ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ನೀರುಪಾಲು

ಬಾಗಲಕೋಟೆ: ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ನೀರುಪಾಲಾಗಿರುವ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿಯಿರುವ ಘಟಪ್ರಭಾ ಎಡದಂಡೆ ಬಳಿ ನಡೆದಿದೆ. ನಿನ್ನೆ ತಡರಾತ್ರಿ ಹೊಲಕ್ಕೆ ಹೋಗಿ ಮನೆಗೆ ಬರುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದಿದೆ. ಟ್ರ್ಯಾಕ್ಟರ್​ನಲ್ಲಿ ಶಿವರುದ್ರಪ್ಪ ಪೋಳ(55) ಪೈಗಂಬರ್ ಲಾಡಕನ್(25) ಮತ್ತು ಶಂಕ್ರಪ್ಪ ಗೌಡರ್(55) ಸೇರಿ ಮೂರು ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಅದೃಷ್ಟವಶಾತ್ ಶಂಕ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ನೀರಿಗೆ ಬಿದ್ದ ಟ್ರ್ಯಾಕ್ಟರ್ ಮೇಲೆತ್ತಲು ಗ್ರಾಮಸ್ಥರು ಹರಸಾಹಸ […]

ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ನೀರುಪಾಲು
sadhu srinath

|

Feb 03, 2020 | 10:22 AM

ಬಾಗಲಕೋಟೆ: ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ನೀರುಪಾಲಾಗಿರುವ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿಯಿರುವ ಘಟಪ್ರಭಾ ಎಡದಂಡೆ ಬಳಿ ನಡೆದಿದೆ. ನಿನ್ನೆ ತಡರಾತ್ರಿ ಹೊಲಕ್ಕೆ ಹೋಗಿ ಮನೆಗೆ ಬರುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದಿದೆ.

ಟ್ರ್ಯಾಕ್ಟರ್​ನಲ್ಲಿ ಶಿವರುದ್ರಪ್ಪ ಪೋಳ(55) ಪೈಗಂಬರ್ ಲಾಡಕನ್(25) ಮತ್ತು ಶಂಕ್ರಪ್ಪ ಗೌಡರ್(55) ಸೇರಿ ಮೂರು ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಅದೃಷ್ಟವಶಾತ್ ಶಂಕ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ನೀರಿಗೆ ಬಿದ್ದ ಟ್ರ್ಯಾಕ್ಟರ್ ಮೇಲೆತ್ತಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.

ಕಾಲುವೆಗೆ ಬಿದ್ದಿರುವ ಟ್ರ್ಯಾಕ್ಟರ್​ಗೆ ಹಗ್ಗ ಕಟ್ಟಿ ಮತ್ತೊಂದು ಟ್ರ್ಯಾಕ್ಟರ್​ನಿಂದ ಮೇಲೆತ್ತುವ ಪ್ರಯತ್ನ ನಡೆಯುತ್ತಿದೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada