Hot Bag or Ice Bag : ಹಾಟ್ ಮತ್ತು ಕೋಲ್ಡ್ ಕಂಪ್ರೆಸ್; ಯಾವ ಸಮಯದಲ್ಲಿ ಯಾವುದು ಉತ್ತಮ ತಿಳಿದುಕೊಳ್ಳಿ

ಹಾಟ್ ಮತ್ತು ಕೋಲ್ಡ್ ಕಂಪ್ರೆಸ್ ಚಿಕಿತ್ಸೆ ನೀಡುವುದು ಸಾಮಾನ್ಯ. ಈ ಪದ್ಧತಿ ಭಾರತದ ಹಳೆಯ ಸಂಪ್ರದಾಯವಾಗಿದೆ. ಇದನ್ನು ವೈದ್ಯರು ಕೂಡ ಶಿಫಾರಸ್ಸು ಮಾಡುತ್ತಾರೆ. ನೋವಿಗೆ ಬಿಸಿ ಶಾಖ ಅಥವಾ ತಣ್ಣನೆಯ ನೀರು, ಐಸ್ ಕ್ಯೂಬ್ ಗಳನ್ನು ಇಟ್ಟು ನೋವನ್ನು ಕಡಿಮೆ ಮಾಡಿಕೊಳ್ಳುವುದು ಸಾಮಾನ್ಯ. ನೋವು, ಉರಿಯೂತ, ಊತ ನಿಯಂತ್ರಿಸಲು ಈ ವಿಧಾನಗಳು ಸಹಕಾರಿಯಾಗುತ್ತವೆ. ಯಾವುದೇ ರೀತಿಯ ನೋವು ಹಾಗೂ ಗಾಯಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಮತ್ತು ಒಳ್ಳೆ ಮಾರ್ಗವಾಗಿದೆ. ಆದರೆ ಯಾವ ಸಂದರ್ಭಗಳಲ್ಲಿ ಯಾವ ಕಂಪ್ರೆಸ್ (ಹಾಟ್ ಮತ್ತು ಕೋಲ್ಡ್) ಬಳಸಬೇಕೆಂದು ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ ಇದನ್ನು ಅರಿತಾಗ ಮಾತ್ರ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ.

Hot Bag or Ice Bag : ಹಾಟ್ ಮತ್ತು ಕೋಲ್ಡ್ ಕಂಪ್ರೆಸ್; ಯಾವ ಸಮಯದಲ್ಲಿ ಯಾವುದು ಉತ್ತಮ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 26, 2024 | 3:04 PM

ನೋವಿರುವ ಜಾಗಗಳಲ್ಲಿ ಹಾಟ್ ಮತ್ತು ಕೋಲ್ಡ್ ಕಂಪ್ರೆಸ್ ಚಿಕಿತ್ಸೆ ನೀಡುವುದು ಸಾಮಾನ್ಯ. ಈ ಪದ್ಧತಿ ಭಾರತದ ಹಳೆಯ ಸಂಪ್ರದಾಯವಾಗಿದೆ. ಇದನ್ನು ವೈದ್ಯರು ಕೂಡ ಶಿಫಾರಸ್ಸು ಮಾಡುತ್ತಾರೆ. ನೋವಿಗೆ ಬಿಸಿ ಶಾಖ ಅಥವಾ ತಣ್ಣನೆಯ ನೀರು, ಐಸ್ ಕ್ಯೂಬ್ ಗಳನ್ನು ಇಟ್ಟು ನೋವನ್ನು ಕಡಿಮೆ ಮಾಡಿಕೊಳ್ಳುವುದು ಸಾಮಾನ್ಯ. ನೋವು, ಉರಿಯೂತ, ಊತ ನಿಯಂತ್ರಿಸಲು ಈ ವಿಧಾನಗಳು ಸಹಕಾರಿಯಾಗುತ್ತವೆ. ಯಾವುದೇ ರೀತಿಯ ನೋವು ಹಾಗೂ ಗಾಯಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಮತ್ತು ಒಳ್ಳೆ ಮಾರ್ಗವಾಗಿದೆ. ಆದರೆ ಯಾವ ಸಂದರ್ಭಗಳಲ್ಲಿ ಯಾವ ಕಂಪ್ರೆಸ್ (ಹಾಟ್ ಮತ್ತು ಕೋಲ್ಡ್) ಬಳಸಬೇಕೆಂದು ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ ಇದನ್ನು ಅರಿತಾಗ ಮಾತ್ರ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯ.

ಯಾವ ಸಮಯದಲ್ಲಿ ಯಾವ ಥೆರಪಿ ಉತ್ತಮ?

ಯಾವೆಲ್ಲಾ ಸಂದರ್ಭಗಳಲ್ಲಿ ಬಿಸಿ ಶಾಖದ ಅಗತ್ಯವಿದೆ. ಐಸ್ ಪ್ಯಾಕ್ ಯಾವಾಗ ಇಡುವುದು ಒಳ್ಳೆಯದು ಎಂದು ತಿಳಿದುಕೊಳ್ಳುವುದು ಕ್ಲಿಷ್ಟಕರ. ಕೆಲವೊಮ್ಮೆ ಈ ಎರಡೂ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಗಾಯವಾದ ಜಾಗಕ್ಕೆ ಹೀಟ್ ಅಪ್ಲೈ ಮಾಡುವುದರಿಂದ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಸ್ವಲ್ಪ ಹೆಚ್ಚಿನ ಉಷ್ಣತೆಯು ಸಹ ನೋವು ಮತ್ತು ಅಸ್ವಸ್ಥತೆಯನ್ನು ಶಮನಗೊಳಿಸುತ್ತದೆ ಮತ್ತು ಸ್ನಾಯುಗಳ ಫ್ಲೆಕ್ಸಿಬಿಲಿಟಿ ಹೆಚ್ಚಿಸುತ್ತದೆ. ದೀರ್ಘಕಾಲದ ನೋವು, ಕೀಲು ನೋವಿಗೆ ಹೀಟ್ ಥೆರಪಿಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಊತ ಮತ್ತು ತೀವ್ರವಾದ ಗಾಯಗಳು ಅಥವಾ ಸಣ್ಣ ನೋವಿಗೆ ಕೋಲ್ಡ್ ಥೆರಪಿ ಅಥವಾ ಕ್ರೈಯೊಥೆರಪಿಯನ್ನು ಬಳಕೆ ಮಾಡಬಹುದು. ಉದಾಹರಣೆಗೆ, ಆಟವನ್ನು ಆಡುವಾಗ ಬಿದ್ದು ಕಾಲು ಊದಿಕೊಂಡರೆ ಅಥವಾ ಬಂಪ್ ಇದ್ದರೆ ಐಸ್ ಪ್ಯಾಕ್ ಬಳಸಬಹುದು. ಸ್ನಾಯುಗಳಲ್ಲಿ ನೋವು ಇದ್ದರೆ, ಬಿಸಿ ನೀರಿನ ಶಾಖ ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಸ್ನಾಯು ನೋವು ಅಥವಾ ಬಿಗಿತ, ದೀರ್ಘಕಾಲದ ನೋವು, ಪಾದದ ನೋವು, ಶಸ್ತ್ರಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ನಂತರ ನೋವು ಅಥವಾ ಬಿಗಿತ, ಸಂಧಿವಾತ, ವೃದ್ಧಾಪ್ಯದ ಆರೈಕೆ, ಗಾಯಗಳನ್ನು ಬಹು ಬೇಗ ವಾಸಿ ಮಾಡಿಕೊಳ್ಳಲು ​ಹೀಟ್ ಥೆರಪಿ ಅಥವಾ ಥರ್ಮೋಥೆರಪಿಯನ್ನು ನೀಡಲಾಗುತ್ತದೆ. ಆದರೆ ಅಂಗಾಂಶದಲ್ಲಿನ ರಕ್ತಸ್ರಾವದಿಂದ ಉಂಟಾದ ಉರಿಯೂತದ ತೀವ್ರ ಗಾಯಗಳಿಗೆ ಹೀಟ್ ಥೆರಪಿ ಅಪ್ಲೈ ಮಾಡಬಾರದು, ಗಾಯಗೊಂಡ ಜಾಗಕ್ಕೆ ಶಾಖವನ್ನು ನೀಡುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ, ಇದರಿಂದಾಗಿ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಈ ಸ್ಥಿತಿಯಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕ.

ಈ ಸಂದರ್ಭಗಳಲ್ಲಿ ಐಸ್ ಪ್ಯಾಕ್ ಬಳಕೆ ಮಾಡಿ

ಐಸ್ ಪ್ಯಾಕ್ ಗಳನ್ನು ಊತ, ಉರಿಯೂತ ಮತ್ತು ತೀವ್ರ ಗಾಯ ಅಥವಾ ನೋವಿಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ ಗಾಯದ ನಂತರದ ಮೊದಲ 48 ಗಂಟೆಗಳಲ್ಲಿ ಇದು ಹೆಚ್ಚು ಸಹಾಯಕವಾಗಿದೆ. ಪಾದದ ಮೂಳೆ ಮುರಿತದಂತಹ ಗಾಯಗಳ ನಂತರ ಐಸ್ ಪ್ಯಾಕ್ ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಏಕೆಂದರೆ ಇದು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಕೀಲು ನೋವನ್ನು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ವೈದ್ಯರ ಸಲಹೆಯ ಪ್ರಕಾರ ಮಾಡಬೇಕು.

ಇದನ್ನೂ ಓದಿ: ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ಇನ್ನು ಮುಟ್ಟಿನ ಸಮಯದಲ್ಲಿ ಹೊಟ್ಟೆ ಅಥವಾ ಇನ್ನಿತರ ನೋವಿಗಾಗಿ ಮಹಿಳೆಯರು ನೋವಿನ ಪ್ರದೇಶದ ಮೇಲೆ ಸುಮಾರು 15- 20 ನಿಮಿಷಗಳ ಕಾಲ ಬಿಸಿ ಶಾಖ ಕೊಡುತ್ತಾರೆ. ಈ ರೀತಿ ಮಾಡುವುದು ಒಳ್ಳೆಯದು ಆದರೆ ಇದನ್ನು ತುಂಬಾ ಸಮಯ ಮಾಡಬಾರದು. ಹಾಗಾಗಿ ಮಧ್ಯ ವಿರಾಮ ತೆಗೆದುಕೊಳ್ಳಿ. ಈ ರೀತಿ ಅಂತರ ನೀಡುವುದರಿಂದ ಸ್ನಾಯುಗಳು ಅಥವಾ ಚರ್ಮವನ್ನು ಅತಿಯಾಗಿ ಬಿಸಿಮಾಡದೆ ವಿಶ್ರಾಂತಿ ನೀಡುತ್ತದೆ ಜೊತೆಗೆ ಚರ್ಮವು ಉರಿಯುವುದಿಲ್ಲ. ಆದರೆ ನೆನಪಿರಲಿ, ಬಿಸಿ ಶಾಖ ನೀಡುವಾಗ ಚರ್ಮದ ಮೇಲೆ ತೆಳುವಾದ ಬಟ್ಟೆ ಇರಿಸಿ. ಚರ್ಮದ ಮೇಲೆ ನೇರವಾಗಿ ಶಾಖ ಕೊಡಬೇಡಿ. ಯಾವುದೇ ಆಯ್ಕೆಯಾಗಲಿ 10 ರಿಂದ 15 ನಿಮಿಷಗಳಿಗಿಂತ ಹೆಚ್ಚುಕಾಲ ಬಳಕೆ ಮಾಡಬೇಡಿ ಒಳ್ಳೆಯದಲ್ಲ.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಮಾಹಿತಿಯನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ