AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ.27ಕ್ಕೆ ಬೆಂಗಳೂರು ಮೆಟ್ರೋ ಬ್ಲಾಸ್ಟ್ ಮಾಡ್ತೇವೆ: ಖಲಿಸ್ತಾನ್ ಉಗ್ರರ ಹೆಸರಲ್ಲಿ ಮಹಾನಗರ ಪಾಲಿಕೆಗೆ ಆತಂಕಕಾರಿ ಬಾಂಬ್ ಬೆದರಿಕೆ ಇ-ಮೇಲ್

ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ ಮಹಾನಗರ ಪಾಲಿಕೆಗಳಿಗೆ ಇಂದು ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ತೀವ್ರ ಆತಂಕ ಮೂಡಿಸಿದೆ. ಖಲಿಸ್ತಾನ್ ಹೆಸರಿನಲ್ಲಿ ಬಂದ ಈ ಬೆದರಿಕೆ, ಬೆಂಗಳೂರಿನ ದಿಲ್‌ಜಿತ್ ದೋಸಾಂಜ್ ಕಾರ್ಯಕ್ರಮ, ಮೆಟ್ರೋ ಹಾಗೂ ನಟ ಅಮಿತಾಭ್ ಬಚ್ಚನ್ ಮನೆಗೂ ಗುರಿ ಇಟ್ಟಿದೆ. ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳದಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿವೆ. ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.

ನ.27ಕ್ಕೆ ಬೆಂಗಳೂರು ಮೆಟ್ರೋ ಬ್ಲಾಸ್ಟ್ ಮಾಡ್ತೇವೆ: ಖಲಿಸ್ತಾನ್ ಉಗ್ರರ ಹೆಸರಲ್ಲಿ ಮಹಾನಗರ ಪಾಲಿಕೆಗೆ ಆತಂಕಕಾರಿ ಬಾಂಬ್ ಬೆದರಿಕೆ ಇ-ಮೇಲ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 09, 2026 | 2:49 PM

Share

ಹುಬ್ಬಳ್ಳಿ, ನ,9: ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ ಹಾಗೂ ಬೆಳಗಾವಿಯ ಮಹಾನಗರ ಪಾಲಿಕೆ ಕಚೇರಿಗಳಿಗೆ ಇಂದು (ನವೆಂಬರ್ 09) ಸರಣಿ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದು, ಭಾರಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಪಾಲಿಕೆ ಆಯುಕ್ತರ ಅಧಿಕೃತ ಇ-ಮೇಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶಗಳು ತಲುಪಿದ್ದು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ರಂಗಕ್ಕಿಳಿದು ತೀವ್ರ ತಪಾಸಣೆ ನಡೆಸಿವೆ.

ಹುಬ್ಬಳ್ಳಿಗೆ ಬಂದಿರುವ ಇ-ಮೇಲ್‌ನಲ್ಲಿ ಖಲಿಸ್ತಾನ್ ಉಗ್ರ ಸಂಘಟನೆಗಳ ಹೆಸರು, ಬೆಂಗಳೂರಿನ ನೈಸ್ (NICE) ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್‌ಜಿತ್ ದೋಸಾಂಜ್ ಕಾರ್ಯಕ್ರಮ, ಬೆಂಗಳೂರು ಮೆಟ್ರೋ ಹಾಗೂ ನಟ ಅಮಿತಾಭ್ ಬಚ್ಚನ್ ಮನೆಗೆ ಬೆದರಿಕೆ ಹಾಕಿರುವ ಗಂಭೀರ ವಿಷಯಗಳು ಬೆಳಕಿಗೆ ಬಂದಿವೆ.

ಬೆಳಗಾವಿ ಮಹಾನಗರ ಪಾಲಿಕೆಗೆ ಬೆದರಿಕೆ

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಅವರಿಗೆ ಬಂದ ಇ-ಮೇಲ್‌ನಲ್ಲಿ, “ಪಾಲಿಕೆ ಕಟ್ಟಡದಲ್ಲಿ ಬಾಂಬ್ ಇಡಲಾಗಿದ್ದು, ಮಧ್ಯಾಹ್ನ 1.15ಕ್ಕೆ ಸ್ಫೋಟಿಸಲಾಗುವುದು” ಎಂದು ಅಪರಿಚಿತರು ಹೆದರಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಆತಂಕ ನೆಲೆಸಿದೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕಾಲಿಮಿರ್ಜಿ ನೇತೃತ್ವದ ತಂಡ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಧಾವಿಸಿ, ಕಚೇರಿಯ ಇಂಚಿಂಚೂ ಜಾಗವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿವೆ.

ಇದನ್ನೂ ಓದಿ: ಅಮೆರಿಕ ಡಾಲರ್ ಎದುರು ಜಿಗಿಜಿಗಿಯುತ್ತಿರುವ ರುಪಾಯಿ; 7 ತಿಂಗಳ ಗರಿಷ್ಠ ಮೌಲ್ಯ ಮಟ್ಟ ತಲುಪಿದ ಭಾರತದ ಕರೆನ್ಸಿ

ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಇ-ಮೇಲ್: ಖಲಿಸ್ತಾನ್ ಹೆಸರು, ಬೆಂಗಳೂರಿಗೆ ಬಿಗ್ ಅಲರ್ಟ್

ಇಂದು ಬೆಳಿಗ್ಗೆ 11:35ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ವೆಯಿಟ್ ಸ್ಮಿತ್ ಎಂಬ ಐಡಿಯಿಂದ ದೀರ್ಘವಾದ ಆಘಾತಕಾರಿ ಬೆದರಿಕೆ ಇ-ಮೇಲ್ ಬಂದಿದೆ. ಈ ಮೇಲ್‌ನಲ್ಲಿ ‘Khalistan National Army’ ಮತ್ತು ‘Babbar Khalsa (Parmar-Canada)’ ಹೆಸರುಗಳನ್ನು ಹಾಗೂ 1984ರ ಸಿಖ್ ನರಮೇಧದ ವಿಷಯವನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ. ನವೆಂಬರ್ 29 ರಂದು ಬೆಂಗಳೂರಿನ ನೈಸ್ (NICE) ಸೆಂಟರ್ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್‌ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಐಇಡಿ ಬಾಂಬ್ ಸ್ಫೋಟಿಸುವುದಾಗಿ ಹೆದರಿಸಲಾಗಿದೆ. ಸಾರ್ವಜನಿಕರು ಆ ದಿನ ನೈಸ್ ಗ್ರೌಂಡ್‌ಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಐಫೋನ್ ಕಂಡುಬಂದರೆ ಮುಟ್ಟದಂತೆ ಆತಂಕಕಾರಿ ಸೂಚನೆ ನೀಡಲಾಗಿದೆ.

ನವೆಂಬರ್ 27 ರಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮನೆ ಬಳಿ ಹಾಗೂ ನವೆಂಬರ್ 29 ರಂದು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 3:11 ರಿಂದ ರಾತ್ರಿ 11:11 ರ ಅವಧಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿಯೂ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ತೀವ್ರ ಪರಿಶೀಲನೆ ನಡೆಸುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ದೀಪಾವಳಿ ಪಟಾಕಿ ದುರಂತ: ಮೊದಲ ದಿನವೇ ಮಕ್ಕಳೂ ಸೇರಿ 32 ಮಂದಿಗೆ ಗಾಯ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ
ಇಂದು ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗೃತೆವಹಿಸಿ