Daily Horoscope 23 August 2024: ಈ ರಾಶಿಯವರು ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ; ಶುಕ್ರವಾರದ ದ್ವಾದಶ ರಾಶಿ ಭವಿಷ್ಯ ಇಲ್ಲಿದೆ
ಆಗಸ್ಟ್ 23, 2024ರ ನಿಮ್ಮ ರಾಶಿಭವಿಷ್ಯ: ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಬಂಧುಗಳ ಬಗ್ಗೆ ನಿಮಗೆ ಕನಿಕರ ಬರುವುದು. ಅಮೂಲ್ಯವಾದ ವಸ್ತುವನ್ನು ನೀವು ಕಳೆದಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಆಗಸ್ಟ್ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಬೆಳಿಗ್ಗೆ 11:02 ರಿಂದ 12:35, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ 05:16ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಮೇಷ ರಾಶಿ : ನಿಮ್ಮಲ್ಲಿರುವ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು. ನಿಮ್ಮ ನೋವನ್ನು ಶತ್ರುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ನಿಮಗೆ ಮರಣಭೀತಿ ಕಾಡುವ ಸಾಧ್ಯತೆ ಇದೆ. ಬೇಕಾದುದನ್ನು ಪಡೆಯಲು ದಾಕ್ಷಿಣ್ಯವು ನಿಮಗೆ ಅಡ್ಡ ಬರಬಹುದು. ಇದ್ದಕಿದ್ದಂತೇ ಏನನ್ನಾದರೂ ಆಲೋಚಿಸಲಿದ್ದೀರಿ. ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ. ಒಳ್ಳೆಯ ವಿಚಾರಕ್ಕೆ ನೀವು ಹೆಚ್ಚಿನ ಒತ್ತುಕೊಡಲಿದ್ದೀರಿ. ಒಳ್ಳೆಯದೇ ಆದರೂ ಮಿತಿಯಲ್ಲಿ ಇದ್ದರೆ ಒಳ್ಳೆಯದು. ಸರಳವಾಗಿರಲು ನೀವು ಇಚ್ಛಿಸುವಿರಿ. ಯಾರಿಗಾದೂ ಸಾಲವನ್ನು ಕೊಡಲು ಮುಂದಾಗುವಿರಿ. ಮಂದಗತಿಯಲ್ಲಿ ನಿಮ್ಮ ಇಂದಿನ ಕೆಲಸಗಳು ಸಾಗಬಹುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಜಯದಿಂದ ಬೀಗುವುದು ಬೇಡ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ.
ವೃಷಭ ರಾಶಿ : ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ನಿಮಗೆ ಸುರಕ್ಷಿತ ಸ್ಥಳದಲ್ಲಿ ಇದ್ದು ಬೇಸರವಾಗಬಹುದು. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ಎಲ್ಲರ ಜೊತೆ ಬೆರೆಯುವ ಅಭ್ಯಾಸ ಉತ್ತಮ. ಯಾರದೋ ಮಾತನ್ನು ನಂಬಿ ಬಂಧುಗಳನ್ನು ದೂರ ಮಾಡಿಕೊಳ್ಳಬೇಕಾಗುವುದು. ಯಾರನ್ನಾದರೂ ಕುಟುಕುತ್ತ ಇರುವುದು ನಿಮಗೆ ದುರಭ್ಯಾಸವಾಗುವುದು. ಯಾರ ಜೊತೆಗಾದರೂ ಸುಮ್ಮನೇ ಚರ್ಚೆಗಿಳಿದು ಸೋಲಬೇಕಾದೀತು. ಸಣ್ಣ ವಿಚಾರಕ್ಕೆ ಪತ್ನಿಯ ಜೊತೆ ವಾಗ್ವಾದ ಬೇಡ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯ ನೋವಿಗೆ ಸ್ಪಂದಿಸುವುದು ಕಷ್ಟವಾದೀತು.
ಮಿಥುನ ರಾಶಿ : ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಿದ್ಧ ವಸ್ತುಗಳ ವ್ಯಾಪರದಿಂದ ಲಾಭ. ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಧಿಕ ಮಾತು ನಿಮ್ಮವರಿಗೆ ಇಷ್ಟವಾಗದು. ನಿಮಗೆ ಸಿಗಬೇಕಾದ ಸಂಪತ್ತು ಸರಿಯಾದ ಸಮಯಕ್ಕೆ ಸಿಗದೇ ಸ್ನೇಹಿತರ ಬಳಿ ಸಾಲಮಾಡಬೇಕಾದೀತು. ನೋವಿಗೆ ಪ್ರತಿಯಾಗಿ ನೋವನ್ನು ಕೊಡುವ ನಿರ್ಧಾರ ಮಾಡುವಿರಿ. ಕಛೇರಿಯಲ್ಲಿ ನೀವು ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕತೆ ಬಹಳ ಕೆಳಮಟ್ಟಕ್ಕೆ ಹೋಗಬಹುದು.
ಕರ್ಕಾಟಕ ರಾಶಿ : ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಯಾವುದೇ ಆಮಿಷಕ್ಕೂ ಸುಲಭವಾಗಿ ಒಪ್ಪಲಾರಿರಿ. ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಸಂಗಾತಿಯ ಮಾತು ನಿಮಗೆ ಕೋಪವನ್ನು ತರುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅಧಿಕ ಲಾಭವನ್ನು ಪಡೆಯಬಹುದು. ಬಂಧುಗಳು ನಿಮ್ಮ ಸಂಪತ್ತನ್ನು ಬಯಸುವರು. ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ಸಿದ್ಧಪಡಿಸುವಿರಿ. ಮಕ್ಕಳ ಜೊತೆಗೆ ಇಂದು ಕಳೆದು ಸಂತೋಷವನ್ನು ಪಡೆಯುವಿರಿ. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸುವರು. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ನಿಮ್ಮ ಗುಪ್ತ ಆಲೋಚನೆಗಳು ಬಯಲಾಗಬಹುದು. ಹಳೆಯ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು.
ಸಿಂಹ ರಾಶಿ : ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ಮನೆಯ ಕೆಲಸ ಹಾಗೂ ಕಛೇರಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾದೀತು. ಅನಾಯಾಸವಾಗಿ ಲಾಭವನ್ನು ಪಡೆಯುವ ಜಾಡ್ಯವು ಬರಬಹುದು. ಕೆಲವರ ಒಡನಾಟದಿಂದ ನಕಾರಾತ್ಮಕತೆ ಉಂಟಾಗುವುದು. ಹೊಸ ಯೋಜನೆಯೊಂದು ನಿಮಗೆ ಸಿಗಲಿದ್ದು ಬಹಳ ಉತ್ಸಾಹವಿರಲಿದೆ. ಬೇರೆಯವರ ನೇರವಾದ ನುಡಿಗಳು ನಿಮಗೆ ನಾಟಬಹುದು. ಮನಸ್ಸು ಬಹಳ ತಳಮಳಗೊಳ್ಳಬಹುದು. ಮನೆಯವರಿಗೆ ನಿಮ್ಮ ಬದಲಾವಣೆ ಅನಿರೀಕ್ಷಿತ ಎನಿಸಬಹುದು. ಇತರ ಕೆಲಸದಲ್ಲಿ ಮಗ್ನವಾಗಿ ಮಾಡಬೇಕಾದ ಮುಖ್ಯ ಕೆಲಸವು ನಿಂತುಹೋಗಬಹುದು. ಸ್ವಚ್ಛಂದವಾಗಿ ವಿಹರಿಸುವ ಮನಸ್ಸು ಇರಲಿದೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ಮುಖಂಡರು ಬಹಳ ಜಾಣ್ಮೆಯಿಂದ ಮುಂದುವರಿಯಬೇಕಾಗುವುದು.
ಕನ್ಯಾ ರಾಶಿ : ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಜ್ಜನರ ಸೇವೆಯ ಅವಕಾಶ ನಿಮಗೆ ಸಿಗಲಿದೆ. ಕಛೇರಿಯಲ್ಲಿ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ನಿಮಗೆ ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಇದ್ದರೂ ಸಂಪೂರ್ಣ ಧೈರ್ಯವು ನಿಮಗೆ ಸಾಕಾಗದೇ ಹೋದೀತು. ಕೆಲವರ ಮಾತು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ನಿಮ್ಮನ್ನು ನಿಯಂತ್ರಿಸಲು ಯಾರಾದರೂ ಮೇಲಧಿಕಾರಿಯ ಕಿವಿ ಚುಚ್ಚಬಹುದು. ಹಳೆಯ ವಿಚಾರವು ಪುನಃ ಮುಖ್ಯವೇದಿಕೆ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣ ಕಲಹವೂ ಆಗಬಹುದು. ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡಲು ನೀವು ಬಯಸುವಿರಿ. ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಆದಾಯವನ್ನು ಹೆಚ್ಚಿಸಲು ಬೇರೆ ಮಾರ್ಗವನ್ನು ಅನ್ವೇಷಿಸುವಿರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ವಕೀಲ ವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿಯಬೇಕಾದೀತು.
ತುಲಾ ರಾಶಿ : ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಬಂಧುಗಳ ಬಗ್ಗೆ ನಿಮಗೆ ಕನಿಕರ ಬರುವುದು. ಅಮೂಲ್ಯವಾದ ವಸ್ತುವನ್ನು ನೀವು ಕಳೆದಕೊಳ್ಳುವ ಸಾಧ್ಯತೆ ಇದೆ. ವಾಹನದ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದೆ ನಿಮ್ಮಲ್ಲಿ ಅನಿಶ್ಚಿತತೆ ಇರಲಿದೆ. ಸಂಶೋಧನೆಯಲ್ಲಿ ತೊಡಗಿದ್ದರೆ ಸ್ವಲ್ಪ ಹಿನ್ನಡೆಯೂ ಹಣದ ಕೊರತೆಯೂ ಆಗಬಹುದು. ಯಾರಿಂದಲಾದರೂ ಅಪಮಾನವೂ ಆಗುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗದಲ್ಲಿ ನಿಮಗೆ ಅಡೆತಡೆಗಳು ಬರಲಿದ್ದು, ನಿಶ್ಚಲವಾದ ಗುರಿಯೊಂದಿಗೆ ಸಾಗಿ. ಏನಾಗುತ್ತಿದೆ ಎಂಬ ಯಾವ ಸೂಚನೆಯೂ ನಿಮಗೆ ಸಿಗದಾಗುವುದು. ವ್ಯಾಪಾರವನ್ನು ಮುಚ್ಚಬೇಕು ಎನ್ನುವ ಸ್ಥಿತಿಯವರೆಗೆ ಹೋಗಬಹುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ. ಹಿತವಚನವು ನಿಮಗೆ ಅರ್ಥಪೂರ್ಣವೆನಿಸುವುದು.
ವೃಶ್ಚಿಕ ರಾಶಿ : ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಉದ್ಯೋಗದಲ್ಲಿ ಸ್ಥಳಾಂತರವು ನಿಮಗೆ ಕಷ್ಟವಾದೀತು. ಆದರೆ ಅನಿವಾರ್ಯವೂ ಆಗಲಿದೆ. ವಿವಾಹಜೀವನಕ್ಕೆ ಕಾಲಿಟ್ಟ ನಿಮಗೆ ಕೆಲವು ಅಸ್ಪಷ್ಟವಾದ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ. ನಿಮ್ಮ ಬಳಿ ಬಂದು ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸುವ ದೊಡ್ಡತನವನ್ನು ತೋರಿಸಿ. ಮಕ್ಕಳಿಂದ ನಿಮಗೆ ಕಿರಿಕಿರಿಯಾಗಲಿದೆ. ಸಂತೋಷದಿಂದ ನೀವು ಇರುವಿರಿ. ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುವುದು. ಬಹಳ ದಿನಗಳ ಅನಂತರ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಸಿಗಲಿದೆ. ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹದು. ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ. ಅನಾರೋಗ್ಯದಿಂದ ನಿಮಗೆ ಉತ್ಸಾಹ ಕಡಿಮೆಯಾಗುವುದು. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.
ಧನು ರಾಶಿ : ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ದೈವಾನುಗ್ರಹಕ್ಕೆ ಕಠಿಣವಾದ ಕಾರ್ಯವನ್ನೂ ಮಾಡುವಿರಿ. ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಪುಣ್ಯಸ್ಥಳಗಳಿಗೆ ನೀವು ಹೋಗುವ ಅವಕಾಶ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ನಿಮಗೆ ಸಿಗುವುದು ಕಷ್ಟವಾದಾಗ ಅದನ್ನು ಬಿಟ್ಟು ಮುನ್ನಡೆಯುವುದು ಸೂಕ್ತ. ಉತ್ತಮ ಸಂಗತಿಗಳ ಕಡೆ ನಿಮ್ಮ ಗಮನವಿರಲಿ. ನಕಾರಾತ್ಮಕ ಚಿಂತನೆಯನ್ನು ನೀವು ನಿಧಾನವಾಗಿ ಕಡಿಮೆ ಮಾಡಿಕೊಳ್ಳಿ. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ನಿಮ್ಮ ಶ್ರಮದ ಲಾಭವನ್ನು ಮತ್ಯಾರಾದರೂ ಪಡೆಯಬಹುದು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು.
ಮಕರ ರಾಶಿ : ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗಕ್ಕೆ ವಿದಾಯ ಹೇಳುವ ಸಂದರ್ಭವು ಬರಬಹುದು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿ. ನಿಮಗೆ ನಿಮ್ಮ ವಂಶದ ಕಾರಣದಿಂದ ಗೌರವ ಸಿಗಬಹುದು. ಕೆಲಸಗಳಿಗೆ ಪ್ರಂಶಸೆ ಸಿಗಲಿದೆ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಕಷ್ಟವಾದೀತು. ಪ್ರಯಾಣವು ಅಗತ್ಯವಿದ್ದರಷ್ಟೇ ಮಾಡಿ. ಯಾರನ್ನೂ ಅವಲಂಬಿಸದೇ ನಿಮಗೆ ಬೇಗನೆ ಕೆಲಸ ಆಗಬಹುದು. ಕಛೇರಿಯಲ್ಲಿ ನಿಮ್ಮನ್ನು ಪ್ರಶಂಸಿಸಬಹುದು. ಅದನ್ನು ಸಮವಾಗಿ ತೆಗೆದುಕೊಳ್ಳಿ. ಅತಿಯಾದ ವೈಭವೀಕರಣದಿಂದ ನಿಮಗೆ ಕಷ್ಟವಾಗವುದು ಬೇಡ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಪರಿಚಿತರು ನಿಮ್ಮನ್ನು ಅಳೆಯಬಹುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.
ಕುಂಭ ರಾಶಿ : ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಕುಟುಂಬದವರಿಗೆ ಸಮಯ ಕೊಡುವುದು ಕಷ್ಟವಾದೀತು. ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು. ಉತ್ಸಾಹದ ಕೊರತೆ ಅತಿಯಾಗಿ ತೋರುವುದು. ಸಹನೆಯನ್ನು ನಿಯಂತ್ರಿಸಲು ಸಾಧ್ಯವಾಗದು. ಅಧಿಕಾರದ ಮಾತು ಇಂದು ನಡೆಯದೇ ಇದ್ದೀತು. ವೇತನವನ್ನು ಹೆಚ್ಚಿಸಲು ನೀವು ವಿನಂತಿ ಮಾಡಿಕೊಳ್ಳಬಹುದು. ಪಾಂಡಿತ್ಯ ಪ್ರದರ್ಶನದಿಂದ ಮೂರ್ಖರಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ನೇಹಿತರ ಭೇಟಿಯಾಗಲು ಇಂದು ಬಹಳ ಸಮಯ ಕಾಯುವಿರಿ. ಯಾರನ್ನಾದರೂ ನಂಬಲು ನಿಮ್ಮ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಅಗ್ನಿಯಿಂದ ನಿಮಗೆ ಭಯವು ಕಾಡುವುದು. ನಿಮ್ಮನ್ನು ಮಕ್ಕಳು ನೋಡುವರು.
ಮೀನ ರಾಶಿ : ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಹೂಡಿಕೆಯ ಹಣವೇ ನಿಮಗೆ ಧೈರ್ಯವನ್ನು ಕೊಡುತ್ತದೆ. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಮಿತ್ರರಿಗೋಸ್ಕರ ಸ್ವಲ್ಪವನ್ನು ತ್ಯಾಗಮಾಡುವಿರಿ. ನಿಮ್ಮ ಅಂದಾಜಿಗೆ ತಕ್ಕಂತೆ ನಡೆಯದೇ ಇರುವುದು ಬೇಸರವನ್ನು ಉಂಟುಮಾಡೀತು. ಸ್ತ್ರೀಯರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಮಾತುಗಳು ಇತರರಿಗೆ ಹೆಚ್ಚಾದಂತೆ ತೋರೀತು. ದಿನ ನಿತ್ಯದ ವಸ್ತುಗಳೇ ನಿಮಗೆ ಬಹಳ ಹೆಚ್ಚಾದಂತೆ ಅನ್ನಿಸುವುದು. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)




