ಉದ್ಯೋಗದಲ್ಲಿ ಪ್ರಗತಿಯ ಸುಳಿವುಗಳು ಸಿಗುತ್ತವೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ, ಬುಧವಾರ ಸಾಧಕ ಬಾಧಕಗಳ ಬಗ್ಗೆ ಚಿಂತನೆ, ನಾಮಾಂಕಿತರ ಭೇಟಿ, ಶತ್ರುಗಳಿಗೆ ಕುಮ್ಮಕ್ಕು ಇದೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಬುಧವಾರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ – 06 : 06 am, ಸೂರ್ಯಾಸ್ತ – 06 : 51 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:29 – 14:05, ಯಮಘಂಡ ಕಾಲ 07:42 – 09:18, ಗುಳಿಕ ಕಾಲ 10:53 – 12:29
ತುಲಾ ರಾಶಿ: ಕೆಲಸದ ಒತ್ತಡದಿಂದ ಸುಖವಾದ ನಿದ್ರೆ ಬಾರದು. ಯಾರಿಗೋ ಕೊಡಬೇಕಾದ ಹಣವನ್ನು ಮತ್ತಾರಿಗೋ ಕೊಡುವಿರಿ. ಇಂದು ನೀವು ನಿರೀಕ್ಷಿಸಿದ್ದು ನಿಮಗೆ ಸಿಗಲಿದೆ. ನಿಮಗೆ ಆಶ್ಚರ್ಯಗಳಿಂದ ಕೂಡಿದ ಕೆಲವು ಸಂಗತಿಗಳು ಗೊತ್ತಾಗಬಹುದು. ಅನ್ಯರ ಸಂಧಾನಕ್ಕೆ ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಪುಣ್ಯಸ್ಥಳದಿಂದ ಮನಸ್ಸು ಶಾಂತವಾಗಿರಲು ಧ್ಯಾನ ಸಹೋದ್ಯೋಗಿಗಳ ಸುಲಭವಾಗಬಹುದು. ಸಹಕಾರದಿಂದ ಕೆಲಸ ದೂರದ ಪ್ರಯಾಣದ ಯೋಗವಿದೆ. ಹಣಕಾಸು ವಿಷಯಗಳಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು. ಯಾರ ಮೇಲು ಆಪಾದನೆಯನ್ನು ಮಾಡಬೇಡಿ. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಪೋಷಕರ ಸೇವೆಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ. ಕೆಲವರ ಮಾತು ನಿಮ್ಮನ್ನು ಕಾಡಬಹುದು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯದು.
ವೃಶ್ಚಿಕ ರಾಶಿ: ಪುಣ್ಯಸ್ಥಳಕ್ಕೆ ತೆರಳಿ ಶುಭ ಕರ್ಮವನ್ನು ಮಾಡುವಿರಿ. ರಾಜಕೀಯ ಜನರನ್ನು ಭೇಟಿಯಾಗಿ ಆಗಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಈ ದಿನ ನೀವು ಎಂದಿನಂತೆ ಇರದೇ ಶಾಂತಿಯುತವಾಗಿ ನಡೆದುಕೊಳ್ಳುವಿರಿ. ಹಣಕಾಸಿನ ಲೆಕ್ಕಾಚಾರ ಸರಿಯಾಗಿ ನಿಭಾಯಿಸಬೇಕು. ಶತ್ರುಗಳಿಗೆ ನಿಮ್ಮ ಸಂದೇಶವನ್ನು ನೀಡುವಿರಿ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುನ್ನೋಟವಿರಲಿ. ಕುಟುಂಬದಲ್ಲಿ ನಿರೀಕ್ಷಿತ ಸುದ್ದಿ ಸಂತಸ ತಂದೀತು. ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಚಿಂತೆಗಳು ಕಡಿಮೆಯಾಗಬಹುದು. ಉತ್ಸಾಹ ಹಾಗೂ ಶ್ರಮದಿಂದ ಗುರಿ ತಲುಪುವಿರಿ. ಉದ್ಯೋಗದ ಸ್ಥಳದಲ್ಲಿ ಪ್ರೇಮವಾಗಬಹುದು. ಏಕಾಗ್ರವಾಗಿ ನಿಮ್ಮ ಕಾರ್ಯಗಳು ಮುಂದುವರಿಯಲಿ. ಅನಿರೀಕ್ಷತ ಅನಾರೋಗ್ಯದಿಂದ ಹಣವು ಖರ್ಚಾಗಬಹುದು. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು.
ಧನು ರಾಶಿ: ಆದಾಯವನ್ನು ಗೊತ್ತಾಗದಂತೆ ರಕ್ಷಿಸಿಕೊಳ್ಳುವಿರಿ. ಇಂದು ನೀವು ಬಹಳ ಕಾಲದ ಅನಂತರ ಕುಟುಂಬದ ಜನರ ಜೊತೆ ಹೆಚ್ಚು ಬೆರೆಯುವಿರಿ. ಮನೆಯಲ್ಲಿಯೇ ಇದ್ದು ಮನೆಯಲ್ಲಿಯೇ ಆನಂದವನ್ನು ಪಡೆಯುವಿರಿ. ಭಾವುಕತೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಬೆಂಬಲದಿಂದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ವೃತ್ತಿಪರ ಜೀವನದಲ್ಲಿ ಗುರುತುಪಡಿಸುವ ಅವಕಾಶ ಸಿಗಲಿದೆ. ತಂದೆಯ ಜೊತೆ ಸಣ್ಣ ಮಾತಿಗೆ ಕಲಹವಾಗಲಿದೆ. ಹಣದ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಸ್ನೇಹಿತರ ಮೂಲಕ ಉತ್ತಮ ಸುದ್ದಿ ಲಭ್ಯ. ಮನಸ್ಸಿನಲ್ಲಿ ಸ್ವಲ್ಪ ಚಿಂತೆಗಳಿದ್ದರೂ ಆತ್ಮವಿಶ್ವಾಸ ಕಾಪಾಡಿ. ಮಾತನಾಡಲು ಯಾರಿಲ್ಲದೇ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಿ. ನಿಮ್ಮ ಪೋಷಕರ ಸಲಹೆಯನ್ನು ಅನುಸರಿಸಿ, ಸಂಬಂಧವನ್ನು ಉತ್ತಮವಾಗಿಸಿಕೊಳ್ಳಿ. ನಿಮ್ಮ ಮಾತುಗಳಿಂದ ಸ್ವಭಾವವು ಸ್ಪಷ್ಟವಾಗುವುದು. ಪುಣ್ಯಸ್ಥಳಗಳನ್ನು ಕುಟುಂಬ ಜೊತೆ ದರ್ಶನ ಪಡೆಯುವಿರಿ.
ಮಕರ ರಾಶಿ: ನೀವು ಮಾಡದ ಕೆಲಸಕ್ಕೆ ಯಶಸ್ಸು ನಿಮಗೆ ಸಿಗಲಿದೆ. ನೀವು ಹೊಸತನ್ನು ಏನನ್ನಾದರೂ ಕಲಿಯಲು ಸಿದ್ಧರಾಗುವಿರಿ. ನಿಮ್ಮ ಕಡೆಯಿಂದ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರ ಜೊತೆ ಸಮಯ ಕಳೆಯುವಿರಿ. ನಿಮ್ಮೊಳಗಿನ ಶತ್ರುಗಳಿಂದ ನಿಮ್ಮ ಕಾರ್ಯ ಕುಂಟುತ್ತ ಹೋಗುವುದು. ಸಂವಹನ ಶಕ್ತಿಯಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಮುಂದುವರೆಯಲು ಅವಕಾಶ ಸಿಗುವುದು. ಉದ್ಯಮದಲ್ಲಿ ಹೊಸ ಪ್ರಯತ್ನಗಳು ಫಲ ನೀಡುವವು. ಹಿರಿಯರ ಸಲಹೆ ಮೂಲಕ ಸ್ಪಷ್ಟತೆ ಪಡೆಯಬಹುದು. ಹಣಕಾಸು ಸ್ಥಿತಿಯಲ್ಲಿ ಚುರುಕಾದ ಬದಲಾವಣೆಗಳು ಸಂಭವಿಸಬಹುದು. ನಿಮಗೆ ವಹಿಸಿದಷ್ಟು ಕೆಲಸವನ್ನು ಏಕಾಗ್ರತೆಯಿಂದ ಮಾಡಿ. ನೀವು ಸಾಲವನ್ನು ಪಡೆಯಲು ಆರ್ಥಿಕಸಂಸ್ಥೆಗಳಿಂದ ಆಹ್ವಾನ ಬರಬಹುದು. ದಾಂಪತ್ಯದಲ್ಲಿ ಮನಸ್ತಾಪಗಳು ಎದ್ದು ಶಾಂತವಾಗುವುದು. ಉಚಿತವಾದುದನ್ನು ಮಾತ್ರ ಪಡೆಯಿರಿ. ನಿಮ್ಮ ಆರೋಗ್ಯವು ಇಂದು ಚೆನ್ನಾಗಿರಲಿದೆ. ಹೆಣ್ಣು ಮಕ್ಕಳಿಂದ ನಿಮಗೆ ಯಶಸ್ಸು ಪ್ರಾಪ್ತಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು.
ಕುಂಭ ರಾಶಿ: ವ್ಯವಹಾರದ ಒತ್ತಡದಿಂದ ಧಾರ್ಮಿಕ ಆಚರಣೆಗೆ ಸಮಯ ಸಿಗದು. ಇಂದು ಪೋಷಕರಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಕಾರ್ಯದ ಸ್ಥಳದಲ್ಲಿ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಕುಟುಂಬದ ಸದಸ್ಯರೊಂದಿಗೆ ಅಲ್ಪವಿರಾಮ ತೆಗೆದು ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಿ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಉದ್ಯೋಗದಲ್ಲಿ ಶ್ಲಾಘನೆಗೆ ಪಾತ್ರರಾಗುವಿರಿ. ಮುಂಜಾಗ್ರತೆಯಿಂದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇಂದಿನ ಅಗತ್ಯ. ನಿಮ್ಮ ಪ್ರೀತಿಯನ್ನು ಯಾರೊಂದಿಗೂ ಹಂಚಿಕೊಂಡು ಸಮಾಧಾನವಾಗುವುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸಹೋದರರ ಜೊತೆ ಪಾಲುದಾರಿಕೆಯಿಂದ ಉತ್ತಮಲಾಭವಿದೆ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನೀವು ಎಣಿಸಿದಂತೆ ಆಗಿದ್ದು, ನಿಮಗೂ ಅಚ್ಚರಿಯಾದೀತು. ವಿದ್ಯಾಭ್ಯಾಸ ಮಹತ್ತ್ವದ ಅರಿವಾಗಬಹುದು.
ಮೀನ ರಾಶಿ: ಇಂದಿನ ಕಾರ್ಯವನ್ನು ಮುಂದೂಡಿದರೂ ಸರಿಯಾದ ದಿನವನ್ನು ಅದಕ್ಕಾಗಿ ನಿರ್ಧರಿಸಲು ಆಗದು. ಇಂದು ನೀವು ಸ್ನೇಹಿತರ ಹೆಚ್ಚು ಸಮಯವನ್ನು ಕಳೆಯುವಿರಿ. ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಮನಸ್ಸಿನಲ್ಲಿ ಉತ್ಸಾಹವಿದ್ದು ಹೊಸ ಕಾರ್ಯಗಳಲ್ಲಿ ತೊಡಗಲು ಇಚ್ಛೆ ಮೂಡುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸುಳಿವುಗಳು ಸಿಗುತ್ತವೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಒಳಿತು. ಪ್ರವಾಸ ಯೋಜನೆಗಳು ಮುಂದೂಡುವ ಸಾಧ್ಯತೆ ಇದೆ. ದೊಡ್ಡ ನಿರ್ಧಾರಗಳನ್ನು ನೀವೊಬ್ಬರೇ ತೆಗೆದುಕೊಂಡು ತಪ್ಪು ಮಾಡುವಿರಿ. ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಿ. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದುಹೋದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ದೈವಭಕ್ತಿಯಲ್ಲಿ ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು.




