12 ವರ್ಷಗಳಿಂದ ಸಾಗುತ್ತಿದೆ ರಂಗಮಂದಿರ ಕಟ್ಟಡ ಕಾಮಗಾರಿ; ನಿರ್ಲಕ್ಯಕ್ಕೆ ಕಲಾವಿದರ ಆಕ್ರೋಶ

ಅಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ರಂಗ ಮಂದಿರ ಕಟ್ಟಡ ಪೂರ್ಣಗೊಂಡು ಕಲಾವಿದರು ಕಲಾ ಪ್ರದರ್ಶನ ಮತ್ತು ವಿದ್ಯಾರ್ಥಿಗಳ ಚಿಲಿಪಿಲಿ ನಟನೆ ಇವೆಲ್ಲವೂ ಕಾಣಸಿಗುತ್ತಿತ್ತು. ಆದರೆ ಆಮೆ ಗತಿಯಲ್ಲಿ ಸಾಗುತ್ತಿರುವ ಆ ರಂಗಮಂದಿರ ಕಟ್ಟಡದ ಕಾಮಗಾರಿ ಕಳೆದ 12 ವರ್ಷಗಳಿಂದ ನಡೆಯುತ್ತಲೇ ಇದೆ. ಹೀಗಾಗಿ ಶೀಘ್ರದಲ್ಲೇ ಕಟ್ಟಡ ಪೂರ್ಣಗೊಳಿಸಿ ಕಲಾವಿದರ ಬಳಕೆಗೆ ಕೊಡಿ ಎಂದು ಜನರು ಒತ್ತಾಯಿಸಿದ್ದಾರೆ.

12 ವರ್ಷಗಳಿಂದ ಸಾಗುತ್ತಿದೆ ರಂಗಮಂದಿರ ಕಟ್ಟಡ ಕಾಮಗಾರಿ; ನಿರ್ಲಕ್ಯಕ್ಕೆ ಕಲಾವಿದರ ಆಕ್ರೋಶ
12 ವರ್ಷಗಳಿಂದ ಸಾಗುತ್ತಿದೆ ರಂಗಮಂದಿರ ಕಟ್ಟಡ ಕಾಮಗಾರಿ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಆಯೇಷಾ ಬಾನು

Updated on: Jul 23, 2024 | 2:26 PM

ಬಳ್ಳಾರಿ, ಜುಲೈ.23: ಗಣಿನಾಡು ಬಳ್ಳಾರಿ ರಂಗ ಕಲಾವಿದರಿಗೆ ಬಹಳ ಫೇಮಸ್. ಇಲ್ಲಿ ಬಯಲಾಟ, ಪೌರಾಣಿಕ ನಾಟಕಗಳು ಸಹಸ್ರ ವರ್ಷಗಳಿಂದ ಉಳಿಸಿಕೊಂಡು, ಬೆಳೆಸಿಕೊಂಡು ಬಂದ ಜಿಲ್ಲೆ ಇದು. ಹೀಗಾಗಿಯೇ ಇಲ್ಲಿನ ರಂಗಭೂಮಿ ಕಲಾವಿದರ ಪ್ರೋತ್ಸಾಹಕ್ಕಾಗಿ 2011ರಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ರಾಜ್ಯ ಸರ್ಕಾರದ ವತಿಯಿಂದ ರಂಗಮಂದಿರ ಕಟ್ಟಲು ಒಂದು ಕೋಟಿ ಹಣ ಬಿಡುಗಡೆ ಮಾಡುವುದಕ್ಕೆ ಭರವಸೆ ಕೊಟ್ಟಿದ್ದರು. ನಂತರದಲ್ಲಿ 50 ಲಕ್ಷದಂತೆ ಎರಡು ಕಂತಿನಲ್ಲಿ ಹಣವನ್ನ ಸಹ ಬಿಡುಗಡೆ ಮಾಡಿದರು. ಆದರೆ ರಂಗಮಂಟಪ ಕಟ್ಟುವಲ್ಲಿ ಹಲವು ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ಇದೀಗ ಇದು ಆಮೆಗತಿಯಲ್ಲಿ ಸಾಗಿದೆ.

2011ರಲ್ಲಿ ಬಳ್ಳಾರಿ ಪ್ರಾಧಿಕಾರವು ಸಿಎ ಸೈಟ್ ಅಡಿ ಕೇವಲ ಆರು ತಿಂಗಳ ಅಡಿ ಅಂತರದಲ್ಲಿ ರಿಜಿಸ್ಟರ್ ಆಗಿರುವ ರಂಗತೋರಣಕ್ಕೆ ಕಟ್ಟಡ ಕಟ್ಟಲು ಜಾಗ ನೀಡಿದ್ದು ನಿಯಮವಳಿ ಪ್ರಕಾರ ತಪ್ಪಾಗಿದೆ‌‌. ಹೀಗಿದ್ದು ನಿಯಮಗಳನ್ನು ಉಲ್ಲಂಘನೆ ಮಾಡಿ ಕಟ್ಟುತ್ತಿರುವ ರಂಗಮಂದಿರ ಈವರಗೆ ಪೂರ್ಣಗೊಂಡಿಲ್ಲ. ಹೀಗಾಗಿ ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಧಿಕಾರ ದುರುಪಯೋಗದ ಬಗ್ಗೆ ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ: ಕುಮಾರಸ್ವಾಮಿ

ರಂಗತೋರಣ ಟ್ರಸ್ಟ್‌ಗೆ ಅನುದಾನ ಬಿಡುಗಡೆಯಾಗುವ ಮುನ್ನ ಇನ್ನೊಂದು ರಂಗಮಂದಿರಕ್ಕೆ ಈ ಹಣ ಬಿಡುಗಡೆಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದರು. ಆದರೆ ರಂಗತೋರಣ ಟ್ರಸ್ಟ್ ಕಮಿಟಿ ರಾಜಕೀಯ ಪ್ರಭಾವ ಬಳಸಿ ಇವರಿಗೆ ಹಣ ಬಿಡುಗಡೆಯಾಗುವಂತೆ ಮಾಡಿದ್ದಾರೆ. ಹೀಗಾಗಿ ಇದು ಅಪ್ಪಟ್ಟ ಮೋಸ ಎನ್ನುವುದು ಇನ್ನೊಂದು ಕಲಾವಿದರ ಗುಂಪಿನ ಆರೋಪವಾಗಿದೆ. ಇನ್ನು 2011ರಿಂದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಸರ್ಕಾರದಿಂದ ಒಂದು ಕೋಟಿ ಹಣ ಬಿಡುಗಡೆಯಾಗುದಲ್ಲದೆ ರಾಜಕಾರಣಿಗಳು, ಕಲಾ ಆಸಕ್ತಿವುಳ್ಳವರು ಸೇರಿ 65 ಲಕ್ಷ ರೂ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಇಷ್ಟು ಹಣ ಸಂದಾಯವಾದರೂ ಕಟ್ಟಡ ಕಾಮಗಾರಿ ಮಾತ್ರ ಆಮೆಗತಿಯಲ್ಲಿದೆ. ಹೀಗಾಗಿ ರಂಗಭೂಮಿ ಕಲಾವಿದರು ಕಮಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌‌. ಇನ್ನು ಇದರಲ್ಲಿ ಹಗರಣ ವಾಸನೆ ಬರುತ್ತಿದೆ. ಈ ಕುರಿತು ಸೂಕ್ತ ತನಿಖೆ ಆಗಬೇಕು ಅಂತಾ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ನಾಡು ನುಡಿ ಪರಂಪರೆಯ ಕಲೆಗಳನ್ನ ಉಳಿಸುವ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಅನುದಾನ ಕೊಟ್ಟರೇ 12 ವರ್ಷಗಳು ಕಳೆದರು ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸಿ ಅದೇನಾಗಿದೆ ಅಂತಾ ಪರಿಶೀಲನೆ ಮಾಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ