಕೆಲ ಸೀಸನ್ನುಗಳಿಂದಲೂ ಇದೇ ಪ್ಯಾಟರ್ನ್​​ನಲ್ಲಿ ಸುದೀಪ್ ವೀಕೆಂಡ್ ಎಪಿಸೋಡ್​​ಗಳನ್ನು ನಿರೂಪಣೆ ಮಾಡುತ್ತಾರೆ. ಆದರೆ ಈ ಬಾರಿಯ ಶನಿವಾರದ ಎಪಿಸೋಡ್ ಬಹಳ ಭಿನ್ನವಾಗಿತ್ತು. ಅದಕ್ಕೆ ಕಾರಣ ಸ್ಪರ್ಧಿಗಳು ಈ ವಾರ ಆಡಿದ ರೀತಿ.

ಅಪರೂಪದ ಶನಿವಾರದ ಎಪಿಸೋಡಿನಲ್ಲಿ ಕಿಚ್ಚನಿಂದ ಮೆಚ್ಚುಗೆ ಪಡೆದವರು ಯಾರ್ಯಾರು?
Sudeep Bigg Boss
ಮಂಜುನಾಥ ಸಿ.
|

Updated on: Oct 24, 2026 | 11:19 PM

Share

ಮುಖ್ಯಾಂಶಗಳು

  • ಅಪರೂಪದ ಶನಿವಾರದ ಎಪಿಸೋಡ್
  • ತಮಾಷೆ, ನಗುವಿನಿಂದ ಕೂಡಿದ್ದ ಶನಿವಾರದ ಎಪಿಸೋಡ್
  • ಕಿಚ್ಚ ಹೊಗಳಿದ್ದು ಯಾರು ಯಾರನ್ನು?

ಬಿಗ್​​ಬಾಸ್​​ನಲ್ಲಿ ವೀಕೆಂಡ್ ಬಂದರೆ ಅದರಲ್ಲೂ ವೀಕೆಂಡ್ ಎಪಿಸೋಡಿನ ಮೊದಲ ದಿನ ಅಂದರೆ ಶನಿವಾರದ ಎಪಿಸೋಡಿನಲ್ಲಿ ತಪ್ಪು ಮಾಡಿದ ಸ್ಪರ್ಧಿಗಳಿಗೆ ಕ್ಲಾಸ್ ಖಾಯಂ. ಸುದೀಪ್ ಅವರು ಸಾಮಾನ್ಯವಾಗಿ ಶನಿವಾರವನ್ನು ಟೀಕೆ, ವಿಮರ್ಶೆ, ಬುದ್ಧಿವಾದ, ಎಚ್ಚರಿಕೆಗಳಿಗೆ ಮೀಸಲಿಡುತ್ತಾರೆ. ಭಾನುವಾರದ ಎಪಿಸೋಡು ತಮಾಷೆಯಾಗಿ, ಫನ್​​ ಆಗಿ ನಡೆಸಿಕೊಡುತ್ತಾರೆ. ಈ ಸೀಸನ್ನಿಲ್ಲಂತೂ ಅದೇ ನಡೆಯುತ್ತಿತ್ತು. ಕಳೆದ ಕೆಲ ಸೀಸನ್ನುಗಳಿಂದಲೂ ಇದೇ ಪ್ಯಾಟರ್ನ್​​ನಲ್ಲಿ ಸುದೀಪ್ ವೀಕೆಂಡ್ ಎಪಿಸೋಡ್​​ಗಳನ್ನು ನಿರೂಪಣೆ ಮಾಡುತ್ತಾರೆ. ಆದರೆ ಈ ಬಾರಿಯ ಶನಿವಾರದ ಎಪಿಸೋಡ್ ಬಹಳ ಭಿನ್ನವಾಗಿತ್ತು. ಅದಕ್ಕೆ ಕಾರಣ ಸ್ಪರ್ಧಿಗಳು ಈ ವಾರ ಆಡಿದ ರೀತಿ.

ಈ ವಾರ ಕಳ್ಳರು-ಲೂಟಿಕೋರರು ಟಾಸ್ಕ್​​ ಅನ್ನು ನೀಡಲಾಗಿತ್ತು. ಟಾಸ್ಕ್​​ ಅನ್ನು ಮನೆಯ ಎಲ್ಲ ಸದಸ್ಯರು ಅದ್ಭುತವಾಗಿ ಆಡಿದರು. ಟಾಸ್ಕ್ ಬಹಳ ಯಶಸ್ವಿಯಾಗಿ ನಡೆಯಿತು. ಕೆಲವರಂತೂ ಅದ್ಭುತವಾದ ಪ್ರದರ್ಶನ ನೀಡಿದರು. ಅವರಿಗೆ ಕಿಚ್ಚ ಚಪ್ಪಾಳೆ ನೀಡಿದರು. ಈ ವಾರ ಇಬ್ಬರಿಗೆ ಕಿಚ್ಚನ ಚಪ್ಪಾಳೆಯನ್ನು ಸುದೀಪ್ ನೀಡಿದರು. ಮೊದಲು ತಾಂಡವ್ ರಾಮ್ ಅವರಿಗೆ ಹಾಗೂ ನಂತರ ತಮ್ಮ ಎನರ್ಜಿಯಿಂದ ಇಡೀ ವಾರ ಎಂಟರ್ಟೈನ್​​ ಮಾಡಿದ ಸೌಂದರ್ಯಾ ಶೆಟ್ಟಿ ಅವರಿಗೆ ಸುದೀಪ್ ಚಪ್ಪಾಳೆ ನೀಡಿದರು.

ಇದನ್ನೂ ಓದಿ:ತಾಂಡವ್​​ಗೆ ಚಪ್ಪಾಳೆ ನೀಡಿ ಮೂರು ಕಾರಣ ಕೊಟ್ಟ ಕಿಚ್ಚ ಸುದೀಪ್

ಚಪ್ಪಾಳೆ ನೀಡಿದವರನ್ನು ಮಾತ್ರವೇ ಅಲ್ಲದೆ ಇನ್ನೂ ಕೆಲವರನ್ನು ವೈಯಕ್ತಿಕವಾಗಿ ಹೆಸರಿಸಿ ಅವರ ಆಟಕ್ಕೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು. ಎದುರಾಳಿ ತಂಡದಲ್ಲಿದ್ದ ಧನುಶ್ ಅವರ ಆಟದಲ್ಲಿದ್ದ ಡೆಡಿಕೇಷನ್ ಅನ್ನು ಸುದೀಪ್ ಮೆಚ್ಚಿದರು. ಹಗಲು ರಾತ್ರಿ ಎದ್ದಿದ್ದು ಕಾವಲು ಕಾದ ರೀತಿಯನ್ನು ಸುದೀಪ್ ಕೊಂಡಾಡಿದರು. ಬಳಿಕ ಯಶಸ್ ಅವರು ತಲೆ ಉಪಯೋಗಿಸಿ ಆಡಿದ ರೀತಿಯ ಬಗ್ಗೆಯೂ ಬಹಳ ಶ್ಲಾಘಿಸಿದರು. ಯಶಸ್ ಅವರನ್ನು ‘ಶೆರ್ಲಾಕ್ ಹೋಮ್​​’ಗೆ ಹೋಲಿಸಿದ ಸುದೀಪ್, ನೀವು ಬಹಳ ಬುದ್ಧಿವಂತರು ಬಹಳ ಚೆನ್ನಾಗಿ ತಲೆ ಓಡಿಸಿ ಆಟ ಆಡಿದಿರಿ’ ಎಂದು ಹೊಗಳಿದರು.

ಅವರನ್ನು ಮಾತ್ರವೇ ಅಲ್ಲದೆ ಇನ್ನೂ ಕೆಲವರ ಆಟವನ್ನು ಕೊಂಡಾಡಿದ ಸುದೀಪ್, ಈ ವಾರ ನಿಮ್ಮಗಳಿಂದಾಗಿ ತೆರೆಯ ಹಿಂದೆ ಕೆಲಸ ಮಾಡುವ ಸಿಬ್ಬಂದಿಗೂ ನಿದ್ದೆ ಇಲ್ಲದಂತಾಯ್ತು ಎಂದರು. ಮಾತ್ರವಲ್ಲದೆ ಬಿಗ್​​ಬಾಸ್ ಕಡೆಯಿಂದ ಇಡೀ ಮನೆಗೆ ಮೆಚ್ಚುಗೆ ಪತ್ರದ ಜೊತೆಗೆ ಎಲ್ಲರಿಗೂ ಸಿಹಿ ಸಹ ನೀಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್