AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ರಾಶಿಗನುಗುಣವಾಗಿ ಸಪ್ಟೆಂಬರ್ ತಿಂಗಳ ನಾಲ್ಕನೇ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

ಸಪ್ಟೆಂಬರ್ ನಾಲ್ಕನೇ ವಾರದ ಉದ್ಯೋಗ ಭವಿಷ್ಯ ಇಲ್ಲಿದೆ. ಈ ವಾರ ವೃತ್ತಿಯಲ್ಲಿ ಸಾಮರ್ಥ್ಯ ವೃದ್ಧಿ, ಸಹೋದ್ಯೋಗಿಗಳಿಂದ ಟೀಕೆಗಳು, ವಿರಾಮ ಪಡೆಯುವ ಪ್ರಯತ್ನದಲ್ಲಿ ವಿಫಲತೆ, ಕಾರ್ಯಗಳ ಸಮರ್ಪಕ ನಿರ್ವಹಣೆ ಮತ್ತು ಯೋಜನೆಯ ಪೂರ್ವ ಸಿದ್ಧತೆಗಳು ಪ್ರಮುಖವಾಗಿವೆ. ಪ್ರತಿ ರಾಶಿಯವರಿಗೆ ಉದ್ಯೋಗದಲ್ಲಿ ಎದುರಾಗುವ ಸವಾಲುಗಳು, ಸಿಗುವ ಅವಕಾಶಗಳು ಮತ್ತು ಯಶಸ್ಸಿಗೆ ಅಗತ್ಯ ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.

ನಿಮ್ಮ ರಾಶಿಗನುಗುಣವಾಗಿ ಸಪ್ಟೆಂಬರ್ ತಿಂಗಳ ನಾಲ್ಕನೇ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ
ಉದ್ಯೋಗ ಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 19, 2026 | 10:30 AM

Share

ಸಪ್ಟೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ಉದ್ಯೋಗದಲ್ಲಿ ಸಾಮರ್ಥ್ಯ ವೃದ್ಧಿ, ಸಹೋದ್ಯೋಗಿಗಳಿಂದ ಟೀಕೆ, ವಿರಾಮ ಪಡೆಯುವ ಪ್ರಯತ್ನ ವಿಫಲ, ಅಂದಾಜಿಗೆ ತಕ್ಕಂತೆ ಕಾರ್ಯ, ಯೋಜನೆಯ ಪೂರ್ವ ಸಿದ್ಧತೆ ಇವೆಲ್ಲ ಈ ವಾರದ ವಿಶೇಷ.

ಮೇಷ ರಾಶಿ:

ಕೆಲಸದ ಕ್ಷೇತ್ರದಲ್ಲಿ ಈ ವಾರ ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹೊಸ ಅವಕಾಶ ಸಿಗಬಹುದು. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಕೆಲಸದ ವಿಚಾರದಲ್ಲಿ ಚಲನೆ ಕಂಡುಬರುವ ಸಾಧ್ಯತೆ ಇದೆ. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಆತುರ ಬೇಡ. ಉದ್ಯೋಗ ಬದಲಾವಣೆಯ ಯೋಚನೆಯಿದ್ದರೆ ಆಯ್ಕೆಗಳನ್ನು ಪರಿಶೀಲಿಸಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಪ್ರಯತ್ನದಲ್ಲಿ ಏಕಾಗ್ರತೆ ಭಂಗ.

ವೃಷಭ ರಾಶಿ:

ಉದ್ಯೋಗದಲ್ಲಿ ಸ್ಥಿರತೆ ಕಾಣಿಸಿಕೊಂಡರೂ ಜವಾಬ್ದಾರಿಗಳು ಹೆಚ್ಚಾಗಬಹುದು. ಹಿಂದೆ ಮಾಡಿದ ಕೆಲಸಕ್ಕೆ ಪ್ರಶಂಸೆ ಅಥವಾ ಹೊಸ ಹೊಣೆಗಾರಿಕೆ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಹುಡುಕುತ್ತಿರುವವರಿಗೆ ಪರಿಚಯದ ಮೂಲಕ ಅವಕಾಶ ಸಿಗಬಹುದು. ಮೇಲಧಿಕಾರಿಗಳೊಂದಿಗೆ ಅನಗತ್ಯ ವಾದಕ್ಕೆ ಹೋಗಬೇಡಿ. ಕೆಲಸದ ಒತ್ತಡದ ನಡುವೆಯೂ ತಾಳ್ಮೆ ಕಾಪಾಡಿದರೆ ನಿಮ್ಮ ಸ್ಥಾನ ಮತ್ತಷ್ಟು ಬಲವಾಗುತ್ತದೆ.

ಮಿಥುನ ರಾಶಿ:

ಮಾತುಕತೆ ಮತ್ತು ಬುದ್ಧಿವಂತಿಕೆಯೇ ಈ ವಾರ ನಿಮ್ಮ ಉದ್ಯೋಗದ ಬಲವಾಗಲಿದೆ. ಸಂದರ್ಶನ, ಸಭೆ, ಪ್ರಸ್ತುತಿ ಅಥವಾ ಒಪ್ಪಂದದ ಕೆಲಸಗಳಲ್ಲಿ ನಿಮ್ಮ ಮಾತು ಗಮನ ಸೆಳೆಯಬಹುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸಂಪರ್ಕವಲಯದಿಂದ ಸುದ್ದಿ ಬರಬಹುದು. ಆದರೆ ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಕೈಗೆತ್ತಿಕೊಂಡು ಗೊಂದಲ ಸೃಷ್ಟಿಸಿಕೊಳ್ಳಬೇಡಿ.

ಕರ್ಕಾಟಕ ರಾಶಿ:

ಕೆಲಸದ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾದರೂ ಅದೇ ನಿಮ್ಮ ಬೆಳವಣಿಗೆಗೆ ಕಾರಣವಾಗಬಹುದು. ಮೇಲಧಿಕಾರಿಗಳು ನಿಮ್ಮ ಪರಿಶ್ರಮವನ್ನು ಗಮನಿಸುವ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆಯ ಯೋಚನೆಯಿದ್ದರೆ ಕುಟುಂಬದ ಸಲಹೆಯನ್ನೂ ಪರಿಗಣಿಸಿ. ದೂರದ ಸ್ಥಳ ಅಥವಾ ಬೇರೆ ನಗರದಿಂದ ಉದ್ಯೋಗಾವಕಾಶದ ಸುದ್ದಿ ಬರಬಹುದು. ಕೆಲಸದ ಸ್ಥಳದಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿ.

ಸಿಂಹ ರಾಶಿ:

ನಿಮ್ಮ ನಾಯಕತ್ವದ ಗುಣಗಳು ಈ ವಾರ ಕೆಲಸದ ಸ್ಥಳದಲ್ಲಿ ಸ್ಪಷ್ಟವಾಗಿ ಗೋಚರಿಸಬಹುದು. ಹೊಸ ಯೋಜನೆಯ ಜವಾಬ್ದಾರಿ ಅಥವಾ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯಬಹುದು. ಆದರೆ ಅಧಿಕಾರದ ಭಾವನೆ ಸಹೋದ್ಯೋಗಿಗಳೊಂದಿಗೆ ಅಂತರ ಉಂಟುಮಾಡದಂತೆ ನೋಡಿಕೊಳ್ಳಿ. ಹಿಂದಿನ ಅನುಭವದಿಂದ ಕಲಿತ ಪಾಠವನ್ನು ಬಳಸಿಕೊಂಡರೆ ಸ್ಪರ್ಧೆಯಲ್ಲಿ ಉತ್ತಮ.

ಕನ್ಯಾ ರಾಶಿ:

ಈ ವಾರ ಕೆಲಸದಲ್ಲಿ ಸೂಕ್ಷ್ಮ ವಿಚಾರಗಳತ್ತ ನಿಮ್ಮ ಗಮನ ಹೆಚ್ಚಾಗುತ್ತದೆ. ತಪ್ಪುಗಳನ್ನು ಸರಿಪಡಿಸುವುದು, ದಾಖಲೆ ಪರಿಶೀಲಿಸುವುದು ಅಥವಾ ಯೋಜನೆಯನ್ನು ಮರುಸಂಘಟಿಸುವ ಕೆಲಸ ನಿಮ್ಮ ಕೈಗೆ ಬರಬಹುದು. ನಿಮ್ಮ ನಿಖರವಾದ ಕಾರ್ಯಶೈಲಿ ಮೇಲಧಿಕಾರಿಗಳ ಗಮನ ಸೆಳೆಯಬಹುದು. ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರಿಗೆ ಅವಕಾಶ ದೊರೆಯಬಹುದು. ಆದರೆ ಸಣ್ಣ ವಿಷಯಗಳನ್ನೂ ಅತಿಯಾಗಿ ಚಿಂತಿಸುವುದರಿಂದ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳಬೇಡಿ.

ತುಲಾ ರಾಶಿ:

ಉದ್ಯೋಗ ಕ್ಷೇತ್ರದಲ್ಲಿ ಸಂಬಂಧಗಳು ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸುವ ವಾರ ಇದು. ಸಹೋದ್ಯೋಗಿಯೊಬ್ಬರ ಸಹಾಯದಿಂದ ಕಷ್ಟಕರ ಕೆಲಸ ಸುಲಭವಾಗಬಹುದು. ಸಂದರ್ಶನ ಅಥವಾ ಮಾತುಕತೆಯಲ್ಲಿ ನಿಮ್ಮ ಸೌಮ್ಯ ವರ್ತನೆ ಅನುಕೂಲ ತರಬಹುದು. ಹೊಸ ಉದ್ಯೋಗದ ಅವಕಾಶ ಬಂದರೆ ವೇತನದ ಜೊತೆಗೆ ಕೆಲಸದ ಸ್ವರೂಪವನ್ನೂ ಪರಿಶೀಲಿಸಿ. ಹಳೆಯ ಸಮಸ್ಯೆಯೊಂದು ಮಾತುಕತೆಯಿಂದ ಬಗೆಹರಿಯಬಹುದು.

ವೃಶ್ಚಿಕ ರಾಶಿ:

ಕೆಲಸದ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗಬಹುದು. ನಿಮ್ಮ ಸಾಮರ್ಥ್ಯವನ್ನು ಪ್ರಶ್ನಿಸುವ ಪರಿಸ್ಥಿತಿ ಬಂದರೂ ಅದನ್ನು ವಾದದಿಂದಲ್ಲ, ಫಲಿತಾಂಶದಿಂದ ಉತ್ತರಿಸುವುದು ಉತ್ತಮ. ಉದ್ಯೋಗ ಹುಡುಕುತ್ತಿರುವವರಿಗೆ ಸ್ವಲ್ಪ ವಿಳಂಬದ ನಂತರ ಅವಕಾಶ ದೊರೆಯಬಹುದು. ಮೇಲಧಿಕಾರಿಗಳಿಂದ ಕಠಿಣ ಸೂಚನೆ ಬರಬಹುದು; ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಗುಪ್ತವಾಗಿ ಹೊಸ ಉದ್ಯೋಗದ ಪ್ರಯತ್ನ ನಡೆಸುತ್ತಿರಿ.

ಧನುಸ್ಸು ರಾಶಿ:

ಹೊಸ ದಿಕ್ಕಿನತ್ತ ಸಾಗಬೇಕೆಂಬ ಉತ್ಸಾಹ ಈ ವಾರ ಹೆಚ್ಚಾಗಬಹುದು. ಉದ್ಯೋಗ ಬದಲಾವಣೆ, ಹೊಸ ಕ್ಷೇತ್ರ ಅಥವಾ ಹೆಚ್ಚುವರಿ ತರಬೇತಿಯ ಬಗ್ಗೆ ಯೋಚನೆ ಮೂಡಬಹುದು. ದೂರದ ಸಂಸ್ಥೆ ಅಥವಾ ಬೇರೆ ಪ್ರದೇಶದಿಂದ ಅವಕಾಶದ ಸುಳಿವು ಬರಬಹುದು. ಈಗಿರುವ ಕೆಲಸದಲ್ಲಿ ನಿಮ್ಮ ಅನುಭವಕ್ಕೆ ಮೌಲ್ಯ ದೊರೆಯಬಹುದು. ಆದರೆ ತಕ್ಷಣ ಕೆಲಸ ತೊರೆಯುವ ನಿರ್ಧಾರ ತೆಗೆದುಕೊಳ್ಳದೆ ಹೊಸ ಅವಕಾಶದ ಸ್ಥಿರತೆಯನ್ನು ಪರಿಶೀಲಿಸಿ.

ಮಕರ ರಾಶಿ:

ಈ ವಾರ ಉದ್ಯೋಗದಲ್ಲಿ ಪರಿಶ್ರಮದ ಪರೀಕ್ಷೆ ನಡೆಯಬಹುದು. ಕೆಲಸದ ಪ್ರಮಾಣ ಹೆಚ್ಚಾದರೂ ಅದರ ಮೂಲಕ ನಿಮ್ಮ ಸಾಮರ್ಥ್ಯವನ್ನು ತೋರಿಸುವ ಅವಕಾಶ ಸಿಗುತ್ತದೆ. ಬಹುಕಾಲದಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ಪದೋನ್ನತಿ ಅಥವಾ ಸ್ಥಾನಮಾನ ಕುರಿತು ಮಾತುಕತೆ ನಡೆಯಬಹುದು, ಆದರೆ ಅಂತಿಮ ಫಲಕ್ಕೆ ಇನ್ನಷ್ಟು ಸಮಯ ಬೇಕಾಗಬಹುದು.

ಕುಂಭ ರಾಶಿ:

ಕೆಲಸದ ಕ್ಷೇತ್ರದಲ್ಲಿ ಹೊಸ ರೀತಿಯ ಅವಕಾಶ ನಿಮ್ಮ ಗಮನ ಸೆಳೆಯಬಹುದು. ತಂತ್ರಜ್ಞಾನ, ಸಂವಹನ, ಹೊಸ ಯೋಜನೆ ಅಥವಾ ವಿಭಿನ್ನ ಕಾರ್ಯವಿಧಾನಕ್ಕೆ ಸಂಬಂಧಿಸಿದ ಕೆಲಸದಲ್ಲಿ ಆಸಕ್ತಿ ಹೆಚ್ಚಬಹುದು. ಈಗಿರುವ ಉದ್ಯೋಗದಲ್ಲಿ ಬದಲಾವಣೆ ತರಬೇಕೆಂಬ ಮನಸ್ಸು ಮೂಡಬಹುದು. ಉದ್ಯೋಗಕ್ಕೆ ಪರಿಚಯಸ್ಥರಿಂದ ಉಪಯುಕ್ತ ಮಾಹಿತಿ ಸಿಗುವ ಸಾಧ್ಯತೆ ಇದೆ.

ಮೀನ ರಾಶಿ:

ಉದ್ಯೋಗದಲ್ಲಿ ನಿಧಾನವಾದರೂ ಸ್ಥಿರವಾದ ಪ್ರಗತಿಯ ವಾರ. ತಕ್ಷಣದ ಫಲ ಸಿಗದಿದ್ದರೂ ನಿಮ್ಮ ಹಿಂದಿನ ಪರಿಶ್ರಮ ವ್ಯರ್ಥವಾಗುವುದಿಲ್ಲ. ಹಿರಿಯರಿಂದ ಜವಾಬ್ದಾರಿ ಅಥವಾ ಮಾರ್ಗದರ್ಶನ ದೊರೆಯಬಹುದು. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರು ಸಹನೆಯಿಂದ ಮುಂದುವರಿಯಬೇಕು. ಕೆಲಸದ ಒತ್ತಡ ಹೆಚ್ಚಾದಾಗ ಸಮಯವನ್ನು ಸರಿಯಾಗಿ ಹಂಚಿಕೊಳ್ಳಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ
ಸಿಎಂ ಡಿಕೆ ಶಿವಕುಮಾರ್ ಮಂಗಳೂರು ಮೀನುಗಾರಿಕೆ ಬಂದರಿಗೆ ದಿಢೀರ್ ಭೇಟಿ
ಬೆಂಗಳೂರಿನ ಸುಧಾಮ ನಗರದಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಕಟ್ಟಡ!
ಬೆಂಗಳೂರಿನ ಸುಧಾಮ ನಗರದಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಕಟ್ಟಡ!
ಟಿ ನರಸೀಪುರದಲ್ಲಿ ಮಸೀದಿ ಮುಂದೆಯೇ ಗಣೇಶ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ
ಟಿ ನರಸೀಪುರದಲ್ಲಿ ಮಸೀದಿ ಮುಂದೆಯೇ ಗಣೇಶ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ
ಕನ್ನಡಿಗರೇ ನಿರ್ಮಿಸಿದ ದ್ರುವ ಹೆಲಿಕಾಪ್ಟರ್ ಹಸ್ತಾಂತರ:ಭಾರತೀಯ ಸೇನೆಗೆ ಬಲ
ಕನ್ನಡಿಗರೇ ನಿರ್ಮಿಸಿದ ದ್ರುವ ಹೆಲಿಕಾಪ್ಟರ್ ಹಸ್ತಾಂತರ:ಭಾರತೀಯ ಸೇನೆಗೆ ಬಲ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ