AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲಿವುಡ್ ಪಾಲಿಗೆ ಅತಿ ದೊಡ್ಡ ಕನಸು ಕನಸಾಗೇ ಉಳಿಯುತ್ತಾ? ತೀವ್ರವಾಗಿ ಕುಸಿದ ‘ಜೈಲರ್ 2’ ಕಲೆಕ್ಷನ್

ರಜನಿಕಾಂತ್ ಅಭಿನಯದ ಜೈಲರ್ ಎರಡು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹದಿನೈದು ದಿನಗಳನ್ನು ಪೂರೈಸಿದೆ. ಭರ್ಜರಿ ಆರಂಭದ ನಂತರ ಗಳಿಕೆ ಕುಸಿದಿದ್ದು, ನವೆಂಬರ್ ಐದಕ್ಕೆ ಬರಲಿರುವ ರಾಮಾಯಣ ಚಿತ್ರದ ಅಬ್ಬರ ಹಾಗೂ ಒಟಿಟಿ ಬಿಡುಗಡೆಯ ಭೀತಿಯಿಂದಾಗಿ ಸಾವಿರ ಕೋಟಿ ಕ್ಲಬ್ ಸೇರುವುದು ಈಗ ಬಹುತೇಕ ಅನುಮಾನವೆನಿಸಿದೆ.

ಕಾಲಿವುಡ್ ಪಾಲಿಗೆ ಅತಿ ದೊಡ್ಡ ಕನಸು ಕನಸಾಗೇ ಉಳಿಯುತ್ತಾ? ತೀವ್ರವಾಗಿ ಕುಸಿದ ‘ಜೈಲರ್ 2’ ಕಲೆಕ್ಷನ್
ಜೈಲರ್ 2
ರಾಜೇಶ್ ದುಗ್ಗುಮನೆ
|

Updated on: Oct 30, 2026 | 1:10 PM

Share

ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 15 ದಿನಗಳು ಪೂರೈಸಿದೆ. ಆರಂಭದ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಈ ಚಿತ್ರ, ಇದೀಗ ಎರಡನೇ ವಾರದ ವೇಳೆಗೆ ತನ್ನ ಗಳಿಕೆಯಲ್ಲಿ ಗಣನೀಯ ಕುಸಿತ ಕಂಡಿದೆ. ಪ್ರಸ್ತುತ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಗಮನಿಸಿದರೆ, ಈ ಸಿನಿಮಾ 1,000 ಕೋಟಿ ಕ್ಲಬ್ ಸೇರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

‘ಜೈಲರ್ 2’ ಸಿನಿಮಾ ಬಿಡುಗಡೆಯಾದ ಹದಿನೈದನೇ ದಿನದಂದು ಭಾರತದಲ್ಲಿ ಒಟ್ಟು 5.90 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾದ ಭಾರತದ ಗ್ರಾಸ್ ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ. ವಿದೇಶದ ಕಲೆಕ್ಷನ್ ಸೇರಿದರೆ 766 ಕೋಟಿ ರೂಪಾಯಿ ಆಗಿದೆ.

1000 ಕೋಟಿ ಕಷ್ಟ?

ತಮಿಳು ಚಿತ್ರರಂಗದಲ್ಲಿ ಈವರೆಗೆ ಯಾವುದೇ ಸಿನಿಮಾ 1,000 ಕೋಟಿ ರೂಪಾಯಿ ಗಳಿಕೆಯನ್ನು ದಾಟಿಲ್ಲ. ‘ಜೈಲರ್ 2’ ಸಿನಿಮಾ ಮೊದಲ ದಿನಗಳಲ್ಲಿ ತೋರಿಸಿದ ವೇಗವನ್ನು ನೋಡಿ, ಇದು ಪ್ರಥಮ ಬಾರಿಗೆ ಆ ಮೈಲಿಗಲ್ಲನ್ನು ಸಾಧಿಸಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು. ಆದರೆ 15ನೇ ದಿನಕ್ಕೆ ತಲುಪುವಷ್ಟರಲ್ಲಿ ಗಳಿಕೆಯ ವೇಗ ಗಣನೀಯವಾಗಿ ಡಲ್ ಆಗಿದೆ. ಮೊದಲ ವಾರದಲ್ಲೇ 334.35 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಎರಡನೇ ವಾರದ ವಾರದ ದಿನಗಳಲ್ಲಿ ಮಂದಗತಿ ಪಡೆದುಕೊಂಡಿದೆ. 15ನೇ ದಿನದ ಥಿಯೇಟರ್ ಆಕ್ಯುಪೆನ್ಸಿ ಶೇ. 14.8 ಕ್ಕೆ ಇಳಿದಿದ್ದು, ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಇದನ್ನೂ ಓದಿ: ‘ಧರ್ಮನ್’ ಚಿತ್ರಕ್ಕೆ ರಜನಿಕಾಂತ್ – ನಯನತಾರಾ ಹಿಟ್ ಕಾಂಬೊ ಮತ್ತೆ ಒಂದು?

ದೊಡ್ಡ ಸವಾಲು

ಬರುವ ನವೆಂಬರ್ 5ಕ್ಕೆ ಬಹುಕೋಟಿ ವೆಚ್ಚದ ಬೃಹತ್ ಚಿತ್ರ ‘ರಾಮಾಯಣ’ ಬಿಡುಗಡೆಯಾಗಲಿದೆ. ‘ರಾಮಾಯಣ’ ಚಿತ್ರದ ಆಗಮನದಿಂದಾಗಿ ‘ಜೈಲರ್ 2’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳು ಮತ್ತು ಸ್ಕ್ರೀನ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿತಗೊಳ್ಳಲಿದೆ. ಚಿತ್ರ ಬಿಡುಗಡೆಯಾಗಿ ಒಂದೇ ತಿಂಗಳಿಗೆ ಅಂದರೆ ನವೆಂಬರ್ ಮಧ್ಯಭಾಗದಲ್ಲಿ ಒಟಿಟಿ ಬರುವ ಸಾಧ್ಯತೆಗಳಿರುವುದರಿಂದ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More