Horoscope Today 21 December 2024: ಸಂಗಾತಿಯನ್ನು ದೂರ ಕಳುಹಿಸಿ ಸಂಕಟ ಪಡುವಿರಿ

ಈ ಲೇಖನವು ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

Horoscope Today 21 December 2024: ಸಂಗಾತಿಯನ್ನು ದೂರ ಕಳುಹಿಸಿ ಸಂಕಟ ಪಡುವಿರಿ
ಸಂಗಾತಿಯನ್ನು ದೂರ ಕಳುಹಿಸಿ ಸಂಕಟ ಪಡುವಿರಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 21, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಪ್ರೀತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:43 ರಿಂದ 11:07ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:55 ರಿಂದ 03:19 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 06:54 ರಿಂದ 08:18 ರವರೆಗೆ.

ಮೇಷ ರಾಶಿ: ಇಂದು ನಿಮ್ಮ ಒರಟು ಮಾತಿನಿಂದ ಸಂಗಾತಿಗೆ ಬೇಸರವಾಗುವುದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ಆಭರಣ ಖರೀದಿಗೆ ಉತ್ತಮ ದಿನವಿದಾಗಲಿದೆ. ವೃದ್ಧರ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರ ಎದುರಾಗಬಹುದು. ನಿಮ್ಮ ವ್ಯಾಪಾರದ ತಂತ್ರವು ಫಲಿಸಬಹುದು. ವ್ಯಾಪಾರದಲ್ಲಿ ಲಾಭವನ್ನು ತಂದೀತು. ಸನ್ನಿವೇಶಕ್ಕೆ ತಕ್ಕುದಾದ ಮಾತನ್ನು ಆಡಿ. ಎಲ್ಲ ಕಾರ್ಯಕ್ಕೂ ಲಾಭವನ್ನು ನಿರೀಕ್ಷಿಸುವುದು ಬೇಡ. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ವೃಷಭ ರಾಶಿ; ನ್ಯಾಯ ನಿರ್ಣಯವನ್ನು ಕೊಡುವ ಸಂದರ್ಭ ಬರಬಹುದು. ಅರಿವಿಗೆ ಬಾರದೇ ಕೆಲವು ತಪ್ಪುಗಳು ನಡೆಯುವುದು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಸ್ನೇಹಿತರು ನಿಮಗೆ ಸುಳ್ಳು ಹೇಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಬರಬೇಕಾದ ಹಣವು ಆಕಸ್ಮಿಕವಾಗಿ ಬಂದಿದ್ದು ಖುಷಿ ಕೊಡುವುದು. ಇಂದು ನಿಮ್ಮ ಉತ್ಸಾಹವನ್ನು ಯಾರಿಂದಲೂ ಸಾಧ್ಯವಾಗದು. ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಇಂದಿನ ನಿಮ್ಮ ಪ್ರಯಾಣದ ವಿಚಾರದಲ್ಲಿ ಬಹಳ ಗೊಂದಲ ಉಂಟಾಗಬಹುದು. ನಿಮ್ಮ ತಪ್ಪಿಗೂ ಇನ್ನೊಬ್ಬರನ್ನು ಕೈ ಮಾಡಿ ತೋರಿಸುವುದು ಬೇಡ. ಮಾತಿನಿಂದಲೇ ಸಂಕಟವನ್ನು ತಂದುಕೊಳ್ಳುವಿರಿ. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ.

ಮಿಥುನ ರಾಶಿ: ಬೆಟ್ಟದಷ್ಟು ಕಾರ್ಯಗಳಿದ್ದು ಕಲ್ಲಿನಂತೆ ಬಿದ್ದಿದ್ದರೆ ಯಾರೂ ಏನೂ ಮಾಡಲಾಗದು. ಇರುವ ಚೈತನ್ಯವನ್ನು ಬೆಳೆಸಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳಬಡೆಕು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು. ಪ್ರೀತಿಯ ವಿಷಯದಲ್ಲಿ ಇಂದು ದುಃಖವುಂಟಾಗಬಹುದು. ಮನಸ್ತಾಪವನ್ನು ದ್ವೇಷವಾಗಿ ಪರಿವರ್ತಿಸಿಕೊಳ್ಳುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ನೀವು ತಳ್ಳಿಹಾಕುವಿರಿ. ವ್ಯವಹಾರದಲ್ಲಿ ಇರಬೇಕಾದ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕಾಗುವುದು. ಪ್ರೀತಿಯ ಮಾತುಗಳಿಂದ ನಿಮ್ಮತ್ತ ಜನರು ಆಕರ್ಷಿತರಾಗುವುದು. ವಿದ್ಯಾರ್ಥಿಗಳಿಗೆ ಅನ್ಯರ ಸಹವಾಸ ಸಿಗಬಹುದು. ಬಿಡುಗಡೆಗಾಗಿ ದಾರಿಯನ್ನು ನೀವೇ ಹುಡುಕಿಕೊಳ್ಳುವಿರಿ.

ಕರ್ಕಾಟಕ ರಾಶಿ: ಇಂದು ಮನೆಯಲ್ಲಿ ಕೊರತೆಗಳಿದ್ದರೂ ಅದನ್ನು ತೋರಿಸದಂತೆ ನಡೆದುಕೊಳ್ಳುವಿರಿ. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಸುಳ್ಳನ್ನಾಡಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದು ಕಾರ್ಯಕ್ಕೆ ವಿಘ್ನಗಳು ಬರುತ್ತಿದ್ದು ದೈವಜ್ಞರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ವಿದ್ಯೆಯ ಕಾರಣಕ್ಕೆ ಇಂದು ನಿಮಗೆ ಗೌರವವು ಸಿಗಲಿದೆ. ಕಾರ್ಯದ ಒತ್ತಡದಿಂದ‌ ಶಿರೋವೇದನೆ ಕಾಣಿಸಿಕೊಳ್ಳುವುದು. ಇಂದು ನೀವು ಮಾಡಿದ ಕೆಲಸವು ನಿಷ್ಪ್ರಯೋಜಕವಾಗಲಿದೆ. ಬೇಸರವನ್ನು ಕಳೆಯಲು ಎಲ್ಲಿಗಾದರೂ ಹೋಗುವಿರಿ. ಸಹಾಯವನ್ನು ಕೇಳಿ ಬಂದವರಿಗೆ ಇಲ್ಲ ಎನ್ನುವುದು ಬೇಡ. ನಿಮಗಾಗಿ ಬೇರೆಯವರು ತಮ್ಮ ಯೋಜನೆಯನ್ನು ಬದಲಾಯಿಸುವರು.

ಸಿಂಹ ರಾಶಿ: ವ್ಯಾಪಾರ ವಿಸ್ತರಣೆಗೆ ಯೋಚಜನೆಯು ತೀರ್ಮಾನವಾಗುವುದು. ಉತ್ತಮ ಹೂಡಿಕೆ ಅವಕಾಶಗಳು ದೊರೆಯಲಿವೆ. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ಪ್ರಯಾಣದಿಂದ ಹಿಂಸೆ ಆಗಬಹುದು.‌ ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ‌ ನಿಮಗೆ ಅಸೂಯೆ ಉಂಟಾಗಬಹುದು. ನಿಮ್ಮ ಇಚ್ಛಾಶಕ್ತಿಯು ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿ. ನಿಮ್ಮ ಯೋಜನೆ ಉತ್ತಮವಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು. ನಿಮ್ಮ‌ ಕಾರ್ಯಕ್ಕೆ ಇನ್ಯಾರೋ ಯಶಸ್ಸು ಪಡೆವರು. ಸಂಗಾತಿಯ ಬಗ್ಗೆ ಇದ್ದ ಪೂರ್ವಾಗ್ರಹವು ಬದಲಾಗಿ ಅವರ ಜೊತೆ ಅನ್ಯೋನ್ಯವಾಗಿ ಇರುವಿರಿ. ಒಂದೇ ಕಾರ್ಯವನ್ನು ಎರಡು ರೀತಿಯ ಲಾಭವಾಗುವಂತೆ ನೋಡಿಕೊಳ್ಳುವಿರಿ.

ಕನ್ಯಾ ರಾಶಿ: ಇಂದು ಉದ್ಯೋಗ ಬದಲಾವಣೆಗೆ ಒತ್ತಡ ಬರಲಿದೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಇಲ್ಲವಾದರೆ ನಿಮಗೇ ತೊಂದರೆ. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು.‌ ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ‌ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ. ಅನ್ಯರನ್ನು ಪೀಡಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕಾನೂನಿನ ಕೆಲಸವನ್ನು ಯಾರ ಸಲಹೆಯನ್ನು ಪಡೆಯದೇ ಮಾಡುವಿರಿ. ಕ್ರೀಡೆಯಲ್ಲಿ ನಿಮಗೆ ಸೋಲಾಗುವುದು. ಯಾವುದೇ ಸ್ಪರ್ಧೆಯಲ್ಲಿ ಭಾಗಹಿಸುವುದು ಬೇಡ.‌ ಭವಿಷ್ಯದ ಭದ್ರೆತೆಗೆ ಬೇಕಾದ ಬುನಾದಿಯನ್ನು ಹಾಕಿಕೊಳ್ಳುವಿರಿ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.

ತುಲಾ ರಾಶಿ: ಇಂದು ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು. ಆದಾಯ ಹೆಚ್ಚಲಿದೆ. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು.‌ ಮನಶ್ಚಾಂಚಲ್ಯದಿಂದ ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲಾಗದು. ಪ್ರೀತಿಯು ನಿಮ್ಮ ಯಶಸ್ಸಿನ ವೇಗಕ್ಕೆ ಕಡಿವಾಣ ಹಾಕಬಹುದು. ನಿಮ್ಮ ಉದ್ದೇಶವೇ ಬದಲಾದರೂ ಅಚ್ಚರಿ ಪಡಬೇಕಾಗಿಲ್ಲ. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡಿಯಾರು. ಎಲ್ಲ ಕಡೆಗಳಿಂದಲೂ ಮಾನಸಿಕ ಸಂತೃಪ್ತಿ ಇರದೇ ಇರುವುದು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಗೊತ್ತಾಗದು. ಉದ್ಯೋಗವನ್ನು ಬಿಡುವ ಆಲೋಚನೆ ಇದ್ದು, ಮನೆಯ ಸ್ಥಿತಿಯನ್ನು ಕಂಡು ಈ ತೀರ್ಮಾನಕ್ಕೆ ಬರುವುದು ಉತ್ತಮ.

ವೃಶ್ಚಿಕ ರಾಶಿ: ಕಛೇರಿಯ ಪರಿಸ್ಥಿತಿಯ ಏರಿಳಿತಗಳಿಂದ ಅಸಮಾಧಾನವಾಗಲಿದೆ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು. ನಿಮ್ಮವರನ್ನು ಹೊಗಳಿ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇರಿಸಿದಷ್ಟು ನೀವು ಕಾರ್ಯದಲ್ಲಿ ಸಫಲರಾಗುವಿರಿ. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ.

ಧನು ರಾಶಿ: ಇಂದು ಸ್ನೇಹಿತರ ಸಹಾಯದಿಂದ ವ್ಯಾಪಾರ ಸುಧಾರಿಸಿ ಆರ್ಥಿಕವಾಗಿ ನೀವು ಉತ್ತಮವಾಗಬಲ್ಲಿರಿ. ಅಲ್ಪ ಲಾಭಕ್ಕಾಗಿ ದೇಹವನ್ನು ದಂಡಿಸಬೇಕಾದೀತು. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ‌ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಡತೆಯಿಂದ‌ ಕುಲಕ್ಕೆ ಅವಮಾನವಾಗಬಹುದು. ನಿದ್ರೆಯನ್ನು ಹೆಚ್ಚು ಮಾಡುವಿರಿ. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ. ಚಂಚಲ‌ವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಡವಾಗದು. ಆದಾಯ ಮೂಲದ ರಹಸ್ಯವನ್ನು ಹೇಳಿಕೊಳ್ಳುವುದು ಬೇಡ. ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡುವುದು ಉತ್ತಮ. ಹಳೆಯ ಗೆಳತಿಯು ನಿಮ್ಮನ್ನು ಇಷ್ಟಪಡಬಹುದು. ಅತಿಯಾದರೆ ಅಮೃತವೂ ವಿಷ ಎನ್ನುವ ಮಾಹಿತಿ ಗೊತ್ತಿರಲಿ. ಎಲ್ಲದಕ್ಕೂ ಸಿಟ್ಟು ಮಾತ್ರವೇ ಪರಿಹಾರವಲ್ಲ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ವಿದೇಶದ ಜೊತೆಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಏನೂ ಇಲ್ಲದವಗೆ ಹುಲ್ಲುಕಡ್ಡಿಯೂ ದೊಡ್ಡ ಆಸರೆ ಆದೀತು.

ಮಕರ ರಾಶಿ: ಇಂದು ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೂ ಅತಿಯಾದ ಉತ್ಸಾಹ ಬೇಡ. ನಿಮಗೆ ಉದ್ಯೋಗದಿಂದ ನಿವೃತ್ತಿಯು ಬೇಕೆನಿಸಬಹುದು. ಮುಖಂಡರಿಗೆ ಪ್ರಶಂಸೆ ಗೌರವಗಳು ಸಿಗಲಿವೆ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ‌ ಇರಲಿ. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಬಹುದು. ಅಲ್ಪ ಮೊತ್ತವನ್ನು ಸಾಮಾಜಿಕ‌ ಕಾರ್ಯಕ್ಕೆ ಕೊಡುವಿರಿ. ಒತ್ತಡವು ಬಂದರೆ ಸ್ವಲ್ಪ ಕಾಲ ಎಲ್ಲವನ್ನೂ ಮರೆತು ಓಡಾಡಿ ಬನ್ನಿ. ರಾಜಕೀಯವಾಗಿ ಮೇಲೆ‌ ಬರಲು ನಿಮ್ಮ ತಂತ್ರಗಾರಿಕೆ ಇರುವುದು. ಸ್ನೇಹಿತರ ಜೊತೆಗಿನ ಓಡಾಟದಿಂದ‌ ನಿಮ್ಮವರಿಗೆ ಅನುಮಾನವು ಬರುವುದು. ನೀವಾಡುವ ಮಾತು ಜವಾಬ್ದಾರಿಯ ಸ್ಥಾನದ್ದು ಎನ್ನುವುದನ್ನು ನೆನಪಿನಲ್ಲಿ ಇಡಿ. ಉದ್ಯೋಗದ ಪ್ರಯತ್ನವು ಫಲಿಸುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ ರಾಶಿ: ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ಅಪರಿಚಿತರನ್ನು ನಂಬಬೇಕಾಗಬಹುದು. ಇಂದು ನಿಮಗೆ ಸಣ್ಣ ತಡೆಯೂ ದೊಡ್ಡದಾಗಿ ಕಾಣಿಸುವುದು. ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ವ್ಯವಹಾರದಲ್ಲಿ ಗೊಂದಲವಿಟ್ಟುಕೊಳ್ಳುವುದು ಬೇಡ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ಪರೀಕ್ಷೆಯ ಸಮಯವಿದ್ದರೂ ವಿದ್ಯಾರ್ಥಿಗಳು ಅನ್ಯ ಚಟುವಟಿಕೆಯಲ್ಲಿ ನಿಶ್ಚಿಂತೆಯಿಂದ ಭಾಗವಹಿಸುವರು. ಯೋಗ್ಯತೆ ಇದ್ದರೂ ಯೋಗವೂ ಜೊತೆಗೆ ಬಂದಾಗ ಸಿಗಬೇಕಾದುದು ಸಿಗಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.

ಮೀನ ರಾಶಿ: ಇಂದು ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಪಡೆಯುತ್ತೀರಿ. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನಿಸುವುದು ಕಷ್ಟವೇ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ಆಪ್ತರಿಗೆ ಇಷ್ಟವಾದ ಉಡುಗೊರೆಯನ್ನು ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡವನ್ನು ಕಡಿಮೆ ಆಗುವುದು. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಅಪರಿಚಿತರು ಇರುವ ಕಡೆ ನೀವು‌ ಮೌನವಾಗಿ ಇರುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆಯು ಇರಲಿದ್ದು ಅದನ್ನು ಲೆಕ್ಕಿಸದೇ ಕಾರ್ಯದಲ್ಲಿ ಮಗ್ನರಾಗುವಿರಿ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು.

ಲೋಹಿತ ಹೆಬ್ಬಾರ್ – 8762924271 (what’s app only)