ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಸರಳ ವಿಧಾನದ ಮೂಲಕ ಪರಿಹಾರ ತಿಳಿಯಿರಿ
ಬೆನ್ನಿನ ಹುರಿ, ಮೂಳೆಯ ನೋವುಗಳ ಕುರಿತಾಗಿ ನಿರ್ಲ್ಯಕ್ಷಬೇಡ. ವ್ಯಾಯಾಮದ ಮೂಲಕವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂಬ ಯೋಚನೆಯೂ ಬೇಡ. ನಿಮ್ಮ ಆರೋಗ್ಯದಲ್ಲಿ ಏನೇ ವ್ಯತ್ಸಾಸವಾದರೂ ಮೊದಲು ಹತ್ತಿರದ ವೈದ್ಯರ ಭೇಟಿ ಮಾಡಿ. ಅವರ ಸಲಹೆಯ ಮೇರೆಗೆ ವ್ಯಾಯಮವನ್ನು ಪ್ರತಿನಿತ್ಯದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಬೆಳಿಗ್ಗಿನಿಂದ ಸಂಜೆಯವರೆಗೆ ದುಡಿದು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಲಾಕ್ಡೌನ್ನಿಂದಾಗಿ ವರ್ಕ್ ಫ್ರಂ ಹೋಮ್ ಕೆಲಸ ನಿರ್ವಹಿಸುವವರಿಗಂತೂ ಬೆನ್ನು ನೋವು ಸಾಮಾನ್ಯ. ಕುರ್ಚಿಯ ಮೇಲೆ ಕುಳಿತಿದ್ದೇ ಸರಿಯಾಗುತ್ತಿಲ್ಲ. ವಿಪರೀತ ಬೆನ್ನು ನೋವಿನಿಂದಾಗಿ ಕೆಲಸದ ಬಗೆಗೆ ಹೆಚ್ಚು ಆಸಕ್ತಿಯಿಲ್ಲ. ಕೆಲಸ ಮಾಡಲು ಕುಳಿತರೆ ಸಾಕು ಕಿರಿಕಿರಿ ಭಾವ. ಹೀಗಾಗಿ ನಿಮ್ಮ ಬೆನ್ನು ನೋವಿಗೆ ಪರಿಹಾರವಾಗಿ ಇಲ್ಲೊಂದಿಷ್ಟು ವ್ಯಾಯಮವಿದೆ. ಇವುಗಳನ್ನು ಸರಿಯಾಗಿ ಪಾಲಿಸಿದಲ್ಲಿ ಬೆನ್ನು ನೋವಿನಿಂದ ಹೊರಬರಬಹುದು.
ತಜ್ಞೆ ರುಜುತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮೂರು ಸರಳ ವಿಧಾನದ ಮೂಲಕವಾಗಿ ಬೆನ್ನು ನೋವಿಗೆ ಪರಿಹಾರವನ್ನು ಹೇಳಿದ್ದಾರೆ. ಈ ವ್ಯಾಯಾಮವು ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಮತ್ತು ಬೆನ್ನು ನೋವು ನಿವಾರಣೆಗೆ ಸಹಾಯಕಾರಿಯಾಗಿದೆ.
ನಿಮ್ಮ ಮನೆಯ ಗೋಡೆಗೆ ಸಾದಿ ನೇರವಾಗಿ ನಿಂತುಕೊಳ್ಳಿ. ಎರಡು ಹೆಜ್ಜೆ ಮುಂದಕ್ಕೆ ಬನ್ನಿ. ಮೊಣಕಾಲನ್ನು ಬಗ್ಗಿಸದೇ ಸೊಂಟದ ಭಾಗವನ್ನು ಬಾಗಿಸಿ. ಆದರೆ ಬೆನ್ನು ಹುರಿ ನೇರವಾಗಿರಲಿ. ನೇರವಾದ ದೃಷ್ಟಿಯಿರಲಿ. ನಿಧಾನವಾಗಿ ಎಷ್ಟು ಬಾಗಲು ಸಾಧ್ಯವೋ ಅಷ್ಟು ಮುಂದಕ್ಕೆ ಬಾಗಲು ಪ್ರಯತ್ನಿಸಿ. ನಿಮ್ಮಲ್ಲಿ ಆಗುವಷ್ಟು ಸಮಯ ಅದೇ ಆಸನದಲ್ಲಿ ಇರಲು ಪ್ರಯತ್ನಿಸಿ. ಹೀಗೆ ಮಾಡುವುದರ ಮೂಲಕ ನಿಮ್ಮ ಬೆನ್ನಿನ ಮೂಳೆಗಳು ಬಲಗೊಳ್ಳುತ್ತವೆ. ಇದರಿಂದ ಬೆನ್ನು ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
View this post on Instagram
ಗೋಡೆಗೆ ಮುಖ ಮಾಡಿ ನಿಂತುಕೊಳ್ಳಿ. ನಿಮ್ಮ ಎರಡೂ ಕೈಗಳ ಹಸ್ತಗಳನ್ನು ಗೋಡೆಯ ಮೇಲಿಡಿ. ಮುಖವನ್ನು ಮೇಲಕ್ಕೆತ್ತಿ ಮತ್ತು ನಿಧಾನವಾಗಿ ಬೆನ್ನು ಹಿಂದಕ್ಕೆ ಬಾಗಿಸಿ. ಈ ರೀತಿಯ ವ್ಯಾಯಾಮ ಮಾಡುವುದರ ಈ ಮೂಲಕ ನಿಮ್ಮ ಬೆನ್ನಿನ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಗೋಡೆಯಿಂದ ಎರಡು ಹೆಜ್ಜೆ ಅಂತರದಲ್ಲಿ ನೇರವಾಗಿ ನಿಂತುಕೊಳ್ಳಿ. ನಂತರ ಎರಡು ಕೈಗಳನ್ನು ನೇರವಾಗಿ ಮೇಲಕ್ಕೆತ್ತಿ. ಗೋಡೆಗೆ ಬೆನ್ನು ಹಾಕಿ ನೀವು ನಿಂತಿರಬೇಕು. ನಿಧಾನವಾಗಿ ನಿಮ್ಮೆರಡೂ ಕೈಗಳನ್ನು ಗೋಡೆಗೆ ತಾಗಿಸಲು ಪ್ರಯತ್ನಿಸಿ. ಬೆನ್ನು ಹುರಿ ಹಿಂದಕ್ಕೆ ಭಾಗುತ್ತದೆ. ಆದಷ್ಟು ಸಮಯ ಹಾಗೆಯೇ ನಿಂತುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಬೆನ್ನು ನೋವನ್ನು ನಿವಾರಿಸಿಕೊಳ್ಳಬಹುದು ಎಂದು ತಜ್ಞೆ ರುಜುತಾ ಹೇಳಿದ್ದಾರೆ.
ಬೆನ್ನಿನ ಹುರಿ, ಮೂಳೆಯ ನೋವುಗಳ ಕುರಿತಾಗಿ ನಿರ್ಲ್ಯಕ್ಷಬೇಡ. ವ್ಯಾಯಾಮದ ಮೂಲಕವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂಬ ಯೋಚನೆಯೂ ಬೇಡ. ನಿಮ್ಮ ಆರೋಗ್ಯದಲ್ಲಿ ಏನೇ ವ್ಯತ್ಸಾಸವಾದರೂ ಮೊದಲು ಹತ್ತಿರದ ವೈದ್ಯರ ಭೇಟಿ ಮಾಡಿ. ಅವರ ಸಲಹೆಯ ಮೇರೆಗೆ ವ್ಯಾಯಮವನ್ನು ಪ್ರತಿನಿತ್ಯದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ:
ಬೆನ್ನು ನೋವು ಅಂದಿದ್ದಕ್ಕೆ ಹೊದಿಕೆ, ದಿಂಬು ತಂದುಕೊಟ್ಟ ರಾಗಿಣಿ ಕುಟುಂಬ
ಅರ್ಧ ತಲೆನೋವು ಬರೋದೇಕೆ? ಇದಕ್ಕೆ ಮನೆ ಮದ್ದುಗಳೇನು?
Published On - 2:52 pm, Wed, 2 June 21