AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಂ ಅಸೋಸಿಯೇಟ್ಸ್ ಹಗರಣ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! 427 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಇಡಿ ಮತ್ತೆ ಶಾಕ್ ನೀಡಿದೆ. 2,459 ಕೋಟಿ ರೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 427 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ, ಬ್ಯಾಂಕ್ ಖಾತೆ, FD ಸೇರಿ ಹಲವು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಾನಂದ ನೀಲಣ್ಣನವರ್ ಬಂಧಿತರಾಗಿದ್ದು, ತನಿಖೆ ಮುಂದುವರೆದಿದೆ.

ಶಿವಂ ಅಸೋಸಿಯೇಟ್ಸ್ ಹಗರಣ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! 427 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಶಿವಾನಂದ ನೀಲಣ್ಣನವರ್‌
ರಾಚಪ್ಪಾಜಿ ನಾಯ್ಕ್
| Edited By: |

Updated on: Oct 31, 2026 | 5:04 PM

Share

ಮುಖ್ಯಾಂಶಗಳು

  • ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ED ಶಾಕ್
  • ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್ ಮಾಡಿದ ಇಡಿ
  • ಫಿಕ್ಸೆಡ್ ಡೆಪಾಸಿಟ್‌,‌ ಖಾತೆ, ಷೇರು ಹೂಡಿಕೆ, ಜಮೀನು, ಬಂಗಲೆ ಜಪ್ತಿ

ಬೆಂಗಳೂರು/ಬೆಳಗಾವಿ, ಅಕ್ಟೋಬರ್​​ 31: ಶಿವಂ ಅಸೋಸಿಯೇಟ್ಸ್​ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ) ಬಿಗ್​ ಶಾಕ್​ ನೀಡಿದೆ. ಹೂಡಿಕೆದಾರರಿಂದ ಬರೋಬ್ಬರಿ 2,459 ಕೋಟಿ ರೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಫಿಕ್ಸೆಡ್​​ ಡೆಪಾಸಿಟ್​, ಬ್ಯಾಂಕ್​​ ಖಾತೆಗಳಲ್ಲಿನ ಹಣ, ಷೇರು ಹೂಡಿಕೆ, ಕೃಷಿ ಜಮೀನು ಹಾಗೂ ಬಂಗಲೆ ಸೇರಿದಂತೆ ವಿವಿಧ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

47 ಬ್ಯಾಂಕ್ ಖಾತೆಗಳಲ್ಲಿದ್ದ 44 ಕೋಟಿ ರೂ ಸೀಜ್

ಇಡಿ ಅಧಿಕಾರಿಗಳು ಒಟ್ಟು 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಈ ಪೈಕಿ 367 ಕೋಟಿ ರೂ ಮೌಲ್ಯದ ಫಿಕ್ಸೆಡ್​ ಡೆಪಾಸಿಟ್​ಗಳು, 47 ಬ್ಯಾಂಕ್​ ಖಾತೆಗಳಲ್ಲಿದ್ದ 44 ಕೋಟಿ ರೂ ಹಣ, 13 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಗಳು ಹಾಗೂ ಷೇರು ಮಾರುಕಟ್ಟೆಯಲ್ಲಿನ 1.31 ಕೋಟಿ ರೂ ಹೂಡಿಕೆ ಸೇರಿದೆ.

ಇ.ಡಿ ಟ್ವೀಟ್​

ಶಿವಂ ಅಸೋಸಿಯೇಟ್ಸ್ ಸಂಸ್ಥೆಯು 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಂದ ಬರೋಬ್ಬರಿ 2,459 ಕೋಟಿ ರೂ ಹಣ ಸಂಗ್ರಹಿಸಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ತಿಳಿದುಬಂದ ಹಿನ್ನೆಲೆ ಇ.ಡಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.

ಆಗಸ್ಟ್‌ನಲ್ಲಿ 8 ಸ್ಥಳಗಳಲ್ಲಿ ಇಡಿ ದಾಳಿ

ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಒಟ್ಟು ಎಂಟು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಕೈಬರಹದ ಲೆಕ್ಕಪತ್ರಗಳು, ಮೊಬೈಲ್​ಗಳು ಸೇರಿದಂತೆ ಹಲವು ಡಿಜಿಟಲ್​​ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹಣವನ್ನು ಹೇಗೆ ಸಂಗ್ರಹಿಸಲಾಗಿದೆ, ಯಾವ ರೀತಿ ವರ್ಗಾವಣೆ ಮಾಡಲಾಗಿದೆ ಮತ್ತು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ಮಾಡಲಾಗಿತ್ತು.

ಇದನ್ನೂ ಓದಿ: ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ಹಗರಣ: ಕೋರ್ಟ್​​ಗೆ ಇಡಿಯಿಂದ ವರದಿ ಸಲ್ಲಿಕೆ

ಇನ್ನು ಪ್ರಕರಣ ಸಂಬಂಧ ಶಿವಾನಂದ ನೀಲಣ್ಣನವರ್​​ರನ್ನು ಆಗಸ್ಟ್ 8ರಂದು ಬಂಧಿಸಲಾಗಿತ್ತು. ಬಳಿಕ ತನಿಖೆ ಮುಂದುವರಿಸಿದ್ದ ಇಡಿ ಅಧಿಕಾರಿಗಳು, ಅಕ್ಟೋಬರ್ 9ರಂದು ಶಿವಾನಂದ ನೀಲಣ್ಣನವರ್ ಸೇರಿದಂತೆ ಐವರ ವಿರುದ್ಧ ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

LIVE TV

ಷೇರು ಮಾರುಕಟ್ಟೆ ಹೂಡಿಕೆಯಿಂದ 185.95 ಕೋಟಿ ರೂ ನಷ್ಟ

ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಈ ಹೂಡಿಕೆಗಳಿಂದ 185.95 ಕೋಟಿ ರೂ ನಿವ್ವಳ ನಷ್ಟ ಉಂಟಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಲ್ಲದೆ, ಸುಮಾರು 25 ಕೋಟಿ ರೂ ಹಣವನ್ನು ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ವರ್ಗಾವಣೆ ಮಾಡಿರುವುದೂ ಪತ್ತೆಯಾಗಿದೆ.

ಸಹಚರರ ಹೆಸರಿನಲ್ಲಿ ಸಾಲ ಪಡೆದು ಜಮೀನು ಖರೀದಿ

ತನಿಖೆ ವೇಳೆ ಹಣ ವರ್ಗಾವಣೆಗೆ ಸಂಬಂಧಿಸಿದ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಫಿಕ್ಸೆಡ್ ಡೆಪಾಸಿಟ್‌ಗಳನ್ನು ಸೃಷ್ಟಿಸಿ, ಅವುಗಳ ಆಧಾರದ ಮೇಲೆ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಈ ಸಾಲದ ಹಣವನ್ನು ಜಮೀನು ಖರೀದಿಸಲು ಬಳಸಲಾಗಿದೆ ಎಂದು ಇಡಿ ತನಿಖೆಯಲ್ಲಿ ತಿಳಿದುಬಂದಿದೆ. ಇಷ್ಟೇ ಅಲ್ಲದೆ ಶಿವಾನಂದ ನೀಲಣ್ಣನವರ್ ಪತ್ನಿ ಸಂಗೀತಾ ಮತ್ತು ಮಗ ಸಿದ್ಧಾಂತ್​ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೀಗ ಪ್ರಕರಣದ ತನಿಖೆಯ ಭಾಗವಾಗಿ ಒಟ್ಟು 427 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್
ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್
ಕಾಗೋಡು ತಿಮ್ಮಪ್ಪಗೆ ಡಿಕೆಶಿ​ ವಿಡಿಯೋ ಕಾಲ್​​: ಆರೋಗ್ಯ ವಿಚಾರಿಸಿದ ಸಿಎಂ
ಕಾಗೋಡು ತಿಮ್ಮಪ್ಪಗೆ ಡಿಕೆಶಿ​ ವಿಡಿಯೋ ಕಾಲ್​​: ಆರೋಗ್ಯ ವಿಚಾರಿಸಿದ ಸಿಎಂ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ