AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kaal Sarp Yog: ಖಗೋಳದಲ್ಲಿ ಸದ್ಯ ಕಾಳಸರ್ಪಯೋಗ ಘಟಿಸಿದೆ, ಯಾರಿಗೆಲ್ಲ ಕಂಟಕ?

ಕಾಳಸರ್ಪ ಯೋಗವು ರಾಹು ಮತ್ತು ಕೇತುಗಳ ನಡುವೆ ಎಲ್ಲಾ ಗ್ರಹಗಳು ಇರುವಾಗ ಉಂಟಾಗುವ ಜ್ಯೋತಿಷ್ಯ ಯೋಗವಾಗಿದೆ. ಇದು ವ್ಯಕ್ತಿಯ ಜೀವನದ ವಿವಿಧ ಅಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದರೆ, ಕೆಲವು ಪರಿಹಾರ ಕ್ರಮಗಳ ಮೂಲಕ ಈ ಯೋಗದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಇಲ್ಲಿ ಕಾಳಸರ್ಪ ಯೋಗದ ಪರಿಣಾಮಗಳು ಮತ್ತು ಪರಿಹಾರಗಳನ್ನು ವಿವರಿಸಲಾಗಿದೆ.

Kaal Sarp Yog: ಖಗೋಳದಲ್ಲಿ ಸದ್ಯ ಕಾಳಸರ್ಪಯೋಗ ಘಟಿಸಿದೆ, ಯಾರಿಗೆಲ್ಲ ಕಂಟಕ?
Kaal Sarp Yog
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 15, 2025 | 1:25 PM

Share

ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಲಾಭವಿಲ್ಲ, ಬಂದ ಹಣವೆಲ್ಲ ಯಾವುದಾದರೂ ಒಂದು ರೀತಿಯಲ್ಲಿ ಖಾಲಿಯಾಗುತ್ತದೆ‌ ಎನ್ನುವವರೇ ಬಹಳ ಜನ. ಅದಕ್ಕೆ ಅವರದೇ ಆದ ಹತ್ತಾರು ಕಾರಣಗಳು ಇದ್ದರೂ ಅವರಲ್ಲ ಅವರವರು ಪಡೆದುಕೊಂಡಿದ್ದು ಎನ್ನುವುದೂ ಆಗಾಗ ಹೇಳುತ್ತಾರೆ. ಜ್ಯೋತಿಷ್ಯದಲ್ಲಿ ಇರುವ ಅನೇಕ ಯೋಗಗಳು ಮನುಷ್ಯನ ಉನ್ನತಿ ಅವನತಿ, ಯಥಾಸ್ಥಿತಿಗಳನ್ನು ತಿಳಿಸುತ್ತವೆ. ಅನುಭವವನ್ನು ಅರಿತು ಪರಿಹಾರವನ್ನೂ ಕಂಡುಕೊಳ್ಳಬಹುದು. ಅಂತಹ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಈ ಯೋಗವು ರಾಹು ಮತ್ತು ಕೇತುಗಳ ನಡುವೆ ಎಲ್ಲ ಗ್ರಹಗಳು ಇದ್ದಾಗ ಉಂಟಾಗುತ್ತದೆ.

ಸದ್ಯ ಈ ಯೋಗ ಸಂಭವಿಸಿದೆ. ಕುಂಭದಲ್ಲಿ ರಾಹು ಸಿಂಹದಲ್ಲಿ ಕೇತು ಇರುವ ಕಾರಣ ಮತ್ತೆಲ್ಲ ಗ್ರಹಗಳೂ ಅವುಗಳ ಒಳಗೇ ಬರುತ್ತವೆ. ಹೀಗೆ ಇದ್ದಾಗ ಮನುಷ್ಯನಿಗೆ ಅಸಫಲತೆ, ಶ್ರಮಕ್ಕೆ ಅಪೂರ್ಣ ಫಲ ಸಿಗುವುದು.

ಯಾರಿಗೆಲ್ಲ ಏನು ಪರಿಣಾಮ?

ಮೇ ತಿಂಗಳ ೨೧ ನೇರ ದಿನಾಂಕದಿಂದ ಜುಲೈ ತಿಂಗಳ ೨೮ರವರೆಗೆ ಜನಿಸಿದ ಎಲ್ಲರಿಗೂ ಕಾಳಸರ್ಪಯೋಗ ಬರಲಿದೆ ಹಾಗೂ ಕುಂಭ, ಮೀನ, ಮೇಷ, ವೃಷಭ, ಮಿಥುನ, ಕರ್ಕಾಟಕ ಸಿಂಹ ರಾಶಿಯವರಿಗೆ ಉಂಟಾದ ಕಾಳಸರ್ಪಯೋಗವು ವಿರುದ್ಧ ಪರಿಣಾಮವನ್ನು ಉಂಟುಮಾಡುವುದು. ಕನ್ಯಾ, ತುಲಾ, ವೃಶ್ಚಿಕ ಧನು ಮಕರ ಈ ರಾಳಿಗೆ ಈ ಯೋಗದಿಂದ ತೊಂದರೆ ಇಲ್ಲ.

ಏನೇನಾಗುತ್ತದೆ ಹಾಗಾದರೆ?

ನಿಮ್ಮ ಉದ್ಯಮ, ವಿದ್ಯಾಭ್ಯಾಸ, ಗೃಹನಿರ್ಮಾಣ, ಉದ್ಯೋಗ, ಸ್ಥಾನಮಾನಪ್ರಾಪ್ತಿ, ವಿವಾಹ ಈ ಎಲ್ಲದರಲ್ಲಿಯೂ ನೀವು ಎಣಿಸಿದ ರೀತಿಯಲ್ಲಿ ಆಗದು. ನಿಮ್ಮ ಯೋಜನೆ ಪೂರ್ಣಪ್ರಮಾಣದಲ್ಲಿ ಸರಿಯಾಗಿಯೇ ಇದ್ದರೂ ಫಲಿಸುವುದು ಕಷ್ಟ.‌ ಈ ಯೋಗವು ನಿಮ್ಮ ಎಲ್ಲ ಪ್ರಯತ್ನವನ್ನೂ ತಾನೇ ನುಂಗಿಹಾಕುತ್ತದೆ. ಸದ್ಯದ ಸ್ಥಿತಿ ಹೀಗಾದರೆ, ಜನಿಸುವಾಗ ಈ ಯೋಗವಿದ್ದರೆ ಆಮರಣಾಂತ ಇದರ ಫಲವನ್ನು ಅನುಭವಿಸಬೇಕು.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ಏನು ಮಾಡಬಹುದು?

ಕಾಳ‌ಸರ್ಪಯೋಗ ಶಾಂತಿಯನ್ನು ದೋಷ ಪರಿಹಾರಾರ್ಥವಾಗಿ ಮಾಡಬಹುದು. ನಿರಂತರವಾಗಿ ರಾಹು ಹಾಗೂ ಕೇತುವಿನ ಸ್ತೋತ್ರವನ್ನು ಮಾಡುವುದು, ಪೌರಾಣಿಕ ಮಹಿಮೆಯುಳ್ಳ ಸುಬ್ರಹ್ಮಣ್ಯನ ಕ್ಷೇತ್ರಕ್ಕೆ ಹೋಗುವುದು, ನಾಗದೇವರಿಗೆ ಆಶ್ಲೇಷಾ ನಕ್ಷತ್ರ ಹಾಗೂ ಷಷ್ಠಿಯಲ್ಲಿ ಪೂಜೆ ಸಲ್ಲಿಸುವುದು, ಬ್ರಹ್ಮಚಾರಿಗೆ ಭೋಜನ ಮಾಡಿಸುವುದು, ಗೋವಿಗೆ ಗ್ರಾಸ ನೀಡುವುದು, ಕಾಳಹಸ್ತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವುದು, ಅಲ್ಲಿ ಆಶ್ಲೇಷಾ ಬಲಿಯನ್ನು ಮಾಡಿಸುವುದು, ನಾಗರ ಬಿಂಬವನ್ನು ದಾನವಾಗಿ ನೀಡುವುದು, ನಾಗರ ಪ್ರತಿಷ್ಠೆ ಹೀಗೆ ಹತ್ತಾರು ವಿಧಿವಿಧಾನಗಳನ್ನು ಮಾಡಬಹುದು. ಆದರಡ ಎಲ್ಲವೂ ಶುದ್ಧ ಮನಸ್ಸಿನಿಂದ, ಸಂಕಲ್ಪಪೂರ್ವಕವಾಗಿ ಮಾಡಿದರೆ ಪರಿಹಾರ ಸಾಧ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್