AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಏಜೆಂಟ್ ಜೆಡಿ’ ಗೇಮ್ ಪರಿಚಯಿಸಿದ ಜೀ ಕನ್ನಡ; ಗೆದ್ದರೆ ಸಿಗುತ್ತೆ ಭರ್ಜರಿ ಬಹುಮಾನ

ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯು ಜಗದ್ಧಾತ್ರಿ ಧಾರಾವಾಹಿಗಾಗಿ 'ಏಜೆಂಟ್ ಜೆಡಿ' ಎಂಬ ರೋಚಕ ಡಿಜಿಟಲ್ ಗೇಮ್ ಪರಿಚಯಿಸಿದೆ. ವೀಕ್ಷಕರು ಮೂರು ಡಿಜಿಟಲ್ ಮಿಷನ್‌ಗಳನ್ನು ಪೂರ್ಣಗೊಳಿಸಿ, ಟಾಪ್ 10 ವಿಜೇತರಲ್ಲಿ ಒಬ್ಬರಾಗಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಈ ನೂತನ ಗೇಮ್ ಮೂಲಕ ಪಡೆಯಬಹುದಾಗಿದೆ.

'ಏಜೆಂಟ್ ಜೆಡಿ' ಗೇಮ್ ಪರಿಚಯಿಸಿದ ಜೀ ಕನ್ನಡ; ಗೆದ್ದರೆ ಸಿಗುತ್ತೆ ಭರ್ಜರಿ ಬಹುಮಾನ
ಜಗದ್ಧಾತ್ರಿ
ರಾಜೇಶ್ ದುಗ್ಗುಮನೆ
|

Updated on: Oct 13, 2026 | 2:31 PM

Share

ಮುಖ್ಯಾಂಶಗಳು

  • ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಗೇಮ್ ಆಧಾರಿತ ಮನರಂಜನೆ
  • ಜಗದ್ಧಾತ್ರಿ ಧಾರಾವಾಹಿಗಾಗಿ ‘ಏಜೆಂಟ್ ಜೆಡಿ’ ಡಿಜಿಟಲ್ ಗೇಮ್ ಲಾಂಚ್
  • ಮೂರು ಮಿಷನ್ ಪೂರ್ಣಗೊಳಿಸಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ

ಕನ್ನಡ ಕಿರುತೆರೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜೀ ಕನ್ನಡ ವಾಹಿನಿಯು ತನ್ನ ಜನಪ್ರಿಯ ‘ಜಗದ್ಧಾತ್ರಿ’ ಧಾರಾವಾಹಿಗಾಗಿ ‘ಏಜೆಂಟ್ ಜೆಡಿ’ ಎಂಬ ವಿನೂತನ ಡಿಜಿಟಲ್ ಗೇಮ್ ಅನ್ನು ಪರಿಚಯಿಸಿದೆ. ಕಿರುತೆರೆ ವೀಕ್ಷಕರಿಗೆ ಬರೀ ಧಾರಾವಾಹಿ ನೋಡುವುದಲ್ಲದೆ, ಅದರ ಸಾಹಸಮಯ ಕಥೆಯ ಭಾಗವಾಗುವ ಅವಕಾಶವನ್ನು ಈ ಡಿಜಿಟಲ್ ಗೇಮ್ ತಂದುಕೊಟ್ಟಿದೆ.

ವಿಜಯ್ ಸೂರ್ಯ, ಮೋಕ್ಷಿತಾ ಪೈ, ಕವಿತಾ ಗೌಡ, ಗಿರಿಜಾ ಲೋಕೇಶ್ ಮೊದಲಾದವರು ಮುಖ್ಯ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ವಿಜಯ್ ಹಾಗೂ ಮೋಕ್ಷಿತಾ ಸೀಕ್ರೇಟ್ ಏಜೆಂಟ್ ಮಾತ್ರ ಮಾಡುತ್ತಿದ್ದಾರೆ. ಈಗ ತನಿಖಾ ಕಥಾಹಂದರವನ್ನೇ ಆಧಾರವಾಗಿಟ್ಟುಕೊಂಡು ಈ ಗೇಮ್ ರೂಪಿಸಲಾಗಿದೆ. ಸಾರ್ವಜನಿಕರು ಹಾಗೂ ಅಭಿಮಾನಿಗಳು agentjd.zee5.com ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಗೇಮ್‌ನಲ್ಲಿ ನೇರವಾಗಿ ಭಾಗವಹಿಸಬಹುದು.

ಈ ಡಿಜಿಟಲ್ ಗೇಮ್‌ನಲ್ಲಿ ಕರ್ನಾಟಕದ ಪ್ರಮುಖ ನಗರಗಳ ಹಿನ್ನೆಲೆಯಲ್ಲಿ ಮೂರು ರೋಚಕ ಮಿಷನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ:

ಬೆಂಗಳೂರು ಮಿಷನ್: ಬೆಂಗಳೂರು ನಗರದ ಕಟ್ಟಡಗಳ ಹಿನ್ನೆಲೆಯಲ್ಲಿ ಮಗುವನ್ನು ರಕ್ಷಿಸುವ ಸವಾಲು ಇರುತ್ತದೆ, ಅದನ್ನು ವೀಕ್ಷಕರು ಪೂರ್ಣಗೊಳಿಸಬಹುದು.

ಮಂಗಳೂರು ಮಿಷನ್: ಕಡಲತೀರ ಹಾಗೂ ಕಂಟೇನರ್‌ಗಳ ನಡುವೆ ಬಾಂಬ್ ನಿಷ್ಕ್ರಿಯಗೊಳಿಸುವ ಸಾಹಸವನ್ನು ಮಾಡುವ ಆಯ್ಕೆ ಇರಲಿದೆ. ಹುಬ್ಬಳ್ಳಿ ಮಿಷನ್: ರೈಲು ನಿಲ್ದಾಣದ ಹಿನ್ನೆಲೆಯಲ್ಲಿ ಸಂಚುಕೋರನನ್ನು ಸೋಲಿಸುವ ಕಾರ್ಯಾಚರಣೆ ಇರಲಿದೆ.

ಈ ಮೂರೂ ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಗೇಮರ್‌ಗಳಲ್ಲಿ ಟಾಪ್ 10 ವಿಜೇತರನ್ನು ಆಯ್ಕೆ ಮಾಡಿ, ಅವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲು ಜೀ ಕನ್ನಡ ಸಂಸ್ಥೆ ನಿರ್ಧರಿಸಿದೆ. ಟಿವಿ ಪರದೆಯಾಚೆಗೂ ಮನರಂಜನಾ ಜಗತ್ತನ್ನು ವಿಸ್ತರಿಸುವ ನಿಟ್ಟಿನಲ್ಲಿ ಜೀ ಕನ್ನಡ ತೆಗೆದುಕೊಂಡಿರುವ ಈ ಪ್ರಯತ್ನ ಕಿರುತೆರೆ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ‘ಜಗದ್ಧಾತ್ರಿ’ ಧಾರಾವಾಹಿ: ಖಡಕ್ ಪಾತ್ರದಲ್ಲಿ ಮೋಕ್ಷಿತಾ-ವಿಜಯ್

‘ಜಗದ್ಧಾತ್ರಿ’ ಧಾರಾವಾಹಿಯು ಪ್ರತಿದಿನ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಧಾರಾವಾಹಿಯ ಕ್ರೈಮ್ ಹಾಗೂ ಥ್ರಿಲ್ಲರ್ ಅನುಭವವನ್ನು ಗೇಮ್ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಆಸ್ವಾದಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ