AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಕರೆ ನಾಡು ಮಂಡ್ಯದಲ್ಲಿ 22 ಕೊರೊನಾ ಕೇಸ್ ಪತ್ತೆ, ಬೇರೆ ಜಿಲ್ಲೆಗಳಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ. 36 ಪುರುಷರು, 18 ಮಹಿಳೆಯರಲ್ಲಿ ಕೊರೊನಾ ಅಟ್ಯಾಕ್ ಆಗಿದ್ದು, 54 ಕೊರೊನಾ ಸೋಂಕಿತರ ಪೈಕಿ 10 ಮಕ್ಕಳಿಗೂ ವೈರಸ್​ ತಗುಲಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ 22 ಜನರಿಗೆ ಕೊರೊನಾ ಅಟ್ಯಾಕ್ ಆಗಿದ್ದು, ಕಲಬುರಗಿ 10, ಹಾಸನ ಜಿಲ್ಲೆಯಲ್ಲಿ 6, ಧಾರವಾಡ 4, ಯಾದಗಿರಿ 3, ಶಿವಮೊಗ್ಗ 2, ಕೋಲಾರ 3, ದಕ್ಷಿಣ ಕನ್ನಡ 2, ಉಡುಪಿ 1, ವಿಜಯಪುರದಲ್ಲಿ […]

ಸಕ್ಕರೆ ನಾಡು ಮಂಡ್ಯದಲ್ಲಿ 22 ಕೊರೊನಾ ಕೇಸ್ ಪತ್ತೆ, ಬೇರೆ ಜಿಲ್ಲೆಗಳಲ್ಲಿ ಎಷ್ಟು?
ಸಾಧು ಶ್ರೀನಾಥ್​
|

Updated on:May 17, 2020 | 1:46 PM

Share

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ. 36 ಪುರುಷರು, 18 ಮಹಿಳೆಯರಲ್ಲಿ ಕೊರೊನಾ ಅಟ್ಯಾಕ್ ಆಗಿದ್ದು, 54 ಕೊರೊನಾ ಸೋಂಕಿತರ ಪೈಕಿ 10 ಮಕ್ಕಳಿಗೂ ವೈರಸ್​ ತಗುಲಿದೆ.

ಮಂಡ್ಯ ಜಿಲ್ಲೆಯೊಂದರಲ್ಲೇ 22 ಜನರಿಗೆ ಕೊರೊನಾ ಅಟ್ಯಾಕ್ ಆಗಿದ್ದು, ಕಲಬುರಗಿ 10, ಹಾಸನ ಜಿಲ್ಲೆಯಲ್ಲಿ 6, ಧಾರವಾಡ 4, ಯಾದಗಿರಿ 3, ಶಿವಮೊಗ್ಗ 2, ಕೋಲಾರ 3, ದಕ್ಷಿಣ ಕನ್ನಡ 2, ಉಡುಪಿ 1, ವಿಜಯಪುರದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಈವರೆಗೆ 37 ಜನರು ಮೃತಪಟ್ಟಿದ್ದು, ಸೋಂಕಿನಿಂದ ಗುಣಮುಖರಾಗಿ ಈವರೆಗೆ 497 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Published On - 1:00 pm, Sun, 17 May 20