AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿದರೆ ಹೃದಯ ಮತ್ತು ಮೆದುಳು ಆರೋಗ್ಯವಾಗಿರುತ್ತದೆಯೇ?

ಹೃದಯ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ನಿಯಮಿತ ವ್ಯಾಯಾಮ ಮಾಡುವುದು ನಿಜವಾಗಿಯೂ ಬಹಳ ಮುಖ್ಯ. ದೈಹಿಕ ಚಟುವಟಿಕೆಯ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಹೃದಯ ಮತ್ತು ಮನಸ್ಸು ಎರಡನ್ನೂ ಸದೃಢವಾಗಿಡಲು ಏನು ಮಾಡಬೇಕು, ಕೇವಲ ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿದರೆ ಆರೋಗ್ಯವಾಗಿ ಇರಬಹುದೇ? ಇದರಿಂದ ನಮ್ಮ ದೇಹಕ್ಕೆ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿದರೆ ಹೃದಯ ಮತ್ತು ಮೆದುಳು ಆರೋಗ್ಯವಾಗಿರುತ್ತದೆಯೇ?
150 Minutes Of Weekly ExerciseImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 01, 2026 | 5:50 PM

Share

ಮುಖ್ಯಾಂಶಗಳು

  • ಉತ್ತಮ ಆರೋಗ್ಯಕ್ಕಾಗಿ ವಾರಕ್ಕೆ 150 ನಿಮಿಷ ದೈಹಿಕ ಚಟುವಟಿಕೆ
  • ಪ್ರತಿವಾರ 150 ನಿಮಿಷ ವ್ಯಾಯಾಮ: ಆರೋಗ್ಯಕರ ಜೀವನದ ಗುಟ್ಟು
  • ವ್ಯಾಯಾಮದಿಂದ ಹೃದಯ ಮತ್ತು ಮೆದುಳಿನ ಆರೋಗ್ಯ ಹೇಗೆ ಸುಧಾರಿಸುತ್ತದೆ?

ಇಂದಿನ ಜೀವನಶೈಲಿಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದು ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ವಾರಕ್ಕೆ 150 ನಿಮಿಷ ವ್ಯಾಯಾಮ (Exercise) ಮಾಡುವುದು ಹೃದಯ (Heart) ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿ. ಈ 150 ನಿಮಿಷವನ್ನು ಒಂದೇ ದಿನ ಮಾಡಬೇಕಾಗಿಲ್ಲ. ವಾರದ ವಿವಿಧ ದಿನಗಳಲ್ಲಿ 30 ನಿಮಿಷಗಳಂತೆ ಹಂಚಿಕೊಂಡು ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿ ಮಾಡುವುದರಿಂದ ಸಿಗುವ ಪ್ರಯೋಜನಗಳೇನು, ಈ ಸಮಯದಲ್ಲಿ ವ್ಯಾಯಾಮ ಮಾಡಬಹುದು ಮತ್ತು ಅದನ್ನು ಮಾಡುವಾಗ ಯಾವ ರೀತಿ ಸಲಹೆಯನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಹೃದಯ ಮತ್ತು ಮೆದುಳಿಗೆ ಪ್ರಯೋಜನಗಳು:

ಅಧ್ಯಯನಗಳ ಪ್ರಕಾರ, ನಿಯಮಿತ ವ್ಯಾಯಾಮ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರಕ್ತಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕ ಸಮರ್ಪಕವಾಗಿ ತಲುಪುತ್ತದೆ. ಜೊತೆಗೆ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಿ, ಮನಸ್ಥಿತಿಯನ್ನು ಉತ್ತಮಗೊಳಿಸುವುದರೊಂದಿಗೆ ನೆನಪಿನ ಶಕ್ತಿ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಏನ್ ಮಾಡ್ಬೇಕು? ನಿಮ್ಮ ದಿನಚರಿ ಆರೋಗ್ಯಕರವಾಗಿ ಆರಂಭವಾಗಲು ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಯಾವ ವ್ಯಾಯಾಮಗಳನ್ನು ಮಾಡಬಹುದು?

ವಾರಕ್ಕೆ 150 ನಿಮಿಷಗಳ ಗುರಿಯನ್ನು ತಲುಪಲು ವೇಗವಾಗಿ ನಡೆಯುವುದು, ಸೈಕ್ಲಿಂಗ್, ಈಜು, ಲಘು ಜಾಗಿಂಗ್, ನೃತ್ಯ, ಮೆಟ್ಟಿಲು ಹತ್ತುವುದು, ತೋಟಗಾರಿಕೆ ಅಥವಾ ಮನೆಯ ಸಕ್ರಿಯ ಕೆಲಸಗಳನ್ನು ಮಾಡಬಹುದು. ವಾರದಲ್ಲಿ ಐದು ದಿನ, ದಿನಕ್ಕೆ ಸುಮಾರು 30 ನಿಮಿಷ ವ್ಯಾಯಾಮ ಮಾಡಿದರೆ ಸಾಕಾಗುತ್ತದೆ.

ವ್ಯಾಯಾಮ ಮಾಡುವಾಗ ಗಮನಿಸಬೇಕಾದ ವಿಷಯಗಳು

ವ್ಯಾಯಾಮ ಆರಂಭಿಸುವ ಮೊದಲು ವಾರ್ಮ್- ಅಪ್ ಮಾಡಿ, ಕೊನೆಯಲ್ಲಿ ಕೂಲ್- ಡೌನ್ ಮಾಡುವುದು ಉತ್ತಮ. ನಿಧಾನವಾಗಿ ಆರಂಭಿಸಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಯ ಮತ್ತು ತೀವ್ರತೆಯನ್ನು ಹೆಚ್ಚಿಸಿ. ಸಾಕಷ್ಟು ನೀರು ಕುಡಿಯಿರಿ ಹಾಗೂ ಆರಾಮದಾಯಕ ಉಡುಪು ಮತ್ತು ಶೂಗಳನ್ನು ಧರಿಸಿ. ವ್ಯಾಯಾಮದ ವೇಳೆ ಎದೆನೋವು, ಉಸಿರಾಟದ ತೊಂದರೆ, ತಲೆಸುತ್ತು ಅಥವಾ ಅತಿಯಾದ ಆಯಾಸ ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಿ. ಈಗಾಗಲೇ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಹೊಸ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್