Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ

ಈ ಲೇಖನವು ಜನ್ಮ ಸಂಖ್ಯೆ 1 ರಿಂದ 9 ರವರೆಗಿನ ಜನರಿಗೆ ದಿನನಿತ್ಯದ ಜ್ಯೋತಿಷ್ಯ ಭವಿಷ್ಯವನ್ನು ಒದಗಿಸುತ್ತದೆ. ಪ್ರತಿ ಸಂಖ್ಯೆಗೆ ಸಂಬಂಧಿಸಿದ ಅನುಕೂಲಕರ ಮತ್ತು ಪ್ರತಿಕೂಲಕರ ಅಂಶಗಳನ್ನು ವಿವರಿಸಲಾಗಿದೆ. ಆರೋಗ್ಯ, ಹಣಕಾಸು, ಕುಟುಂಬ ಮತ್ತು ವೃತ್ತಿಪರ ಜೀವನದಲ್ಲಿ ಎದುರಿಸಬಹುದಾದ ಸವಾಲುಗಳು ಮತ್ತು ಅವಕಾಶಗಳ ಕುರಿತು ಮಾಹಿತಿ ನೀಡಲಾಗಿದೆ. ಜಾಗರೂಕತೆ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ವಿವೇಕ ಬಿರಾದಾರ

Updated on:Dec 20, 2024 | 6:48 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ಹಿಂದಿನ ನಿಮ್ಮ ತಪ್ಪು ತೀರ್ಮಾನಗಳ ಬಗ್ಗೆ ಪಶ್ಚಾತಾಪ ಪಡುವಂತೆ ಆಗಲಿದೆ. ತಂದೆ ಅಥವಾ ತಂದೆ ಸಮಾನರಾದವರ ಅನಾರೋಗ್ಯ ಸಮಸ್ಯೆ ಚಿಂತೆಗೆ ಕಾರಣ ಆಗಲಿದೆ. ನೀವು ಮಕ್ಕಳ ಶಿಕ್ಷಣಕ್ಕೋ ಭವಿಷ್ಯಕ್ಕೋ ಅಥವಾ ಮದುವೆಗಾಗಿಯೋ ಉಳಿತಾಯ ಮಾಡಿಟ್ಟುಕೊಂಡಿದ್ದ ಹಣವನ್ನು ತೆಗೆಯಲೇಬೇಕಾದ ಸಂದರ್ಭ ಎದುರಾಗಬಹುದು. ನಿಮ್ಮಿಂದ ಹಣ ಪಡೆದು, ಇದೇ ಸಮಯಕ್ಕೆ ಕೊಡುತ್ತೇನೆ ಎಂದು ಮಾತು ನೀಡಿದ್ದ ವ್ಯಕ್ತಿಗಳು ಕೊನೆ ಕ್ಷಣದಲ್ಲಿ ತಮ್ಮಿಂದ ಆಗುವುದಿಲ್ಲ ಎಂದು ಹೇಳುವಂಥ ಸಾಧ್ಯತೆಗಳಿವೆ. ಆದ್ದರಿಂದ ಇತರರು ಹಣ ನೀಡುತ್ತಾರೆ ಎಂಬ ಭರವಸೆಯನ್ನು ಇಟ್ಟುಕೊಂಡು ವ್ಯವಹಾರಗಳನ್ನು ಮಾಡಲಿಕ್ಕೆ ಹೋಗದಿರುವುದು ಉತ್ತಮ. ಇನ್ನು ಭಾರವಾದ ವಸ್ತುಗಳನ್ನು ಎತ್ತುವಾಗ ಜಾಗ್ರತೆಯಿಂದ ಇರಬೇಕು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲೇಬೇಕಾಗುವಂಥ ಸ್ಥಿತಿ ನಿರ್ಮಾಣ ಆಗಲಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಇದ್ದಲ್ಲಿ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಎಲ್ಲ ಸರಾಗವಾಗಿ ಆಗುತ್ತದೆ ಎಂಬುದು ನಿಮ್ಮ ಎಣಿಕೆ ಆಗಿರುತ್ತದೆ. ನೀವು ಅಂದುಕೊಂಡಿರುತ್ತೀರೋ ಇಲ್ಲವೋ ಕೆಲವು ವಿಚಾರಗಳಲ್ಲಿ ದಯಾ- ದಾಕ್ಷಿಣ್ಯದಿಂದ ನಡೆದುಕೊಳ್ಳಲೇಬೇಕಾದ ಸನ್ನಿವೇಶ ಎದುರಾಗಲಿದೆ. ಇಲ್ಲ ಅಥವಾ ಹೌದು ಹೀಗೆ ಯಾವುದನ್ನೂ ಖಡಾಖಂಡಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಂಥ ಸ್ಥಿತಿಯಲ್ಲಿ ನೀವಿರುತ್ತೀರಿ. ನಿಮ್ಮಲ್ಲಿ ಕೆಲವರು ದೂರ ಪ್ರಯಾಣಕ್ಕೆ ಹೊರಡಬೇಕಾದ ಅನನಿವಾರ್ಯ ಅಥವಾ ತುರ್ತು ಎದುರಾಗಲಿದೆ. ಇನ್ನು ಇದಕ್ಕೆ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗಲಿದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದೀರಿ ಅಂತಾದಲ್ಲಿ ಅದನ್ನು ಜೋಪಾನವಾಗಿ ನೋಡಿಕೊಳ್ಳಿ. ಅದರ ಪಿನ್ ಅನ್ನು ಯಾರ ಜತೆಗೆ ಹಂಚಿಕೊಳ್ಳಬೇಡಿ ಅಥವಾ ಅದನ್ನು ಟ್ಯಾಪ್ ಮಾಡಿ ಬಳಸಬಹುದು ಎಂದಾದಲ್ಲಿ ತುಂಬ ಜಾಗ್ರತೆ ವಹಿಸಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುತ್ತೀರಿ ಅಂತಾದಲ್ಲಿ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹೃದಯದಿಂದ ಆಲೋಚಿಸುವ ಬದಲು ಸ್ವಲ್ಪ ಮಟ್ಟಿಗೆ ಮೆದುಳಿನಿಂದಲೂ ಆಲೋಚಿಸಿ. ಈ ದಿನ ನೇರವಂತಿಕೆ ಕೆಲಸಕ್ಕೆ ಬರುವುದಿಲ್ಲ. ಎಲ್ಲ ವಿಚಾರವನ್ನೂ ನೇರಾನೇರ ಹೇಳುತ್ತೀನಿ ಎಂದೇನಾದರೂ ಅಂದುಕೊಂಡಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗುತ್ತದೆ. ಭಾವನಾತ್ಮಕ ವಿಚಾರಗಳು ಅಂತಾದಲ್ಲಿ ಅದನ್ನು ಸರಿಯಾಗಿ ನಿರ್ವಹಿಸಿ. ಸ್ವಂತ ವ್ಯವಹಾರ, ಉದ್ಯಮ ನಡೆಸುತ್ತಿರುವವರಿಗೆ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇನ್ನು ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಹೇಗೆ ಮುಗಿಸಬೇಕು ಎಂಬ ಬಗ್ಗೆ ಯೋಜನೆಯನ್ನು ಮಾಡಿಕೊಳ್ಳಿ. ಇನ್ನೂ ಸಮಯ ಇದೆ, ಅಥವಾ ನಿಮ್ಮ ಸಾಮರ್ಥ್ಯಕ್ಕೆ ಬಹಳ ಬೇಗ ಮುಗಿಸಬಲ್ಲೆ ಎಂದೇನಾದರೂ ಅತಿಯಾದ ವಿಶ್ವಾಸದಿಂದ ಏನಾದರೂ ಆಲೋಚನೆ ಮಾಡಿದಲ್ಲಿ ಅವಮಾನಕ್ಕೆ ಗುರಿ ಆಗಬೇಕಾದೀತು. ಸೋದರ ಸಂಬಂಧಿಗಳ ಜತೆಗೆ ಸಣ್ಣ- ಪುಟ್ಟ ವಿಚಾರಕ್ಕಾದರೂ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಉದ್ಭವಿಸಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ವಿಶಾಲವಾದ ಆಲೋಚನೆ ಎಲ್ಲ ಸಂದರ್ಭಕ್ಕೂ ಸೂಕ್ತ ಎನಿಸುವುದಿಲ್ಲ. ನಿಮಗೆ ಗೊತ್ತಿರುವ ವಿಚಾರ, ವಿದ್ಯೆಗೆ ಬೇಡಿಕೆ ಹೆಚ್ಚಾಗಲಿದೆ. ನೀವು ಕೇಳಿದಂಥ ಮೊತ್ತವನ್ನು ಕೊಡ್ತೀವಿ, ಕೆಲಸ ಮಾಡಿಕೊಡಿ ಅಥವಾ ಮಾಹಿತಿ ಕೊಡಿ ಎಂದು ಕೆಲವರು ನಿಮ್ಮನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸಬಹುದು. ನೀವು ಇನ್ನು ಬರಲಾರದು ಎಂದುಕೊಂಡಿದ್ದ ಮೊತ್ತವನ್ನು ವಸೂಲಿ ಮಾಡುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ. ನಿಮ್ಮಿಂದ ಯಾವುದನ್ನು ದಕ್ಕಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಯಾರಾದರೂ ಸವಾಲು ಹಾಕಿದಲ್ಲಿ ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಮನೆ ಅಥವಾ ಜಮೀನು ಮಾರಾಟಕ್ಕೆ ಇಟ್ಟಿದ್ದಲ್ಲಿ ನಿರೀಕ್ಷಿತ ಬೆಲೆಗೆ ಕೇಳಿಕೊಂಡು ಖರೀದಿದಾರರು ಬರಲಿದ್ದಾರೆ. ಇತ್ತೀಚೆಗೆ ನಿದ್ದೆ ಬಾರದೆ ಇರುವುದೇ ಸಮಸ್ಯೆ ಆಗಿ ಮಾರ್ಪಟ್ಟಿದ್ದಲ್ಲಿ ಇದಕ್ಕೆ ಕಾರಣ ಮತ್ತು ಪರಿಹಾರ ತಿಳಿದುಬರಲಿದೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ನಿಮ್ಮ ನೆರವಿಗೆ ಬರುತ್ತಾರೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಔಟ್ ಆಫ್ ದ ಬಾಕ್ಸ್ ಆಲೋಚನೆ ಅನ್ನುತ್ತಾರಲ್ಲ, ಇತರರಿಗೆ ಸುಲಭಕ್ಕೆ ಹೊಳೆಯದ ಕೆಲವು ಸಂಗತಿಗಳು ನಿಮ್ಮ ಆಲೋಚನೆಗೆ ಬರಲಿದೆ. ನಿಮ್ಮಲ್ಲಿ ಕೆಲವರು ಒಡವೆ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯ ದುರಸ್ತಿ, ಸುಣ್ಣ- ಬಣ್ಣ, ಸಂಪ್ ಸ್ವಚ್ಛತೆ ಇತ್ಯಾದಿಗಳನ್ನು ಮಾಡುವುದಕ್ಕೆ ಈ ದಿನ ಮಾತುಕತೆಯನ್ನು ನಡೆಸಲಿದ್ದೀರಿ. ಆಸ್ತಿ ಮಾರಾಟ ಅಥವಾ ಖರೀದಿ ವಿಚಾರವಾಗಿ ಇಷ್ಟು ಸಮಯ ಸಿಕ್ಕುಸಿಕ್ಕಾಗಿದ್ದ ಸಂಗತಿಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಈ ದಿನ ಅವಕಾಶಗಳು ದೊರೆಯಲಿವೆ. ಹಣಕಾಸು ಸಂಗತಿಗಳು ಕುಟುಂಬದಲ್ಲಿ ಆದ್ಯತೆ ಪಡೆದುಕೊಳ್ಳಲಿವೆ. ಒಂದು ವೇಳೆ ನೀವೇನಾದರೂ ಬಾಡಿಗೆ ಮನೆಯನ್ನು ಇದ್ದೀರಿ ಅಂತಾದಲ್ಲಿ ಈಗ ಇರುವ ಮನೆಯನ್ನು ಬದಲಾವಣೆ ಮಾಡಿ, ದೊಡ್ಡದಕ್ಕೆ ತೆರಳುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮ ಸ್ವಂತ ವಿಚಾರದಲ್ಲಿ ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂಬ ವ್ಯಕ್ತಿಯನ್ನು ದೂರ ಇಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮೊದಲು ನಿಮ್ಮ ಪ್ರಾಶಸ್ತ್ಯದ ಕೆಲಸಗಳೇನು ಎಂಬ ಪರಿವೆ ಇರಲಿ. ಆದರೆ ಸ್ನೇಹಿತರು ಅಥವಾ ಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗುತ್ತದೆ. ಹಳೇ ವಾಹನವನ್ನು ಅಥವಾ ಸಲಕರಣೆಗಳನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅವುಗಳಿಗೆ ಉತ್ತಮ ಬೆಲೆ ಸಿಗಲಿದೆ. ದೂರದ ಊರುಗಳಿಂದ ಶುಭ ಸುದ್ದಿ ಕೇಳಿಬರಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರುವಂಥ ಯೋಗ ಇದೆ. ನಿಧಾನವಾಗಿ ಸಾಗುತ್ತಿದ್ದ ಕೆಲವು ವ್ಯವಹಾರ ಅಥವಾ ಸಂಗತಿಗಳು ವೇಗವನ್ನು ಪಡೆದುಕೊಳ್ಳಲಿವೆ. ಒಂದು ವೇಳೆ ಯಾವುದಾದರೂ ಮುಖ್ಯ ಕಾಗದ- ಪತ್ರ, ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದನ್ನು ದೊರಕಿಸಬಲ್ಲಂಥ ವ್ಯಕ್ತಿಯ ಪರಿಚಯ ಆಗಲಿದೆ. ಮನೆ ದೇವರ ಆರಾಧನೆಗೆ ಅಥವಾ ಕಾರ್ಯಕ್ರಮಗಳಿಗೆ ಹಣಕಾಸು ಅಥವಾ ಇನ್ಯಾವ ಬಗೆಯಲ್ಲಾದರೂ ನೆರವು ಕೇಳಿಕೊಂಡು ಈ ದಿನ ಯಾರಾದರೂ ಬಂದಲ್ಲಿ ನಿಮ್ಮಿಂದ ಸಾಧ್ಯವಾದಂಥದ್ದನ್ನು ಮಾಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಿಂದ ತಪ್ಪುಗಳಾಗಿದೆ ಅಂತಾದಲ್ಲಿ ಇತರರು ತಮ್ಮ ಮೂಗಿನ ನೇರಕ್ಕೆ ಏನೋ ಹೇಳುತ್ತಿದ್ದಾರೆ ಅಂತಾದಲ್ಲಿ ಎಲ್ಲವನ್ನೂ ಕೇಳಿಸಿಕೊಳ್ಳಲೇಬೇಕು ಎಂದೇನಿಲ್ಲ. ಆದರೆ ತಮಗೆ ಅನಿಸಿದ್ದನ್ನು ನೀವು ಮಾಡಲೇಬೇಕು ಎಂದು ಒತ್ತಡ ಹಾಕಿದಲ್ಲಿ ಮಾತ್ರ ಸೂಕ್ತ ಉತ್ತರವನ್ನು ನೀಡಲೇಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಕಣ್ಣೆದುರು ಆಗುತ್ತಿರುವ ಹಣದ ಪೋಲನ್ನು ನಿಮ್ಮಿಂದ ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಮಕ್ಕಳ ವರ್ತನೆ, ಶಿಕ್ಷಣದ ವಿಚಾರದಲ್ಲಿನ ಹಿನ್ನಡೆಯು ನಿಮಗೆ ಆತಂಕವನ್ನು ಉಂಟು ಮಾಡಬಹುದು. ಕುಟುಂಬದಲ್ಲಿ ಆಗುವ ಯಾವುದೇ ಚರ್ಚೆಯ ವೇಳೆಯಲ್ಲಿ ನಿಮಗೆ ಮಾಹಿತಿ ಇಲ್ಲದ ವಿಚಾರದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವುದಕ್ಕೆ ಹೋಗಬೇಡಿ. ಪ್ರಶಾಂತವಾದ ಸ್ಥಳದಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದಕ್ಕೆ ನಿಮಗೆ ಮನಸ್ಸಾದಲ್ಲಿ ಅಂಥಲ್ಲಿಗೆ ತೆರಳಿ, ಸ್ವಲ್ಪ ಹೊತ್ತು ಇದ್ದು ಬನ್ನಿ. ಒತ್ತಡದ ಕಾರಣಕ್ಕೆ ತಲೆ ನೋವು, ಕಣ್ಣು ಉರಿ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸುಲಭಕ್ಕೆ ಬಗೆಹರಿಯದು ಎಂದುಕೊಂಡಿದ್ದ ಕೆಲವು ವ್ಯಾಜ್ಯ- ಪ್ರಕರಣಗಳು ಸಮಾಧಾನವಾಗಿ ಮುಗಿಯುವ ಸೂಚನೆಗಳು ದೊರೆಯಲಿವೆ. ನಿಮ್ಮ ತೀರ್ಮಾನ ಅಥವಾ ನಿರ್ಧಾರದ ಫಲಿತವಾಗಿ ಯೋಜನೆಗಳಂತೆಯೇ ಈ ದಿನ ಹಲವು ಬೆಳವಣಿಗೆಗಳು ಆಗಲಿವೆ. ಇತರರು ತಮ್ಮ ಪರವಾಗಿ ನಿಂತು ಕೆಲವು ರಾಜೀ-ಸಂಧಾನಗಳನ್ನು ಮಾಡಿಕೊಡುವಂತೆ ಕೇಳಿಕೊಳ್ಳಬಹುದು. ವಿದ್ಯಾರ್ಥಿ ಆಗಿದ್ದು, ವಿದೇಶಗಳಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಈ ಹಿಂದೆ ಪ್ರಯತ್ನ ಮಾಡಿ, ಅದರಲ್ಲಿ ಸಫಲರಾಗಿಲ್ಲ ಎಂದಾದಲ್ಲಿ ಈ ದಿನ ತುಂಬ ಮಹತ್ತರವಾದ ಬೆಳವಣಿಗೆಯೊಂದು ಆಗಲಿದೆ. ಹಣಕಾಸಿನ ವಿಚಾರವೇ ಇರಬಹುದು ಅಥವಾ ವೀಸಾ ಮೊದಲಾಗಿದ್ದೇ ಆಗಬಹುದು, ಯಾವ ಅಡೆತಡೆ ಇರುತ್ತದೋ ಅದರ ನಿವಾರಣೆಗೆ ಮಾರ್ಗ ಗೋಚರ ಆಗಲಿದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಪ್ರಮುಖವಾದ ಸಂಸ್ಥೆ ಅಥವಾ ವ್ಯಕ್ತಿಯಿಂದ ಆಫರ್ ಬರುವ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ರಚ್ಚೆ- ವಿಪರೀತ ಹಠ ಹಿಡಿದು, ರಂಪ- ರಾದ್ಧಾಂತ ಮಾಡುವ ರೀತಿಯಲ್ಲಿ ಮಕ್ಕಳ ಗುಣದಲ್ಲಿ ಬದಲಾವಣೆ ಆಗುವುದು ನಿಮ್ಮನ್ನು ಆತಂಕಕ್ಕೆ ಗುರಿ ಮಾಡಬಹುದು. ಬಂಧುಗಳಿಂದ ಹಣವನ್ನು ಸಾಲ ತಂದಿದ್ದಲ್ಲಿ ಅದನ್ನು ಕೂಡಲೇ ಹಿಂತಿರುಗಿಸುವಂತೆ ಕೇಳಲಿದ್ದಾರೆ. ತಂದೆ- ತಾಯಿಗೆ ನಿಮ್ಮ ನೆರವಿನ ಅಗತ್ಯ ಈ ದಿನ ತುರ್ತಾಗಿ ಬೇಕಾಗುವಂಥ ಸನ್ನಿವೇಶ ಕಂಡುಬರಲಿದ್ದು, ನಿಮ್ಮನ್ನು ಸಂಪರ್ಕಿಸುವಂಥ ಯಾವುದೇ ಸಾಧ್ಯತೆಗಳನ್ನು ಮುಕ್ತವಾಗಿ ಇಟ್ಟುಕೊಳ್ಳಿ. ಯಾವ ವಸ್ತುವನ್ನಾದರೂ ನಿಮಗಾಗಿಯೇ ಅಂತ ತಂದುಕೊಂಡಿದ್ದಲ್ಲಿ, ಅದನ್ನು ಹೆಚ್ಚು ಬಳಸಿಲ್ಲ ಅಥವಾ ಇವತ್ತೇ ಮೊದಲ ಬಾರಿಗೆ ಬಳಸುತ್ತಿದ್ದೀರಿ ಅಂತಾದಲ್ಲಿ ಅದರಲ್ಲಿ ಏನಾರೂ ಒಂದು ಹಾಳಾಗಿರುವ ಅಥವಾ ಬಳಸುವುದಕ್ಕೆ ಸಾಧ್ಯವಿಲ್ಲದಂಥದ್ದು ಏನಾದರೂ ಆಗಿರಲಿದೆ. ದಿನದ ದ್ವಿತೀಯಾರ್ಧದಲ್ಲಿ ನಿಮ್ಮ ಮನಸ್ಸಿಗೆ ಸಮಾಧಾನ, ಸಂತೋಷ ನೀಡುವಂಥ ಬೆಳವಣಿಗೆಗಳು ಆಗಲಿವೆ. ಸ್ನೇಹಿತರು, ಕುಟುಂಬ ಸದಸ್ಯರು, ಸಂಬಂಧಿಗಳ ಜತೆಗೆ ರೆಸ್ಟೋರೆಂಟ್ ಅಥವಾ ಹೋಟೆಲ್ ನಲ್ಲಿ ಪುಷ್ಕಳವಾದ- ರುಚಿಕಟ್ಟಾದ ಆಹಾರ ಸವಿಯಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

Published On - 6:47 am, Fri, 20 December 24

ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್