ವಿಜಯ್ ದೇವರಕೊಂಡ ನಟನೆಯ ‘ಲೈಗರ್ಗೆ’ U/A ಪ್ರಮಾಣಪತ್ರ; ಈ ಚಿತ್ರದಲ್ಲಿದೆ ಹಲವು ಸಸ್ಪೆನ್ಸ್
‘ಲೈಗರ್’ ಸಿನಿಮಾ ಅವಧಿ 2.20 ಗಂಟೆ ಇದೆ. ಮೊದಲಾರ್ಧ 1 ಗಂಟೆ 15 ನಿಮಿಷ ಹಾಗೂ ದ್ವೀತಿಯಾರ್ಧ 1 ಗಂಟೆ 5 ನಿಮಿಷ ಇರಲಿದೆ. ಇಡೀ ಚಿತ್ರ ಬಾಕ್ಸಿಂಗ್ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿ, ಚಿತ್ರದಲ್ಲಿ ಬರೋಬ್ಬರಿ 7 ಫೈಟ್ಗಳು ಇರಲಿವೆ.

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಇಡೀ ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ದೇಶದ ಮೂಲೆಮೂಲೆಗೆ ಈ ಸಿನಿಮಾ ತಲುಪಬೇಕು ಎಂಬುದು ಚಿತ್ರತಂಡದ ಆಲೋಚನೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರ ಈಗ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಸೆನ್ಸಾರ್ ಮಂಡಳಿಯವರು ‘ಲೈಗರ್ಗೆ’ (Liger Movie) U/A ಪ್ರಮಾಣಪತ್ರ ನೀಡಿದ್ದಾರೆ. ಯಾವ ದೃಶ್ಯಕ್ಕೂ ಕತ್ತರಿ ಹಾಕುವಂತೆ ಸೂಚಿಸಿಲ್ಲ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರ ಜತೆಗೆ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿವೆ ಎನ್ನಲಾಗಿದೆ.
‘ಲೈಗರ್’ ಸಿನಿಮಾ ಅವಧಿ 2.20 ಗಂಟೆ ಇದೆ. ಮೊದಲಾರ್ಧ 1 ಗಂಟೆ 15 ನಿಮಿಷ ಹಾಗೂ ದ್ವೀತಿಯಾರ್ಧ 1 ಗಂಟೆ 5 ನಿಮಿಷ ಇರಲಿದೆ. ಇಡೀ ಚಿತ್ರ ಬಾಕ್ಸಿಂಗ್ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿ, ಚಿತ್ರದಲ್ಲಿ ಬರೋಬ್ಬರಿ 7 ಫೈಟ್ಗಳು ಇರಲಿವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಈಗಾಗಲೇ ಹಲವು ಹಾಡುಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ. ಹಾಡುಗಳ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಸೆನ್ಸಾರ್ ಮಂಡಳಿಯವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ್ಯಕ್ಷನ್ ದೃಶ್ಯಗಳು, ಹೀರೋ ಕ್ಯಾರೆಕ್ಟರೈಸೇಷನ್, ಡೈಲಾಗ್ ಡೆಲಿವರಿ, ತಾಯಿ ಸೆಂಟಿಮೆಂಟ್ ಎಲ್ಲವೂ ವರ್ಕ್ ಆಗಿದೆ ಎಂಬುದು ಸೆನ್ಸಾರ್ ಮಂಡಳಿಯವರ ಅಭಿಪ್ರಾಯ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಸದಸ್ಯರು ಮೆಚ್ಚುಗೆ ಸೂಚಿಸಿದ್ದಾರೆ.
#LIGER – U/A – 2 Hrs & 20 Mins
First Half: 1 Hour & 15 Minutes
Second Half: 1 Hour & 5 Minutes
— Aakashavaani (@TheAakashavaani) August 5, 2022
ಇದನ್ನೂ ಓದಿ: ಬೇರೆ ನಟರಿಗಿಂತ ದೇವರಕೊಂಡ ಬಗ್ಗೆ ಫ್ಯಾನ್ಸ್ಗೆ ಹೆಚ್ಚು ಕ್ರೇಜ್; ‘ಲೈಗರ್’ ಇವೆಂಟ್ನಲ್ಲಿ ನಡೆಯಿತು ಅಚ್ಚರಿಯ ಘಟನೆ
‘ಲೈಗರ್’ ಚಿತ್ರದಲ್ಲಿ ವಿಜಯ್ ಅವರು ಸಖತ್ ಆ್ಯಕ್ಷನ್ ಮೆರೆದಿದ್ದಾರೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ. ಅವರು ಈ ಚಿತ್ರದ ಮೂಲಕ ಬಾಲಿವುಡ್ ಮಂದಿಗೆ ಪರಿಚಯಗೊಳ್ಳುತ್ತಿದ್ದಾರೆ. ಅನನ್ಯಾ ಪಾಂಡೆ ಅವರು ಈ ಚಿತ್ರದ ನಾಯಕಿ. ‘ಲೈಗರ್’ ಚಿತ್ರದ ಮೂಲಕ ಅವರು ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಪುರಿ ಜಗನ್ನಾಥ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್, ಪುರಿ ಜಗನ್ನಾಥ್ ಮೊದಲಾದವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Fri, 5 August 22








