Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ, ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
Horoscope ಡಿಸೆಂಬರ್ 23, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಚೌತಿ ತಿಥಿ, ಗುರುವಾರ, ಡಿಸೆಂಬರ್ 23, 2021. ಆಶ್ಲೇಷ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 01.37 ರಿಂದ ಇಂದು ಸಂಜೆ 03.00 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.42. ಸೂರ್ಯಾಸ್ತ: ಸಂಜೆ 5.47
ತಾ.23-12-2021 ರ ಗುರುವಾರದ ರಾಶಿಭವಿಷ್ಯ. ಮೇಷ: ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು. ಶುಭ ಸಂಖ್ಯೆ: 9
ವೃಷಭ: ನಿಮ್ಮ ಮೇಲಧಿಕಾರಿಗಳು ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು. ಶುಭ ಸಂಖ್ಯೆ: 5
ಮಿಥುನ: ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಶುಭ ಸಂಖ್ಯೆ: 8
ಕಟಕ: ಕೆಲಸ ಸಾಧನೆಗಾಗಿ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಹಿರಿಯರಿಗೆ ನಮಸ್ಕರಿಸಿ ಹೋದಲ್ಲಿ ಕೆಲಸ ಸಿದ್ಧಿಸುವುದು. ಶುಭ ಸಂಖ್ಯೆ: 8
ಸಿಂಹ: ಅತ್ಯಂತ ಚುರುಕುತನದಿಂದ ಇದ್ದ ನೀವು ಆಲಸ್ಯತನ ತೋರುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಮನೋವೇಗವುಳ್ಳ ಆಂಜನೇಯನನ್ನು ಸ್ಮರಿಸಿ ಆಲಸ್ಯತನದಿಂದ ಹೊರಬನ್ನಿ. ಶುಭ ಸಂಖ್ಯೆ: 7
ಕನ್ಯಾ: ಟೀಕಿಸುವಂತಹ ಜನರ ಕುರಿತು ಆತಂಕ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತಲ ಜನರೇ ನಿಮ್ಮನ್ನು ಅಡ್ಡಹಾದಿಗೆ ಎಳೆಯುತ್ತಿರುವರು. ಹಾಗಾಗಿ ನಿಮ್ಮ ಬಳಿ ಬರುವ ಜನರ ಬಗ್ಗೆ ಎಚ್ಚರದಿಂದಿರಿ. ಶುಭ ಸಂಖ್ಯೆ: 3
ತುಲಾ: ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷ್ಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು. ಶುಭ ಸಂಖ್ಯೆ: 2
ವೃಶ್ಚಿಕ: ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಶುಭ ಸಂಖ್ಯೆ: 6
ಧನು: ಪಾರ್ಟನರ್ ಶಿಪ್ ವ್ಯವಹಾರಗಳಿಂದ ಲಾಭಾಂಶ ಕಂಡು ಬರುವುದು. ನಿಮ್ಮಿಂದ ಜನರು ಸಹಾಯವನ್ನು ಬಯಸುವರು. ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬಂತೆ ನೀವು ದುಡಿದ ಹಣದಲ್ಲಿ ಸ್ವಲ್ಪ ದಾನ ಮಾಡಿ. ಶುಭ ಸಂಖ್ಯೆ: 9
ಮಕರ: ಸಕ್ಕರೆ ಇದ್ದಲ್ಲಿ ಇರುವೆ ಮುತ್ತುವುದು ಸ್ವಾಭಾವಿಕ. ಅಂತೆಯೇ ಪರೋಪಕಾರಿಗಳಾದ ನಿಮ್ಮ ಬಳಿ ಜನ ಸುತ್ತುವರಿಯುವರು. ನಿಮ್ಮ ನಾಯಕತ್ವಕ್ಕೆ ಹೆಚ್ಚಿನ ಬಲ ಬರುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಬಗ್ಗೆ ಚಿಂತಿಸುವಿರಿ. ಶುಭ ಸಂಖ್ಯೆ: 1
ಕುಂಭ: ಮಾತಿನ ಚಾಲಾಕಿತನ ಎಲ್ಲಾ ಕಡೆ ನಡೆಯುವುದಿಲ್ಲ ಎಂಬ ಸತ್ಯ ನಿಮಗೆ ಮನವರಿಕೆ ಆಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುವುದು ಒಳ್ಳೆಯದು. ಶುಭ ಸಂಖ್ಯೆ: 4
ಮೀನ: ಹೊಸ ಸ್ನೇಹಿತರ ವಲಯವೊಂದು ನಿಮ್ಮನ್ನು ಭೇಟಿ ಮಾಡುವರು ಮತ್ತು ನೀವು ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ಬೆಂಬಲ ಸೂಚಿಸುವರು. ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ವಹಿಸಿಕೊಳ್ಳಲು ಮನವಿ ಮಾಡುವರು. ಶುಭ ಸಂಖ್ಯೆ: 3 ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937