ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರಕ್ಕೆ ಸಿಕ್ತು ಮತ್ತೊಂದು ಬೂಸ್ಟ್​

‘ಲೈಗರ್’ ಸಿನಿಮಾದಲ್ಲಿ ಏಳು ಫೈಟ್ ಹಾಗೂ ಆರು ಹಾಡುಗಳಿವೆ. ಸಿನಿಮಾದಲ್ಲಿರುವ ಫೈಟ್​ಗಳ ದೃಶ್ಯಗಳ ತುಣಕನ್ನು ಟ್ರೇಲರ್​ನಲ್ಲಿ ತೋರಿಸಲಾಗಿತ್ತು. ಇದರ ಜತೆಗೆ ಒಂದೊಂದಾಗೇ ಸಾಂಗ್ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಿಗೆ ಚಿತ್ರ ಹತ್ತಿರ ಆಗುತ್ತಿದೆ.

ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರಕ್ಕೆ ಸಿಕ್ತು ಮತ್ತೊಂದು ಬೂಸ್ಟ್​
ವಿಜಯ್-ಅನನ್ಯಾ
TV9kannada Web Team

| Edited By: Rajesh Duggumane

Aug 06, 2022 | 9:04 AM

ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ (Ananya Panday) ನಟನೆಯ ‘ಲೈಗರ್’ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಕೆಲಸವನ್ನು ತಂಡ ಮಾಡುತ್ತಿದೆ. ಆಗಸ್ಟ್ 25ರಂದು ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಬೇರೆಬೇರೆ ನಗರಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಪ್ರಮೋಷನ್ ಮಾಡಲಾಗುತ್ತಿದೆ. ಹೊಸಹೊಸ ಪೋಸ್ಟರ್ ಹಾಗೂ ಸಾಂಗ್ ರಿಲೀಸ್ ಮಾಡುವ ಮೂಲಕ ಚಿತ್ರಕ್ಕೆ ಹೈಪ್ ನೀಡಲಾಗುತ್ತಿದೆ. ಈಗ ಚಿತ್ರದ ರೊಮ್ಯಾಂಟಿಕ್ ಹಾಡು ‘ಆಫತ್​..’ (Afat Song) ರಿಲೀಸ್ ಆಗಿದೆ. ಈ ಸಾಂಗ್​ನಿಂದ ಚಿತ್ರಕ್ಕೆ ಬೂಸ್ಟ್ ಸಿಕ್ಕಿದೆ.

ವಿಜಯ್ ದೇವರಕೊಂಡ ಅವರು ‘ಲೈಗರ್’ ಚಿತ್ರಕ್ಕಾಗಿ ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರದಲ್ಲಿ ಬಾಕ್ಸರ್ ಆಗಿ ಗಮನ ಸೆಳೆಯಲು ಅವರು ರೆಡಿ ಆಗಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಚಿತ್ರಕ್ಕೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈ ಸಿನಿಮಾ ಟ್ರೇಲರ್ ಕೋಟ್ಯಂತರ ಭಾರಿ ವೀಕ್ಷಣೆ ಕಂಡಿದೆ. ಈಗ ಹಾಡಿನ ಮೂಲಕ ಸಿನಿಮಾ ಮೈಲೇಜ್ ಪಡೆದುಕೊಳ್ಳುತ್ತಿದೆ.

‘ಲೈಗರ್’ ಸಿನಿಮಾದಲ್ಲಿ ಏಳು ಫೈಟ್ ಹಾಗೂ ಆರು ಹಾಡುಗಳಿವೆ. ಸಿನಿಮಾದಲ್ಲಿರುವ ಫೈಟ್​ಗಳ ದೃಶ್ಯಗಳ ತುಣಕನ್ನು ಟ್ರೇಲರ್​ನಲ್ಲಿ ತೋರಿಸಲಾಗಿತ್ತು. ಇದರ ಜತೆಗೆ ಒಂದೊಂದಾಗೇ ಸಾಂಗ್ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಿಗೆ ಚಿತ್ರ ಹತ್ತಿರ ಆಗುತ್ತಿದೆ. ಇತ್ತೀಚೆಗೆ ಬಿಡುಗಡೆ ಆದ ಸಿನಿಮಾದ ‘ಅಕ್ಡಿ ಪಕ್ಡಿ’ ಹಾಡು ಸಾಕಷ್ಟು ಗಮನ ಸೆಳೆದಿದೆ.

‘ಲೈಗರ್’ ಚಿತ್ರಕ್ಕೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇದೇ ಮೊದಲ ಬಾರಿಗೆ ಅವರು ವಿಜಯ್ ದೇವರಕೊಂಡ ಜತೆ ಕೈ ಜೋಡಿಸಿದ್ದಾರೆ. ಮಾಸ್ ಆ್ಯಕ್ಷನ್ ಕಥೆಯೊಂದಿಗೆ ಅವರು ‘ಲೈಗರ್’ ಚಿತ್ರ ಸಿದ್ಧಪಡಿಸಿದ್ದಾರೆ. ಹಿಂದಿ ಜತೆಗೆ, ತೆಲುಗು, ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ನಟನೆಯ ‘ಲೈಗರ್​ಗೆ’ U/A ಪ್ರಮಾಣಪತ್ರ; ಈ ಚಿತ್ರದಲ್ಲಿದೆ ಹಲವು ಸಸ್ಪೆನ್ಸ್

ಇದನ್ನೂ ಓದಿ

ಕರಣ್ ಜೋಹರ್ ಅವರು ಬಾಲಿವುಡ್​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಅವರು ‘ಲೈಗರ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಬಾಲಿವುಡ್​ಗೆ ಕರಣ್ ಪರಿಚಯಿಸುತ್ತಿದ್ದಾರೆ. ‘ಕಾಫಿ ವಿತ್ ಕರಣ್ ಸೀಸನ್ 7’ಗೆ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಅತಿಥಿಗಳಾಗಿ ಬಂದಿದ್ದರು. ಈ ಮೂಲಕ ಸಿನಿಮಾಗೆ ಪ್ರಚಾರ ನೀಡಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada