AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Box Office: ‘ಕೆಜಿಎಫ್ 2’, ‘ಆರ್​ಆರ್​ಆರ್’​, ‘ಪಠಾಣ್’​ಗಿಂತಲೂ ಹೆಚ್ಚು ಲಾಭ ಮಾಡಿದೆ ಈ 3 ಕೋಟಿ ಬಜೆಟ್​ನ ಸಿನಿಮಾ!

ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ಯಾವುದೆಂದರೆ 'ಕೆಜಿಎಫ್ 2', 'ಆರ್​ಆರ್​ಆರ್', 'ಪಠಾಣ್' ಸಿನಿಮಾಗಳನ್ನು ಹೆಸರಿಸುತ್ತಾರೆ. ಮಲಯಾಳಂ ಚಿತ್ರರಂಗದ ಒಂದು ಸಣ್ಣ ಬಜೆಟ್​ನ ಸಿನಿಮಾ ಈ ಮೂರು ಸಿನಿಮಾಗಳಿಗಿಂತಲೂ ಹೆಚ್ಚು ಲಾಭ ಮಾಡಿದೆ! ಹೇಗೆ? ವಿಶ್ಲೇಷಣೆ ಇಲ್ಲಿದೆ.

Box Office: 'ಕೆಜಿಎಫ್ 2', 'ಆರ್​ಆರ್​ಆರ್'​, 'ಪಠಾಣ್'​ಗಿಂತಲೂ ಹೆಚ್ಚು ಲಾಭ ಮಾಡಿದೆ ಈ 3 ಕೋಟಿ ಬಜೆಟ್​ನ ಸಿನಿಮಾ!
ಕೆಜಿಎಫ್ 2- ರೋಮಾಂಚಮ್- ಆರ್​ಆರ್​ಆರ್
ಮಂಜುನಾಥ ಸಿ.
|

Updated on: Mar 06, 2023 | 5:27 PM

Share

ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ಯಾವುದೆಂದರೆ ‘ಕೆಜಿಎಫ್ 2‘ (KGF 2), ‘ಆರ್​ಆರ್​ಆರ್‘ (RRR), ‘ಪಠಾಣ್’ (Pathaan) ಸಿನಿಮಾಗಳನ್ನು ಹೆಸರಿಸುತ್ತಾರೆ. ಇದು ನಿಜವೂ ಹೌದು, ಆದರೆ ಈ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚಿನ ‘ಲಾಭ’ ಗಳಿಸಿರುವುದು ಮಲಯಾಳಂ ಚಿತ್ರರಂಗದ ಒಂದು ಸಣ್ಣ ಬಜೆಟ್​ನ ಸಿನಿಮಾ ಎಂದರೆ ನಂಬಲೇ ಬೇಕು. ಕೇವಲ ಮೂರು ಕೋಟಿ ಬಜೆಟ್​ನಲ್ಲಿ ಮಾಡಲಾದ ಸಿನಿಮಾ ಒಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳಿಗಿಂತಲೂ ಹೆಚ್ಚು ಲಾಭ ಮಾಡಿದೆ! ಹೇಗೆ? ವಿಶ್ಲೇಷಣೆ ಇಲ್ಲಿದೆ.

ಸಿನಿಮಾಗಳ ಒಟ್ಟು ಕಲೆಕ್ಷನ್​ಗೂ ಲಾಭಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಸಿನಿಮಾಕ್ಕೆ ಹೂಡಲಾದ ಬಂಡವಾಳವನ್ನು ಗಣೆನೆಗೆ ತೆಗೆದುಕೊಂಡು ಲಾಭವನ್ನು ಪರಿಶೀಲಿಸಬೇಕಾಗುತ್ತದೆ. ಹೂಡಿದ್ದ ಬಂಡವಾಳಕ್ಕೆ ಎಷ್ಟು ಪಟ್ಟು ಹಣ ವಾಪಸ್ಸಾಯಿತು ಎಂಬುದು ವ್ಯವಹಾರದಲ್ಲಿ ಬಹಳ ಮುಖ್ಯ. 200 ಕೋಟಿ ಬಜೆಟ್​ನ ಸಿನಿಮಾ ಒಂದು 400 ಕೋಟಿ ಕಲೆಕ್ಷನ್ ಮಾಡಿದರೆ 200 ಕೋಟಿ ಲಾಭ ಎಂದುಕೊಳ್ಳಬಹುದು. ಅದರಲ್ಲಿ ನಿರ್ಮಾಪಕ ಕಿಸೆ ಸೇರುವುದು 100 ಕೋಟಿಗೂ ಕಡಿಮೆ ಹಣ.

ಉದಾಹರಣೆಗೆ ಇತ್ತೀಚೆಗಿನ ಬ್ಲಾಕ್ ಬಸ್ಟರ್ ಆರ್​ಆರ್​ಆರ್ ಸಿನಿಮಾದ ಒಟ್ಟು ಬಂಡವಾಳ 550 ಕೋಟಿ ಆ ಸಿನಿಮಾ ಮಾಡಿರುವ ಲಾಭ ಸುಮಾರು 1300 ಕೋಟಿ. ಬಂಡವಾಳದ ಆಧಾರದಲ್ಲಿ 250% ಲಾಭವನ್ನು ಈ ಸಿನಿಮಾ ಮಾಡಿದೆ. ಇದೇ ಸೂತ್ರವನ್ನು ಕೆಜಿಎಫ್​ 2 ಸಿನಿಮಾಕ್ಕೆ ಅಳವಡಿಸಿದರೆ. ಕೆಜಿಎಫ್ 2 ಸಿನಿಮಾದ ಬಜೆಟ್ 100 ಕೋಟಿ (ವಿಕಿಪೀಡಿಯಾ ಮಾಹಿತಿ) ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಆಸು-ಪಾಸು 1300 ಕೋಟಿ. ಕೆಜಿಎಫ್ 2 ಸಿನಿಮಾ ತಂದುಕೊಟ್ಟಿರುವ ಲಾಭ 1300%. ಅಂದರೆ ಆರ್​ಆರ್​ಆರ್​ ನಿರ್ಮಾಪಕರು ಗಳಿಸಿದ ಲಾಭಕ್ಕಿಂತಲೂ ಸುಮಾರು ಐದು ಪಟ್ಟು ಹೆಚ್ಚು ಲಾಭವನ್ನು ‘ಕೆಜಿಎಫ್ 2’ ನಿರ್ಮಾಪಕರು ಮಾಡಿದ್ದಾರೆ.

ಆದರೆ ಇತ್ತೀಚೆಗೆ ಬಿಡುಗಡೆ ಆದ ತೀರ ಸಣ್ಣ ಬಜೆಟ್​ನ ಸಿನಿಮಾ ಒಂದು ಕೆಜಿಎಫ್ 2, ಆರ್​ಆರ್​ಆರ್, ಪಠಾಣ್ ಸಿನಿಮಾಗಳಿಗಿಂತಲೂ ಹೆಚ್ಚು ಲಾಭ ಮಾಡಿದೆ. ‘ರೋಮಾಂಚಮ್’ ಹೆಸರಿನ ಈ ಮಲಯಾಳಂ ಸಿನಿಮಾಕ್ಕೆ ಹೂಡಿದ್ದ ಬಂಡವಾಳ ಕೇವಲ ಮೂರು ಕೋಟಿ ಆದರೆ ಸಿನಿಮಾ ಗಳಿಸಿರುವುದು ಬರೋಬ್ಬರಿ 54 ಕೋಟಿ. ಹಾಕಿದ್ದ ಬಂಡವಾಳಕ್ಕೆ 1800% ಗೂ ಹೆಚ್ಚಿನ ಲಾಭವನ್ನು ಈ ಸಿನಿಮಾ ಮಾಡಿದೆ. ಜನಪ್ರಿಯ ಮಲಯಾಳಂ ನಟ ಸುಬಿನ್, ಚೆಂಬನ್ ವಿನೋದ್ ಹೊರತಾಗಿ ಬಹುತೇಕ ಹೊಸಬರೇ ತುಂಬಿರುವ ಈ ಸಿನಿಮಾ ಕೇರಳದಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ.

ಅಂದಹಾಗೆ ಭಾರತದಲ್ಲಿ ಇತ್ತೀಚೆಗಿನ ದಿನದಲ್ಲಿ ಅತಿ ಹೆಚ್ಚು ಪ್ರತಿಶತ ಲಾಭ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಕನ್ನಡ ಸಿನಿಮಾ ‘ಕಾಂತಾರ’ದ್ದು. 16 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ 450 ಕೋಟಿ ಕಲೆಕ್ಷನ್ ಮಾಡಿದೆ. ಹಾಕಿದ ಬಂಡವಾಳಕ್ಕೆ ಶೇ 3000 ಪಟ್ಟು ಲಾಭವನ್ನು ಈ ಸಿನಿಮಾ ಮಾಡಿಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More