AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಳಕಲ್ ಕೊ ಆಪ್​ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳು 30-40 ಲಕ್ಷಕ್ಕೆ ಬಿಕರಿಯಾಗಿರುವ ಆರೋಪ: ಪರೀಕ್ಷೆ ನಡೆಸಿದ ಮಂಡ್ಯ ವಿವಿ ವಿರುದ್ಧ ಎಫ್ಐಆರ್

ಇಳಕಲ್ ಕೊ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನಲ್ಲಿ ವಿವಿಧ ಹುದ್ದೆಗೆ ಬರೊಬ್ಬರಿ 800 ಜನ ಅರ್ಜಿ ಹಾಕಿದ್ದರು. ಆದರೆ ಫಲಿತಾಂಶ ಲಿಸ್ಟ್ ಹಾಕದೇ ನೇರವಾಗಿ 17 ಜನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಒಬ್ಬ ಅಭ್ಯರ್ಥಿಯಿಂದ 30-40 ಲಕ್ಷ ಪಡೆದು ಹುದ್ದೆ ಮಾರಿಕೊಳ್ಳಲಾಗಿದೆ. ಇದರಲ್ಲಿ ಪರೀಕ್ಷೆ ನಡೆಸಿದ ಮಂಡ್ಯ ವಿವಿ ಪಾತ್ರವೂ ಇದೆ ಎಂದು ಕೂಡ ಆರೋಪವಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಇಳಕಲ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಆಗಿದೆ.

ಇಳಕಲ್ ಕೊ ಆಪ್​ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳು 30-40 ಲಕ್ಷಕ್ಕೆ ಬಿಕರಿಯಾಗಿರುವ ಆರೋಪ: ಪರೀಕ್ಷೆ ನಡೆಸಿದ ಮಂಡ್ಯ ವಿವಿ ವಿರುದ್ಧ ಎಫ್ಐಆರ್
ಇಳಕಲ್ ಕೊ ಆಪ್​ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳು 30-40 ಲಕ್ಷಕ್ಕೆ ಬಿಕರಿ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Dec 06, 2023 | 10:28 AM

Share

ಅದು ಆ ನಗರದ ಒಂದು ಸಹಕಾರಿ ಬ್ಯಾಂಕ್. ಆ ಬ್ಯಾಂಕ್‌ ನಲ್ಲಿ ವಿವಿಧ ಹುದ್ದೆ ನೇಮಕಾತಿಯಲ್ಲಿ (recruitment) ಭಾರಿ ಗೋಲ್ ಮಾಲ್ ನಡೆದಿದೆ‌‌‌. ‌‌ಹುದ್ದೆಗಾಗಿ ಲಕ್ಷ ಲಕ್ಷ ಹಣ ಪಡೆದು ಹುದ್ದೆ ಮಾರಿಕೊಳ್ಳಲಾಗಿದೆ ಎಂದು ಆರೋಪ (Allegation) ಕೇಳಿ ಬಂದಿದೆ.ಇದಕ್ಕೆ ಅಭ್ಯರ್ಥಿಗಳ ಆಯ್ಕೆ ಮುನ್ನವೇ ನಿರ್ದಿಷ್ಟವಾಗಿ ಇಂತಹವರೇ ಆಯ್ಕೆ ಆಗುತ್ತಾರೆ ಎಂದು ದೂರಲಾಗಿದೆ. ಅಷ್ಟಕ್ಕೂ ಆ ಬ್ಯಾಂಕ್ ಯಾವುದು?ಅಲ್ಲಿ ಆಗಿರುವ ಆಕ್ರಮ ಏನು ಇಲ್ಲಿದೆ ನೋಡಿ ಡಿಟೇಲ್ಸ್‌. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರಿ ಬ್ಯಾಂಕುಗಳು ಭಾರಿ ಹೆಸರಾಗಿವೆ. ಜನರು ಸರಕಾರಿ ಬ್ಯಾಂಕ್ ಗಿಂತಲೂ ಹೆಚ್ಚು ಸಹಕಾರಿ ಬ್ಯಾಂಕ್ ನಲ್ಲಿ ತಮ್ಮ ವ್ಯವಹಾರ ಮಾಡುತ್ತಾರೆ ‌‌‌.ಇದರಿಂದ ಉತ್ತರ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾದ ಬಾಗಲಕೋಟೆ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ಹೆಚ್ಚಾಗಿವೆ‌.ಆದರೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಒಂದು ಸಹಕಾರಿ ಬ್ಯಾಂಕ್ ವಿವಿಧ ಹುದ್ದೆಯಲ್ಲಿ (ilkal coop bank in bagalkot) ಆಕ್ರಮ ನೇಮಕಾತಿ ಆರೋಪಕ್ಕೆ ಗುರಿಯಾಗಿದೆ‌‌‌‌‌.

ಇಳಕಲ್ ನ ಇಳಕಲ್ ಕೊ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ ನಲ್ಲಿ ೧೫ ಕಿರಿಯ ಸಹಾಯಕ ಹಾಗೂ ೨ ಜವಾನ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಆಕ್ರಮ ನಡೆದಿದೆ ಎಂಬ ಆರೋಪ ಪ್ರಬಲವಾಗಿದೆ‌.ಇದಕ್ಕೆ ಸಾಕ್ಷಿ ಅಂದರೆ ಹುದ್ದೆಗೆ ನೇಮಕ ಆಗುವ ಅಭ್ಯರ್ಥಿಗಳ ಹೆಸರನ್ನು ಮೊದಲೇ ಓರ್ವ ವ್ಯಕ್ತಿ ಬಹಿರಂಗ ಪಡಿಸಿರುವ ವಿಚಾರ‌‌.‌ ‌‌‌ಹೌದು ಇಳಕಲ್ ಕೊ ಆಪರೇಟಿವ್ ಬ್ಯಾಂಕ್ ನಲ್ಲಿ ಹದಿನೇಳು ಹುದ್ದೆಗಳಿಗೆ 19-1-23 ರಂದು ಪರೀಕ್ಷೆ ನಡೆಸಲಾಗಿದೆ.ಇದರಲ್ಲಿ ಗೋಲ್ ಮಾಲ್ ಇದೆ ಎಂದು ನಗರದ ಆನಂದ ಮನ್ನಾಪುರ ಎಂಬ ವ್ಯಕ್ತಿ ಇಳಕಲ್ ಕೊ ಆಪರೇಟಿವ್ ಬ್ಯಾಂಕ್ ಗೆ ಇಂತಹವರೇ ಹದಿನೈದು ಜನ ಕಿರಿಯ ಸಹಾಯಕರು ಇಂತವರೇ ಇಬ್ಬರು ಜವಾನರಾಗಿ ಆಯ್ಕೆ ಆಗುತ್ತಾರೆ ಎಂದು ಹೇಳಿದ್ದರು. ಜೊತೆಗೆ ಅಭ್ಯರ್ಥಿಗಳ ಅಪಾಯಿಂಟಮೆಂಟ್ ಲೆಟರ್ ಕೊಡುವ ೧೦ ದಿನ ಮುನ್ನವೇ ೩-೩-೨೦೨೩ ರಂದು ಲೋಕಾಯುಕ್ತರಿಗೆ ಅಭ್ಯರ್ಥಿಗಳ ಹೆಸರು ಸಮೇತ ದೂರು ಅರ್ಜಿ ಸಲ್ಲಿಸಿದ್ದರು. ನಂತರ ೧೩-೩-೨೩ ರಂದು ಅದೇ ಹೆಸರಿನವರಿಗೆ ಬ್ಯಾಂಕ್ ಆಡಳಿತ ಮಂಡಳಿ ನೇಮಕಾತಿ ಆದೇಶ ನೀಡಿದೆ‌. ಆ ಮೂಲಕ ಆಕ್ರಮ ನೇಮಕಾತಿ ಮೇಲ್ನೋಟಕ್ಕೆ ಕಂಡುಬಂದಿದೆ.

ಇಲ್ಲಿ ಬ್ಯಾಂಕ್ ಹುದ್ದೆಗೆ ಬರೊಬ್ಬರಿ 800 ಜನ ಅರ್ಜಿ ಹಾಕಿದ್ದರು ಎಂಬ ಮಾಹಿತಿ ಇದೆ.ಅರ್ಜಿ ಹಾಕುವ ವೇಳೆ ಒಬ್ಬ ಅಭ್ಯರ್ಥಿಯಿಂದ ಸಾವಿರ ರೂ ಹಣ ಪಡೆಯಲಾಗಿದೆ ಎನ್ನಲಾಗಿದೆ.ಇನ್ನು ಈ ಪರೀಕ್ಷೆಯನ್ನು ಮಂಡ್ಯ ವಿವಿ ಸಹಯೋಗದಲ್ಲಿ ನಡೆಸಲಾಗಿದೆ.ಅರ್ಜಿ ಹಾಕಿದವರಲ್ಲಿ 400-500 ಜನ ಪರೀಕ್ಷೆ ಬರೆದಿದ್ದು,ಪರೀಕ್ಷಾ ಫಲಿತಾಂಶ ಪಟ್ಟಿಯನ್ನೇ ಪ್ರಕಟ ಮಾಡಿಲ್ಲ ಎಂದು ಆರೋಪಿಸಲಾಗಿದೆ.ಫಲಿತಾಂಶ ಲಿಸ್ಟ್ ಹಾಕದೇ ನೇರವಾಗಿ 17 ಜನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಆರೋಪ ಕೇಳಿಬಂದಿದೆ.ಇದರಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಆಕ್ರಮ ನಡೆಸಿದ್ದು ಒಬ್ಬ ಅಭ್ಯರ್ಥಿಯಿಂದ ಕನಿಷ್ಟ 30-40 ಲಕ್ಷ ಪಡೆದು ಹುದ್ದೆ ಮಾರಿಕೊಳ್ಳಲಾಗಿದೆ.

Also Read: Karnataka Weather: ಕರ್ನಾಟಕದಾದ್ಯಂತ ಚಳಿ ಶುರು, ಮೂರ್ನಾಲ್ಕು ದಿನಗಳ ಬಳಿಕ ಇಣುಕಿದ ಸೂರ್ಯ

ಇದರಲ್ಲಿ ಮಂಡ್ಯ ವಿವಿ ಪಾತ್ರವಿದೆ ಎಂದು ಕೂಡ ಆನಂದ ಮನ್ನಾಪುರ ಆರೋಪ ಮಾಡಿದ್ದಾರೆ.ಇನ್ನು ಈ ಬಗ್ಗೆ ಲೋಕಾಯುಕ್ತರಿಗೆ ದೂರು ಅರ್ಜಿ ಸಲ್ಲಿಸಿದ್ದಾರೆ.ಜೊತೆಗೆ ಇಳಕಲ್ ಪೊಲೀಸ್ ಠಾಣೆಯಲ್ಲಿ ಕೂಡ ಬ್ಯಾಂಕ್ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ 18 ಜನ ನಿರ್ದೇಶಕರು,ಸಿಇಒ ಚಂದ್ರಶೇಖರ್,ಮಂಡ್ಯ ವಿವಿ ಹೆಸರನ್ನು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.ಎಫ್ ಐ ಆರ್ 24-11-23 ರಂದು ಆಗಿದ್ದು ಅವರನ್ನು ಇಳಕಲ್ ಠಾಣೆ ಪೊಲೀಸರು ಬಂಧಿಸುವ ಕಾರ್ಯ ಮಾಡಿಲ್ಲ.

ಇಂತಹ ಆಕ್ರಮ ಬಯಲಿಗೆಳೆಯಬೇಕು.ಕಷ್ಟಪಟ್ಟು ಓದಿದ ಅಭ್ಯರ್ಥಿಗಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ.ಇಂತವರನ್ನೇ ಆಯ್ಕೆ ಮಾಡೋದಾದರೆ ಪರೀಕ್ಷೆ ಯಾಕೆ ನಡೆಸಬೇಕಿತ್ತು ಎಂಬುದು ದೂರುದಾರರ ವಾದ.ಇಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು,ಉಳಿದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಇನ್ನು ಮೇಲೆ ಹೈಕೋರ್ಟ್ ವರೆಗೂ ಹೋಗುತ್ತೇವೆ, ಸಹಕಾರಿ ಸಚಿವರವರೆಗೂ ಹೋಗೋದಾಗಿ ಇವರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಪರೀಕ್ಷಯಲ್ಲಿ ಆಕ್ರಮ ನಡೆದಿರುವ ಬಲವಾದ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಎಫ್ ಐ ಆರ್ ಕೂಡ ದಾಖಲಾಗಿದ್ದು,ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:25 am, Wed, 6 December 23

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ