ಟಿಆರ್​ಪಿ ಲಿಸ್ಟ್​ನಲ್ಲಿ ‘ಗಟ್ಟಿಮೇಳ’ಕ್ಕೆ ಮೊದಲ ಸ್ಥಾನ; ಈ ವಾರದ ಟಾಪ್ ಐದು ಧಾರಾವಾಹಿಗಳು ಇವು

Kannada Serials TRP: ಈ ವಾರದ ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಆ ಪೈಕಿ ಜೀ ಕನ್ನಡ ವಾಹಿನಿಯ ‘ಗಟ್ಟಿಮೇಳ’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಟಿಆರ್​ಪಿ ಲಿಸ್ಟ್​ನಲ್ಲಿ ‘ಗಟ್ಟಿಮೇಳ’ಕ್ಕೆ ಮೊದಲ ಸ್ಥಾನ; ಈ ವಾರದ ಟಾಪ್ ಐದು ಧಾರಾವಾಹಿಗಳು ಇವು
ಗಟ್ಟಿಮೇಳ ಧಾರಾವಾಹಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 27, 2023 | 3:52 PM

ಕಿರುತೆರೆ ಲೋಕದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಎಲ್ಲಾ ವಾಹಿನಿಯವರು ಹೊಸಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಲೇ ಇದ್ದಾರೆ. ಹೊಸಹೊಸ ಕಥೆಯೊಂದಿಗೆ ವೀಕ್ಷಕರ ಎದುರು ಬರುತ್ತಿದ್ದಾರೆ. ಕೆಲವು ಧಾರಾವಾಹಿಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತವೆ. ಇನ್ನೂ ಕೆಲವು ಪ್ರೇಕ್ಷಕರಿಗೆ ಇಷ್ಟ ಆಗುವುದಿಲ್ಲ. ಇದೆಲ್ಲವನ್ನೂ ಟಿಆರ್​ಪಿ ಮೂಲಕ ಅಳೆಯಲಾಗುತ್ತದೆ. ಈ ವಾರದ ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಆ ಪೈಕಿ ಜೀ ಕನ್ನಡ ವಾಹಿನಿಯ ‘ಗಟ್ಟಿಮೇಳ’ ಧಾರಾವಾಹಿ (Gattimela Serial) ಮೊದಲ ಸ್ಥಾನದಲ್ಲಿದೆ. ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

1.ಗಟ್ಟಿಮೇಳ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಎಲ್ಲರ ಗಮನ ಸೆಳೆದಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಕ್ಷಿತ್ ವೇದಾಂತ್ ಆಗಿ ಗಮನ ಸೆಳೆದರೆ ನಿಶಾ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಈ ವಾರದ ಟಿಆರ್​ಪಿ ರೇಸ್​ನಲ್ಲಿ ಮೊದಲಿದೆ. ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರ ಕಾಣುತ್ತದೆ.

2.ಪುಟ್ಟಕ್ಕನ ಮಕ್ಕಳು ಹಾಗೂ ಲಕ್ಷ್ಮೀ ಬಾರಮ್ಮ

‘ಪುಟ್ಟಕ್ಕನ ಮಕ್ಕಳು’ ಹಾಗೂ ಲಕ್ಷ್ಮೀ ಬಾರಮ್ಮ ಎರಡನೇ ಸ್ಥಾನದಲ್ಲಿವೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮೂಲಕ ಉಮಾಶ್ರೀ ಅವರು ಗಮನ ಸೆಳೆಯುತ್ತಿದ್ದಾರೆ. ಪುಟ್ಟಕ್ಕ ಆಗಿ ಉಮಾಶ್ರೀ ಎಲ್ಲರ ಮನ ಗೆದ್ದಿದ್ದಾರೆ. ಈ ಧಾರಾವಾಹಿ ಟಿಆರ್​​ಪಿ ಲಿಸ್ಟ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ರಾತ್ರಿ 7.30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣುತ್ತದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೂಡ ಜನ ಮನ್ನಣೆ ಪಡೆದಿದೆ.

3.ಶ್ರೀರಸ್ತು ಶುಭಮಸ್ತು

ಸುಧಾರಾಣಿ ಅವರು ಹಿರಿತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡವರು. ಅವರು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ತುಳಸಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಮಾಧವ್ ಆಗಿ ಅಜಿತ್ ಹಂದೆ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ.

4.ಭಾಗ್ಯ ಲಕ್ಷ್ಮೀ

‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ.

5.ಸತ್ಯ:

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಸತ್ಯ’ ಧಾರಾವಾಹಿ ಸಾಗರ್ ಬಿಳಿ​ ಗೌಡ ಹಾಗೂ ಗೌತಮಿ ಜಾಧವ್ ಮುಖ್ಯಭೂಮಿಕೆ ಮಾಡಿದ್ದಾರೆ. ಈ ಧಾರಾವಾಹಿ ಐದನೇ ಸ್ಥಾನದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:51 pm, Thu, 27 April 23

ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ