AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Future skills: ಭವಿಷ್ಯಕ್ಕೆ ಅಗತ್ಯ ಇರುವ ಕೌಶಲದೊಂದಿಗೆ ಸಿದ್ಧವಾಗದಿರೋದೇ ನಿರುದ್ಯೋಗಕ್ಕೆ ಕಾರಣ ಎನ್ನುತ್ತಿದೆ ಈ ಸಮೀಕ್ಷೆ

ಭವಿಷ್ಯದ ಅಗತ್ಯ ಕೌಶಲಗಳನ್ನು ರೂಢಿಸಿಕೊಳ್ಳದಿರುವುದು ನಿರುದ್ಯೋಗಕ್ಕೆ ಮುಖ್ಯ ಕಾರಣ ಎಂಬ ಅಂಶ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

Future skills: ಭವಿಷ್ಯಕ್ಕೆ ಅಗತ್ಯ ಇರುವ ಕೌಶಲದೊಂದಿಗೆ ಸಿದ್ಧವಾಗದಿರೋದೇ ನಿರುದ್ಯೋಗಕ್ಕೆ ಕಾರಣ ಎನ್ನುತ್ತಿದೆ ಈ ಸಮೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Sep 17, 2021 | 11:46 AM

Share

ಭವಿಷ್ಯದಲ್ಲಿ ಅಗತ್ಯ ಇರುವ ಕೌಶಲಗಳಲ್ಲಿ ತರಬೇತುಗೊಳಿಸಿದರೆ ತಮ್ಮ ವೃತ್ತಿ ಬದುಕಿನಲ್ಲಿ ಅಮೋಘವಾದ ಯಶಸ್ಸು ಸಾಧಿಸಬಹುದು- ಇದೇನೋ ಭಾಷಣದ ಸಾಲು ಅಂದುಕೊಳ್ಳಬೇಡಿ. ಒಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಪೈಕಿ 10ಕ್ಕೆ 7 ಮಂದಿ ಅಭಿಪ್ರಾಯ ಇದು. ಭಾರತದಲ್ಲಿ ಇರುವ ಕೌಶಲದ ಕೊರತೆ ಮತ್ತು ವೃತ್ತಿಪರರಿಗೆ ಇರುವ ಸವಾಲುಗಳ ಮಧ್ಯೆ ಇರುವ ಕಂದಕವನ್ನು ಗಮನದಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣ ಕಂಪೆನಿ ImaginXP ಸಮೀಕ್ಷೆಯೊಂದನ್ನು ನಡೆಸಿತ್ತು. 141 ಕಾರ್ಪೊರೇಟ್​ನ 1100 ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇದರಿಂದ ಗೊತ್ತಾಗಿರೋದು ಏನೆಂದರೆ, ಶೇ 33ರಷ್ಟು ಯುವ ಜನರಿಗೆ ಸದ್ಯಕ್ಕೆ ನಿರುದ್ಯೋಗ ಸಮಸ್ಯೆ ಎದುರಾಗುವುದಕ್ಕೆ ಕಾರಣ ಭವಿಷ್ಯಕ್ಕೆ ಅಗತ್ಯ ಇರುವ ಕೌಶಲಗಳು ಇಲ್ಲದಿರುವುದು. ಇವತ್ತಿಗೆ ಭಾರತದ GER ಶೇ 26.6ರಷ್ಟಿದೆ. ಅದರರ್ಥ, ಜನಸಂಖ್ಯೆಯಲ್ಲಿ ಶೇ 74ರಷ್ಟು 18ರಿಂದ 23 ವರ್ಷದವರು (ಉನ್ನತ ಶಿಕ್ಷಣ ಅರ್ಜಿದಾರರಾಗಲು ಸೂಕ್ತ ವಯಸ್ಸಿನವರು) ಉನ್ನತ ಶಿಕ್ಷಣ ವ್ಯವಸ್ಥೆ ಅಡಿಯಲ್ಲಿ ಇಲ್ಲ. ಅದಕ್ಕೆ ಕಾರಣ ಇಷ್ಟೇ: ಒಂದೋ ಉನ್ನತ ಶಿಕ್ಷಣ ಅವರ ಕೈಗೆಟುಕುವಂತೆ ಇಲ್ಲ ಅಥವಾ ಪಡೆಯುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ 2023ರ ಹೊತ್ತಿಗೆ ಭಾರತಕ್ಕೆ ಡಿಜಿಟಲ್ ಕೌಶಲ ಇರುವಂಥ 27 ಲಕ್ಷ ಮಂದಿಯ ಅಗತ್ಯ ಬರುತ್ತದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 53ರಷ್ಟು ಮಂದಿ ಒಪ್ಪಿಕೊಂಡಿರುವಂತೆ, ತಮ್ಮಿಚ್ಛೆಗೆ ತಕ್ಕಂತೆ ಉದ್ಯೋಗ ಹುಡುಕಲು ಸಾಧ್ಯವಾಗಿಲ್ಲ. ಇನ್ನು ತಮ್ಮ ಪದವಿ ಪೂರ್ಣ ಆದ ಮೇಲೆ ಅಂದುಕೊಂಡಂತೆ ವೇತನ ಬರುತ್ತಿಲ್ಲ ಎಂದಿರುವವರ ಪ್ರಮಾಣ ಶೇ 60ರಷ್ಟು. ImaginXP ಸ್ಥಾಪಕ ಹಾಗೂ ಸಿಇಒ ಶಶಾಂಕ್ ಶ್ವೇತ್ ಎಕನಾಮಿಕ್ ಟೈಮ್ಸ್ ಜತೆಗೆ ಮಾತನಾಡುತ್ತಾ, ಭವಿಷ್ಯದಲ್ಲಿ ಅಗತ್ಯ ಬರುವ ಕೌಶಲಗಳನ್ನು ಯುವಜನರಿಗೆ ವಿಸ್ತರಿಸುತ್ತಾ, ImaginXP ಏನನ್ನಾದರೂ ಬದಲಿಸಬಹುದಾದಂಥ ಉದ್ಯೋಗಿ ವರ್ಗವನ್ನು ಸೃಷ್ಟಿಸುತ್ತಿದೆ. ವಿವಿಧ ತಂತ್ರಜ್ಞಾನಗಳಲ್ಲಿ ಅವರು ಕೇವಲ ಕೌಶಲ ಇರುವವರಷ್ಟೇ ಅಲ್ಲ. ಅದರ ಜತೆಗೆ ಆವಿಷ್ಕಾರಗಳ ಬಗ್ಗೆ ಕೂಡ ಉತ್ಸಾಹ ಇರುತ್ತದೆ. ಇದರಿಂದ ಸಹಜವಾಗಿಯೇ ಉದ್ಯೋಗವನ್ನು ಅರಸಿ ಹೋಗುವವರು ಉದ್ಯೋಗ ಸೃಷ್ಟಿಸುವವರಾಗುತ್ತಾರೆ ಎಂದು ಅವರು ಹೇಳುತ್ತಾರೆ.

ಉದ್ಯೋಗ ಇದ್ದರೂ ಅದಕ್ಕೆ ಅಗತ್ಯವಾದ ಕೌಶಲ ಇರುವವರು ದೊರೆಯುತ್ತಿಲ್ಲ. ಕಾಲೇಜುಗಳಲ್ಲಿ ಪದವಿ ಪಡೆದ ನಂತರವೂ ಕೆಲಸಕ್ಕೆ ಪೂರಕವಾದ ಕೌಶಲಗಳನ್ನು ಕಲಿಸುವಲ್ಲಿ ಹಾಗೂ ಸಿದ್ಧಗೊಳಿಸುವಲ್ಲಿ ಶಿಕ್ಷಣ ವ್ಯವಸ್ಥೆ ವಿಫಲ ಆಗುತ್ತಿದೆ ಎಂಬ ಆಕ್ಷೇಪ ವ್ಯಾಪಕವಾಗಿದೆ. ಇದಕ್ಕೆ ಪುಷ್ಟೀಕರಿಸುವಂತೆ ಈ ಸಮೀಕ್ಷೆಯಲ್ಲಿ ನಿರುದ್ಯೋಗಕ್ಕೆ ಕಾರಣ ಆಗುವ ಅಂಶಗಳನ್ನು ಪ್ರಸ್ತಾವ ಮಾಡಲಾಗಿದೆ.

ಇದನ್ನೂ ಓದಿ: World Youth Skill day 2021: ಸಾಂಕ್ರಾಮಿಕ ಸಮಯದಲ್ಲಿ ಕೌಶಲ್ಯ ಅಭಿವೃದ್ಧಿ ಎದುರಿಸಿದ ಅಡೆತಡೆಗಳು ಮತ್ತು ಸವಾಲುಗಳು

(Lack Of Futuristic Skill Is Key Reason For Unemployment In Youths According To Survey Findings)

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ