ಡಯಾಬಿಟಿಸ್ ಇರುವವರು ಸಿಹಿಯಾಗಿರುವ ಟೂತ್‌ಪೇಸ್ಟ್ ಬಳಸಬಹುದೇ? ಇದಕ್ಕೆ ತಜ್ಞರ ಅಭಿಪ್ರಾಯವೇನು?
ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆದರೆ ಟೂತ್‌ಪೇಸ್ಟ್ ವಿಷಯಕ್ಕೆ ಬಂದರೆ ಸಿಹಿಯಾಗಿರುವ ಟೂತ್‌ಪೇಸ್ಟ್ ಬಳಸಬಹುದೇ ಅಥವಾ ಬೇಡವೇ ಎಂಬ ಗೊಂದಲವಿರುತ್ತದೆ. ಹಾಗದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಡಯಾಬಿಟಿಸ್ ಇರುವವರು ಇಂತಹ ಟೂತ್‌ಪೇಸ್ಟ್ ಬಳಸಬಹುದೇ ಇದಕ್ಕೆ ಉತ್ತರ ಸ್ಟೋರಿಯಲ್ಲಿದೆ.

ಡಯಾಬಿಟಿಸ್ ಇದ್ದವರು ತಮ್ಮ ಆಹಾರ, ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಹಾರದಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ, ಯಾವ ಹಣ್ಣು ತಿನ್ನಬೇಕು, ಯಾವ ಜ್ಯೂಸ್ ಕುಡಿಯಬಾರದು ಎಂಬುದರ ಬಗ್ಗೆ ಸಾಕಷ್ಟು ಯೋಚಿಸಬೇಕಾಗುತ್ತದೆ. ಅದರಲ್ಲಿಯೂ ಪ್ರತಿನಿತ್ಯ ಬೆಳಗಾದರೆ ಬ್ರಷ್ ಮಾಡಲು ಬಳಸುವ ಟೂತ್‌ಪೇಸ್ಟ್ ಸಿಹಿಯಾಗಿದ್ದರೆ ಅದನ್ನು ಬಳಸಬಹುದೇ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಹಾಗದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಡಯಾಬಿಟಿಸ್ ಇರುವವರು ಇಂತಹ ಟೂತ್‌ಪೇಸ್ಟ್ ಬಳಸಬಹುದೇ ಇದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ.
ಟೂತ್‌ಪೇಸ್ಟ್ ಸಿಹಿಯಾಗಿ ರುಚಿಯಾರಿಗಿರುತ್ತದೆ ಎಂದ ಮಾತ್ರಕ್ಕೆ ಅದರಲ್ಲಿ ಸಕ್ಕರೆ ಇದೆ ಎಂದರ್ಥವಲ್ಲ. ಕೆಲವು ಟೂತ್‌ಪೇಸ್ಟ್‌ಗಳಲ್ಲಿ ಸಿಹಿ ರುಚಿಗಾಗಿ ಸಕ್ಕರೆಯ ಬದಲು ಕಡಿಮೆ ಅಥವಾ ಕ್ಯಾಲೊರಿ ಇಲ್ಲದ ಸ್ವೀಟನರ್‌ಗಳನ್ನು ಬಳಸಲಾಗುತ್ತದೆ. ಹೀಗಾಗಿ ಡಯಾಬಿಟಿಸ್ ಇರುವವರು ಟೂತ್‌ಪೇಸ್ಟ್ ಆಯ್ಕೆ ಮಾಡುವಾಗ ರುಚಿಗಿಂತ ಅದರ ಇಂಗ್ರೀಡಿಯೆಂಟ್ಸ್ (Ingredients) ಮತ್ತು ಫ್ಲೋರೈಡ್ (Fluoride) ಇರುವುದನ್ನು ಗಮನಿಸುವುದು ಬಹಳ ಮುಖ್ಯ.
ಟೂತ್‌ಪೇಸ್ಟ್ ಸಿಹಿಯಾಗಿದೆ ಎಂದರೆ ಸಕ್ಕರೆ ಇದೆ ಎಂದು ಅರ್ಥವೇ?
ಟೂತ್‌ಪೇಸ್ಟ್‌ಗೆ ಸಿಹಿ ರುಚಿ ಬರಲು ಕೆಲವು ಉತ್ಪನ್ನಗಳಲ್ಲಿ ಸಕ್ಕರೆಯ ಬದಲು ಬೇರೆ ಸ್ವೀಟನರ್‌ಗಳನ್ನು ಬಳಸಲಾಗುತ್ತದೆ. ಆದ್ದರಿಂದ ಟೂತ್‌ಪೇಸ್ಟ್ ಸಿಹಿಯಾಗಿದೆ ಎಂಬ ಕಾರಣಕ್ಕೆ ಅದನ್ನು ಡಯಾಬಿಟಿಸ್ ಇರುವವರು ಬಳಸಬಾರದು ಎಂಬುದು ಸರಿಯಲ್ಲ. ಆದರೆ ಯಾವುದೇ ಉತ್ಪನ್ನ ಖರೀದಿಸುವಾಗ ಅದರ ಲೇಬಲ್ ಮತ್ತು ಇಂಗ್ರೀಡಿಯೆಂಟ್ಸ್ ಪರಿಶೀಲಿಸುವುದು ಒಳ್ಳೆಯ ಅಭ್ಯಾಸ.
ಡಯಾಬಿಟಿಸ್ ಇರುವವರು ಯಾವ ರೀತಿಯ ಟೂತ್‌ಪೇಸ್ಟ್ ಆಯ್ಕೆ ಮಾಡಬೇಕು?
ಟೂತ್‌ಪೇಸ್ಟ್ ಆಯ್ಕೆ ಮಾಡುವಾಗ ಮುಖ್ಯವಾಗಿ ಫ್ಲೋರೈಡ್ (Fluoride) ಇದೆಯೇ ಎಂಬುದನ್ನು ಗಮನಿಸಿ. ಫ್ಲೋರೈಡ್ ಹಲ್ಲಿನ ಎನಾಮೆಲ್‌ನ್ನು ಬಲಪಡಿಸಲು ಮತ್ತು ಹಲ್ಲು ಕೊಳೆಯುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಈಗಾಗಲೇ ಹಲ್ಲು ಅಥವಾ ದವಡಿನಲ್ಲಿ ರಕ್ತಸ್ರಾವ, ಹಲ್ಲಿನ ಸೆನ್ಸಿಟಿವಿಟಿ, ಬಾಯಿಯ ದುರ್ವಾಸನೆ ಅಥವಾ ಬೇರೆ ದಂತ ಸಮಸ್ಯೆಗಳಿದ್ದರೆ, ಸ್ವತಃ ಟೂತ್‌ಪೇಸ್ಟ್ ಆಯ್ಕೆ ಮಾಡುವ ಬದಲು ದಂತ ವೈದ್ಯರ ಸಲಹೆ ಪಡೆಯುವುದು ಉತ್ತಮ.
ದಿನಕ್ಕೆ ಎಷ್ಟು ಬಾರಿ ಬ್ರಷ್ ಮಾಡಬೇಕು?
ಸಾಮಾನ್ಯವಾಗಿ ದಿನಕ್ಕೆ ಎರಡು ಬಾರಿ, ಸುಮಾರು ಎರಡು ನಿಮಿಷಗಳ ಕಾಲ ಬ್ರಷ್ ಮಾಡುವುದು ಉತ್ತಮ. ಬೆಳಗ್ಗೆ ಮಾತ್ರ ಬ್ರಷ್ ಮಾಡಿ ಬಿಡುವುದು ಸಾಕಾಗುವುದಿಲ್ಲ. ರಾತ್ರಿ ಮಲಗುವ ಮುನ್ನ ಬ್ರಷ್ ಮಾಡುವುದು ಕೂಡ ಮುಖ್ಯ.
ಟೂತ್‌ಪೇಸ್ಟ್ ಮಾತ್ರ ಸಾಕಾಗುವುದಿಲ್ಲ!
ಡಯಾಬಿಟಿಸ್ ಇರುವವರು ಎಷ್ಟೇ ಉತ್ತಮ ಟೂತ್‌ಪೇಸ್ಟ್ ಬಳಸಿದರೂ, ಬಾಯಿಯ ಆರೋಗ್ಯಕ್ಕಾಗಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ಪಾಲಿಸಬೇಕು.
- ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ.
- ಸುಮಾರು ಎರಡು ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ.
- ಹಲ್ಲುಗಳ ನಡುವಿನ ಭಾಗವನ್ನೂ ಸ್ವಚ್ಛಗೊಳಿಸಿ.
- ತುಂಬಾ ಗಟ್ಟಿಯಾಗಿ ಬ್ರಷ್ ಮಾಡುವುದನ್ನು ತಪ್ಪಿಸಿ.
- ಟೂತ್‌ಬ್ರಶ್ ಅನ್ನು ನಿಯಮಿತವಾಗಿ ಬದಲಾಯಿಸಿ.
- ಸಿಹಿ ಆಹಾರ ಮತ್ತು ಸಕ್ಕರೆ ಇರುವ ಪಾನೀಯಗಳ ಸೇವನೆಯನ್ನು ಮಿತಿಗೊಳಿಸಿ.
- ಡಯಾಬಿಟಿಸ್‌ನಲ್ಲಿನ ರಕ್ತದ ಸಕ್ಕರೆಯನ್ನು ವೈದ್ಯರ ಸಲಹೆಯಂತೆ ನಿಯಂತ್ರಣದಲ್ಲಿಡಿ.
- ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳಿ.
ಯಾವ ಲಕ್ಷಣ ಕಂಡುಬಂದರೆ ಡೆಂಟಿಸ್ಟ್‌ರನ್ನು ಭೇಟಿ ಮಾಡಬೇಕು?
- ಹಲ್ಲುಗಳಿಂದ ಪದೇಪದೇ ರಕ್ತಸ್ರಾವ
- ಹಲ್ಲು ನೋವು, ಊತ ಅಥವಾ ಕೆಂಪಾಗುವುದು
- ಹಲ್ಲುಗಳು ಅಲುಗಾಡುವುದು
- ಬಾಯಿಯಿಂದ ನಿರಂತರ ದುರ್ವಾಸನೆ
- ಬಾಯಿ ಹೆಚ್ಚು ಒಣಗುವುದು
- ಬಾಯಿಯಲ್ಲಿ ಗಾಯಗಳು ಪದೇಪದೇ ಕಾಣಿಸಿಕೊಳ್ಳುವುದು
- ಹಲ್ಲುಗಳಲ್ಲಿ ಸೆನ್ಸಿಟಿವಿಟಿ ಹೆಚ್ಚಾಗುವುದು
ಡಯಾಬಿಟಿಸ್ ಇದ್ದರೆ ಸಿಹಿ ಟೂತ್‌ಪೇಸ್ಟ್ ಬಳಸಬಹುದೇ?
ಟೂತ್‌ಪೇಸ್ಟ್ ಸಿಹಿಯಾಗಿದೆ ಎಂಬ ಕಾರಣಕ್ಕೆ ಮಾತ್ರ ಅದನ್ನು ತಪ್ಪಿಸಬೇಕೆಂದಿಲ್ಲ. ಅದರ Ingredients ಮತ್ತು Fluoride ಅಂಶವನ್ನು ಪರಿಶೀಲಿಸುವುದು ಹೆಚ್ಚು ಮುಖ್ಯ. ಯಾವುದೇ ವಿಶೇಷ ದಂತ ಸಮಸ್ಯೆ ಇದ್ದರೆ ದಂತ ವೈದ್ಯರ ಸಲಹೆಯಂತೆ ಟೂತ್‌ಪೇಸ್ಟ್ ಆಯ್ಕೆ ಮಾಡುವುದು ಉತ್ತಮ.
ಡಯಾಬಿಟಿಸ್ ಇದ್ದವರಿಗೆ ಬಾಯಿಯ ಆರೋಗ್ಯವೂ ಒಟ್ಟಾರೆ ಆರೋಗ್ಯದ ಒಂದು ಪ್ರಮುಖ ಭಾಗವಾಗಿರುತ್ತದೆ. ಟೂತ್‌ಪೇಸ್ಟ್‌ನ ರುಚಿಗಿಂತ ಅದರ ಅಂಶಗಳು, ಸರಿಯಾದ ಬ್ರಷಿಂಗ್ ಅಭ್ಯಾಸ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ನಿಯಮಿತ ದಂತ ತಪಾಸಣೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಡಯಾಬಿಟಿಸ್ ಅಥವಾ ದಂತ ಸಮಸ್ಯೆಗಳಿಗೆ ಸಂಬಂಧಿಸಿದ ವೈಯಕ್ತಿಕ ಸಲಹೆಗೆ ವೈದ್ಯರು ಅಥವಾ ಅರ್ಹ ದಂತ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




