ಬಳ್ಳಾರಿಯ ಹೋಟೆಲ್ನಲ್ಲಿ ಉಪಾಹಾರ ಸೇವಿಸಿದ್ದ 15 ಜನ ಅಸ್ವಸ್ಥ
ಮುಂಜಾನೆ ಹೋಟೆಲ್ನಲ್ಲಿ ಇಡ್ಲಿ, ಚಟ್ನಿ ಸೇವಿಸಿದ್ದ 15 ಜನರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. ತಿಂಡಿ ತಿಂದ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ 15 ಜನ ಅಸ್ವಸ್ಥಗೊಂಡವರಿಗೆ ಸಿರಗುಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ಕುರವಳ್ಳಿಯ ಹೋಟೆಲ್ನಲ್ಲಿ ಉಪಾಹಾರ ಸೇವಿಸಿ 15 ಜನರು ಅಸ್ವಸ್ಥಗೊಂಡಿದ್ದಾರೆ. ಮುಂಜಾನೆ ಹೋಟೆಲ್ನಲ್ಲಿ ಇಡ್ಲಿ, ಚಟ್ನಿ ಸೇವಿಸಿದ್ದ 15 ಜನರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. ತಿಂಡಿ ತಿಂದ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ 15 ಜನ ಅಸ್ವಸ್ಥಗೊಂಡವರಿಗೆ ಸಿರಗುಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಪಾಹಾರ ಸೇವಿಸಿದ್ದ 15 ಜನರೂ ಕುರವಳ್ಳಿ ಗ್ರಾಮದವರು. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹೊಟೇಲ್ನಲ್ಲಿ ಉಪಹಾರ ಸೇವಿಸಿ ಅಸ್ವಸ್ಥಗೊಂಡವರನ್ನ ಸಿರಗುಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿಂಡಿ ತಿಂದಿದ್ದ 15 ಜನರು ತಿಂಡಿ ನಂತರ ವಾಂತಿ ಭೇದಿಯಿಂದ ಸ್ಥಳೀಯ ಆಸ್ಪತ್ರೆಗೆ ಹೋಗುತ್ತಿದ್ದಂತೆ ಹೊಟೇಲ್ ನಲ್ಲಿನ ಕಲುಷಿತ ಆಹಾರ ಸೇವೆನೆಯೇ ಅಸ್ವಸ್ಥರಾಗಲು ಕಾರಣ ಎನ್ನಲಾಗ್ತಿದೆ. ಅಸ್ವಸ್ಥಗೊಂಡ ಎಲ್ಲರೂ ಈಗ ಸಿರಗುಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಎಲ್ಲರೂ ಪ್ರಾಣಾಪಯದಿಂದ ಪಾರಾಗಿದ್ದಾರೆ. ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ತಾಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರ್ ಪರಿಶೀಲನೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಆರೋಗ್ಯ ಸೇವೆ ಒದಗಿಸುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಕೊಡಿ: ಸಂತೋಷ್ ಹೆಗ್ಡೆ, ಎಸ್ಆರ್ ಹಿರೇಮಠ ಆಗ್ರಹ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಸೇವಿಸುತ್ತಿದ್ದ 8 ಆರೋಪಿಗಳು ಅರೆಸ್ಟ್ ಚಿತ್ರದುರ್ಗ ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಸೇವಿಸುತ್ತಿದ್ದ 8 ಆರೋಪಿಗಳನ್ನು ಬಂಧಿಸಿದ್ದಾರೆ. ಗಾಂಜಾ ಮಾರುತ್ತಿದ್ದ ಸೋಮಶೇಖರ್, ಭರತ್@ಬೆಣ್ಣೆ ಬಂಧಿತರು. ಮತ್ತು ಗಾಂಜಾ ಸೇವಿಸುತ್ತಿದ್ದ ದಾದಾಪೀರ್, ಭಾಸ್ಕರಾಚಾರಿ, ದಸ್ತಗಿರಿ, ಗೌಸ್ ಪೀರ್, ಸಾತ್ವಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 8 ಕೆಜಿ ಗಾಂಜಾ, ಆಟೋ, 2 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಶ್ರೀನಿವಾಸ್ @ಜಪಾನ್ ಸೀನ ಪರಾರಿಯಾಗಿದ್ದಾರೆ. ಪೊಲೀಸರ ವಶದಲ್ಲಿದ್ದಾಗಲೇ ಸ್ಥಳ ಮಹಜರ್ಗೆ ತೆರಳಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿ ಆರೋಪಿ ಶ್ರೀನಿವಾಸ್ ಪರಾರಿಯಾಗಿದ್ದಾನೆ. ಈ ಬಗ್ಗೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.
5 ದಿನಗಳಲ್ಲಿ ಬರೋಬ್ಬರಿ 20 ಮನೆಗಳಲ್ಲಿ ಕಳ್ಳತನ ಬೆಳಗಾವಿ ಜಿಲ್ಲೆಯಲ್ಲಿ ಅಂತಾರಾಜ್ಯ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ 15 ದಿನಗಳಲ್ಲಿ ಬರೋಬ್ಬರಿ 20 ಮನೆಗಳಲ್ಲಿ ಕಳ್ಳತನ ನಡೆದಿದೆ. ಬೆಳಗಾವಿಯ ವಸಂತನಗರ, ಟಿಳಕವಾಡಿ, ಉದ್ಯಮಭಾಗ್, ಸದಾಶಿವನಗರ ಸೇರಿ ಹಲವೆಡೆ ಅಂತಾರಾಜ್ಯ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಶಿವಾಜಿ ಕಾಲೋನಿಯಲ್ಲಿ ಒಂದೇ ದಿನ 6 ಮನೆಗಳ್ಳತನ ನಡೆದಿದೆ. ಕಳ್ಳತನ ಪ್ರಕರಣ ದಾಖಲಿಸಿಕೊಳ್ಳದೆ ಟಿಳಕವಾಡಿ, ಉದ್ಯಮಭಾಗ್ ಠಾಣೆ ಪೊಲೀಸರು ನಿರ್ಲಕ್ಷ್ಯವಹಿಸುತ್ತಿದ್ದು ಅಂತಾರಾಜ್ಯ ಕಳ್ಳರನ್ನ ಬಂಧಿಸಿ ಜೈಲಿಗಟ್ಟುವಂತೆ ಜನರು ಆಗ್ರಹಿಸಿದ್ದಾರೆ. ಇನ್ನು ಮಾರಕಾಸ್ತ್ರ ಹಿಡಿದು ಮನೆಗಳಿಗೆ ನುಗ್ಗುತ್ತಿರುವ ಕಳ್ಳರ ಗ್ಯಾಂಗ್ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದೆ. ಮಹಾರಾಷ್ಟ್ರದಿಂದ ತಂಡ ಮಾಡಿಕೊಂಡು ಕಳ್ಳರು ಬರುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟ್ವಿಟರ್ ಬ್ಲೂ ಟಿಕ್ ಮರುಸ್ಥಾಪಿಸಲು ಮನವಿ ಸಲ್ಲಿಸಿದ್ದಕ್ಕಾಗಿ ಸಿಬಿಐ ಮಾಜಿ ನಿರ್ದೇಶಕ ಎಂ ನಾಗೇಶ್ವರ ರಾವ್ಗೆ ₹10 ಸಾವಿರ ದಂಡ ವಿಧಿಸಿದ ದೆಹಲಿ ಹೈಕೋರ್ಟ್
Published On - 4:51 pm, Tue, 17 May 22